ಉಡುಪಿ ನಗರದ ಜನರ ಬಸ್ ರೂಟ್ ಗೊಂದಲ ನಿವಾರಣೆ – 15 ವರ್ಷಗಳ ಸಮಸ್ಯೆಗೆ ಪರಿಹಾರ

ಉಡುಪಿ : ಅಂಬಾಗಿಲು ಗುಂಡಿಬೈಲು ಭಾಗದ ಜನರ ಬಸ್ಸಿನ ಸಮಸ್ಯೆ ಪರಿಹಾರಗೊಡಿದೆ.

ಅಂಬಾಗಿಲು ಗುಂಡಿ ಬೈಲ್‌ನಿಂದ ಉಡುಪಿಗೆ ಹೋಗುವ ಪರವಾನಿಗೆ ಇದ್ದರೂ ಬಸ್ಸುಗಳು ಅಂಬಾಗಿಲು ನಿಟ್ಟೂರು ಬನ್ನಂಜೆಯಿಂದ ಉಡುಪಿಗೆ ಹಾದು ಹೋಗುತ್ತಿದ್ದವು. ಆದ್ದರಿಂದ ಅಂಬಾಗಿಲು ಗುಂಡಿಬೈಲು ಭಾಗದ ಜನರಿಗೆ 15 ವರ್ಷಗಳಿಂದ ಬಸ್ಸಿನ ಸಮಸ್ಯೆ ಕಾಡುತ್ತಿತ್ತು. ಈ ಸಮಸ್ಯೆಗೆ ಈಗ ಮುಕ್ತಿ ಸಿಕ್ಕಿದೆ.

ಇಂದು ಬೆಳಿಗ್ಗೆ ಬಸ್ಸುಗಳನ್ನು ಅಂಬಾಗಿಲು ಜಂಕ್ಷನ್‌ನಲ್ಲಿ ನಿಲ್ಲಿಸಿ ಬಸ್ಸುಗಳಿಗೆ ನಾಮಫಲಕ ಅಳವಡಿಸಿ ಬಸ್ ಸಿಬ್ಬಂದಿಯೊಂದಿಗೆ ಇನ್ನು ಮುಂದೆ ಗುಂಡಿಬೈಲು ಕಲ್ಸಂಕದಿಂದ ಉಡುಪಿಗೆ ಹಾದು ಹೋಗಬೇಕಾಗಿ ವಿನಂತಿಸಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಆರ್‌ಟಿ‌ಓ ಅಧಿಕಾರಿಗಳು, ನಗರಸಭಾ ಅಧ್ಯಕ್ಷರಾದ ಪ್ರಭಾಕರ್ ಪೂಜಾರಿ, ಕಕ್ಕುಂಜೆ ವಾರ್ಡಿನ ನಗರಸಭಾ ಸದಸ್ಯರಾದ ಬಾಲಕೃಷ್ಣ ಶೆಟ್ಟಿ, ಕರಂಬಳ್ಳಿ ವಾರ್ಡ್ ನಗರಸಭಾ ಸದಸ್ಯರಾದ ಗಿರಿಧರ್ ಆಚಾರ್ಯ ಹಾಗೂ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.

Related posts

ಸಿಬ್ಬಂದಿಗಳಿಗೆ ಝೂನೋಟಿಕ್ ರೋಗಗಳ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕುರಿತ ತರಬೇತಿ ಸಾಧನಗಳನ್ನು ಪ್ರಾರಂಭಿಸಿದ ಪ್ರಸನ್ನ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್

ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಉಡುಪಿ ಜಿಲ್ಲೆಯ ಪ್ರತಿಭಾವಂತ ವಿದ್ಯಾರ್ಥಿ ದೀಪೇಶ್ ದೀಪಕ್ ಶೆಣೈ ದ್ವಿತೀಯ

ನೇಜಾರಿನ ತಾಯಿ ಮತ್ತು ಮೂವರು ಮಕ್ಕಳ ಕೊಲೆ ಪ್ರಕರಣ – ತಮ್ಮ ವಕಾಲತ್ತನ್ನು ವಾಪಾಸು ಪಡೆದ ಆರೋಪಿ ಪ್ರವೀಣ್ ಚೌಗುಲೆ ಪರ ವಕೀಲರು