ಮಧ್ಯಮ ವರ್ಗದವರಿಗೆ ಸಂತೃಪ್ತಿ ತಂದ ಬಜೆಟ್ : ನಿವೃತ್ತ ಪ್ರೊ. ಕೊಕ್ಕರ್ಣೆ ಸುರೇಂದ್ರನಾಥ್ ಶೆಟ್ಟಿ ವಿಶ್ಲೇಷಣೆ

ಉಡುಪಿ : ಈ ಬಾರಿಯ ಕೇಂದ್ರ ಸರ್ಕಾರ ಮಂಡಿಸಿದ ಆಯವ್ಯಯ ಲೆಕ್ಕಾಚಾರ ಬಹುಮುಖ್ಯವಾಗಿ ಮಧ್ಯಮ ವರ್ಗದವರನ್ನು ಖುಷಿಪಡಿಸಿದೆ ಅನ್ನುವುದು ಮೇಲ್ನೋಟಕ್ಕೆ ವ್ಯಕ್ತವಾಗುತ್ತದೆ ಎಂದು ನಿವೃತ್ತ ಪ್ರೊಫೆಸರ್ ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ವಿಶ್ಲೇಷಣೆ ಮಾಡಿದ್ದಾರೆ.

ಬಹುಮುಖ್ಯವಾಗಿ ವೇತನ ಪಡೆಯುವವರಿಗೆ ಆದಾಯ ತೆರಿಗೆ ಮಿತಿಯನ್ನು 12 ಲಕ್ಷಕ್ಕೆ ಏರಿಸಿರುವುದು ಸಂತಸ ತಂದಿದೆ. ಆದರೆ ಇಡೀ ಬಜೆಟ್‌ನಲ್ಲಿ ಬಿಹಾರಕ್ಕೆ ಹೆಚ್ಚಿನ ಒತ್ತುಕೊಟ್ಟಿರುವುದು ಎದ್ದು ಕಾಣುತ್ತದೆ. ಇದು ಪ್ರಾದೇಶಿಕ ಅಸಮತೇೂಲನ ಭಾವ ಸೃಷ್ಟಿ ಮಾಡುತ್ತದೆ. ಐ.ಐ.ಟಿ, ಗ್ರೀನ್‌ಫಿಲ್ಡ್ ಏರ್ ಫೇೂರ್ಟ್ ವಿಸ್ತರಣೆ, 50ಸಾವಿರ ಹೆಕ್ಟೇರ್ ಭೂಮಿಗೆ ನೀರಾವರಿ ಸೌಕರ್ಯ.. ಇವೆಲ್ಲವೂ ಕೇಂದ್ರ ಸರ್ಕಾರದಲ್ಲಿ ನಿತೀಶ್ ಕುಮಾರ್ ರವರ ಪ್ರಭಾವ ಎಷ್ಟಿದೆ ಅನ್ನುವುದಕ್ಕೆ ನಿದರ್ಶನವೆಂದೇ ಹೇಳಬೇಕು. ಹಾಗಾಗಿ ಪ್ರಾದೇಶಿಕ ಅಸಮತೇೂಲನ ಬಜೆಟ್ ಹಂಚಿಕೆಯಲ್ಲಿ ಎದ್ದು ಕಾಣುತ್ತಿದೆ.

ಅಗತ್ಯ ಔಷಧಿ ಉಪಕರಣಗಳ ತೆರಿಗೆ ವಿನಾಯಿತಿ ಶ್ಲಾಘನೀಯ. ಅಂಗನವಾಡಿ ಪರಿಸರ ಪರಿಕರಗಳ ಬಗ್ಗೆ ಒತ್ತು ಕೊಡಲಾಗಿದೆಯೇ ಹೊರತು ಅಂಗನವಾಡಿ ಕಾರ್ಯಕರ್ತರ ಬದುಕಿನ ಬಗ್ಗೆ ಎಲ್ಲೂ ಕೂಡಾ ಉಲ್ಲೇಖವೇ ಇಲ್ಲ. ಮಕ್ಕಳ ಆಟಿಕೆಗಳ ಉತ್ಪಾದನೆಯಲ್ಲಿ ಮೇಕ್ ಇನ್ ಇಂಡಿಯಾಕ್ಕೆ ಹೆಚ್ಚಿನ ಆದ್ಯತೆ ನೀಡಿರುವುದು ಶ್ಲಾಘನೀಯ. ಆದರೆ ಗುಣಮಟ್ಟದ ಸುಧಾರಣೆಗೆ ಯಾವುದೇ ಮಹತ್ವ ಕಾಣಲಿಲ್ಲ. ಹಿರಿಯ ನಾಗರಿಕರ ಟಿ.ಡಿ.ಎಸ್. ಮಿತಿಯನ್ನು ಒಂದು ಲಕ್ಷಕ್ಕೆ ಏರಿಸಿರುವುದು ಹಿರಿಯರಿಗೆ ಹೆಚ್ಚಿನ ನೆಮ್ಮದಿ ತಂದಿದೆ. ಒಟ್ಟಿನಲ್ಲಿ ಸಮಿಶ್ರ ಸರಕಾರದ ಬಜೆಟ್ ಸಮಿಶ್ರವಾದ ಸಂತೃಪ್ತಿ ತಂದಿದೆ.

Related posts

ರಂಗೋಲಿ ಕಲಾ ಸಾಧಕಿ, ಭಾರತಿ ಮರವಂತೆಗೆ ‘ಮಧುರಚೆನ್ನ ರಾಜ್ಯ ಪ್ರಶಸ್ತಿ’ ಪ್ರದಾನ

ಮೂಡಲಪಾಯ ಯಕ್ಷಗಾನದ ಅಭ್ಯುದಯವನ್ನು ಬೆಂಬಲಿಸಲು ಅಕಾಡೆಮಿ ಬದ್ಧವಾಗಿದೆ : ಡಾ. ತಲ್ಲೂರು

National Fame Award of India Books of Award – Sushanth Brahmavar