ಪ್ರಶಸ್ತಿ ಹಿಂಪಡೆಯುವ ಮೂಲಕ ಸರಕಾರ ಉಡುಪಿ ಜಿಲ್ಲೆಗೆ ಅವಮಾನ ಮಾಡಿದೆ : ಯಶ್‌ಪಾಲ್ ಸುವರ್ಣ

ಉಡುಪಿ : ಕುಂದಾಪುರದ ರಾಮಕೃಷ್ಣ ಬಿ.ಜಿ ಅವರಿಗೆ ಉತ್ತಮ ಪ್ರಾಂಶುಪಾಲ ಪ್ರಶಸ್ತಿ ನೀಡಿ ಬಳಿಕ ಸರಕಾರ ವಾಪಸ್ ಪಡೆದ ಬಗ್ಗೆ ಉಡುಪಿ ಶಾಸಕ ಸುವರ್ಣ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಪ್ರಶಸ್ತಿಗೆ ರಾಮಕೃಷ್ಣ ಅವರು ಅರ್ಹರಾಗಿದ್ದರು. ಹಿಜಾಬ್ ಸಂದರ್ಭದಲ್ಲಿ ಪ್ರಾಂಶುಪಾಲರು ಯಾವುದೇ ರಾಜಕೀಯ ಮಾಡಿರಲಿಲ್ಲ. ಪ್ರಾಂಶುಪಾಲರಾಗಿ ತಮ್ಮ ಕರ್ತವ್ಯವನ್ನು ನಿರ್ವಹಣೆ ಮಾಡಿದ್ದರು. ಸರ್ಕಾರದ ನಿಯಮದಂತೆ ತರಗತಿ ನಡೆಯಬೇಕು, ಎಲ್ಲ ವಿದ್ಯಾರ್ಥಿಗಳು ಸರಿಸಮಾನವಾಗಿ ಯೂನಿಫಾರ್ಮ್ ಹಾಕಿ ಬರಬೇಕು ಎಂಬ ಕಾರಣಕ್ಕೆ ಹಿಜಾಬ್ ಧರಿಸುವುದಕ್ಕೆ ನಿರ್ಬಂಧವನ್ನು ಹಾಕಿದ್ದರು. ಇದು ಪ್ರಾಂಶುಪಾಲರ ವೈಯಕ್ತಿಕ ನಿರ್ಧಾರವಲ್ಲ. ಆದರೆ ಇದೇ ವಿಷಯ ಇಟ್ಡುಕೊಂಡು ಆಯ್ಕೆ ಪಟ್ಟಿ ತಯಾರಾಗಿ ಘೋಷಣೆಯಾದ ನಂತರ ಪ್ರಶಸ್ತಿಯನ್ನು ತಡೆ ಹಿಡಿಯಲಾಗಿದೆ. ಪ್ರಶಸ್ತಿಯನ್ನು ಹಿಂಪಡೆದು ಒಂದು ಸಮುದಾಯದ ಓಲೈಕೆ ನಡೆಯುತ್ತಿದೆ.ಇ ದು ಉಡುಪಿ ಜಿಲ್ಲೆಗೆ-ಶಿಕ್ಷಕ ವೃತ್ತಿಗೆ ಮಾಡಿದ ಅನ್ಯಾಯ. ಸಿದ್ದರಾಮಯ್ಯ ಸರ್ಕಾರ ಉಡುಪಿ ಜಿಲ್ಲೆಗೆ ಅವಮಾನ ಮಾಡಿದೆ. ಸರಕಾರ ಕ್ಷಮೆ ಕೋರಿ ಅವರಿಗೆ ಸಿಗಬೇಕಾದ ಗೌರವವನ್ನು ನೀಡಬೇಕು ಎಂದು ಒತ್ತಾಯಿಸಿದ್ದಾರೆ.

Related posts

ಅಣ್ಣನಿಂದ ಲಕ್ಷಾಂತರ ರೂ. ಚಿನ್ನ ಪಡೆದು ತಂಗಿಯಿಂದಲೇ ವಂಚನೆ

ಬೆಳಕು ಮೀನುಗಾರಿಕೆ ಹಾಗೂ ಬುಲ್‌ಟ್ರಾಲ್ ಮೀನುಗಾರಿಕೆ ನಿಷೇಧ – ಉಲ್ಲಂಘಿಸಿದರೆ ಕಠಿಣ ಕ್ರಮ

ಮಾ.31ರಂದು ಬಜೆಟ್‌ನಲ್ಲಿ ಉಡುಪಿ ಜಿಲ್ಲೆಗೆ ಮಲತಾಯಿ ಧೋರಣೆ ತೋರಿದ ರಾಜ್ಯ ಕಾಂಗ್ರೆಸ್ ಸರಕಾರದ ವಿರುದ್ಧ ಪ್ರತಿಭಟನೆ