ಬೀದಿಬದಿಯಲ್ಲಿ ಕೊಳೆತ ಕುರಿಗಳ ಕಳೇಬರವನ್ನು ಎಸೆದು ಪರಾರಿಯಾದ ಕಟುಕರು

ಸುರತ್ಕಲ್ : ಇಲ್ಲಿನ ಮುಕ್ಕ ಭಾಗದಲ್ಲಿ ಹಳೆ ಟೋಲ್‌ಗೇಟ್ ಬಳಿಯ ಸರ್ವಿಸ್ ರಸ್ತೆಯಲ್ಲಿ ಕೊಳೆತ ಕುರಿಗಳ ಕಳೇಬರವನ್ನು ಕಟುಕರು ಎಸೆದು ಪರಾರಿಯಾದ ಘಟನೆ ನಡೆದಿದೆ.

ಸತ್ತು ಕೊಳೆತ ಸ್ಥಿತಿಯಲ್ಲಿ ಪತ್ತೆಯಾದ ನಾಲ್ಕೈದು ಕುರಿಗಳ ಕಳೇಬರವನ್ನು ನಗರಪಾಲಿಕೆಯ ಕಾರ್ಮಿಕರ ಸಹಾಯದಿಂದ ಮಣ್ಣು ಮಾಡುವ ಕಾರ್ಯ ನಡೆದಿದೆ.

ವಧೆಯಾಗಿರುವ ಕುರಿಗಳು ಮೃತದೇಹ ಕೊಳೆತ ಬಳಿಕ ಎಸೆದು ಹೋಗಿರಬಹುದು ಎಂದು ಶಂಕಿಸಲಾಗಿದೆ. ಆದರೆ ರೋಗ ಉಲ್ಬಣವಾಗುವ ಮಳೆಗಾಲದಲ್ಲಿ ಈ ರೀತಿಯ ಕೃತ್ಯ ಎಸಗಿರುವವರ ಮೇಲೆ ಕಠಿಣ ಕ್ರಮ ಜರುಗಿಸಬೇಕೆಂದು ಸ್ಥಳೀಯರು ಆಗ್ರಹಿಸುತ್ತಿದ್ದಾರೆ. ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ ತಕ್ಷಣ ಈ ಬಗ್ಗೆ ತನಿಖೆ ನಡೆಸಬೇಕೆಂಬ ಆಗ್ರಹವೂ ಕೇಳಿ ಬಂದಿದೆ.

Related posts

Worlds Fastest Bhagvad Gita Writer Completing 18 Chapters & 700 Verses in Just 5.30 Hours

ಕಚೇರಿಯ ಎದುರು ನಿಲ್ಲಿಸಿದ್ದ ಬೈಕ್‌ ಕಳವು

ಷೇರು ಟ್ರೇಡಿಂಗ್‌ ಹೆಸರಲ್ಲಿ 38,53,961 ರೂ. ವಂಚನೆ