ರೇಸ್‌ನಲ್ಲಿ ಬೈಕ್ ಪಲ್ಟಿ – ರೇಸರ್ ಬೀಳುತ್ತಿರುವ ಭಯಾನಕ ವೀಡಿಯೋ ವೈರಲ್

ಬೆಳ್ತಂಗಡಿ : ಬೈಕ್ ರೇಸ್‌ನಲ್ಲಿ ಬೈಕೊಂದು ಪಲ್ಟಿಯಾಗಿ ರೇಸರ್ ಬೈಕ್‌ ಮೇಲೆಯೇ ಬೀಳುವ ವೀಡಿಯೋವೊಂದು ವೈರಲ್ ಆಗಿದೆ.

ಕಾವಳಕಟ್ಟೆ ನಿವಾಸಿ ನೌಶಾದ್ (23) ಗಾಯಗೊಂಡ ರೇಸರ್.

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಬಳ್ಳಮಂಜದಲ್ಲಿ ಸೋಮವಾರ ಬೈಕ್ ರೇಸ್ ನಡೆದಿತ್ತು. ಫಿಟ್ಟರ್ ಆಗಿರುವ ನೌಶಾದ್ ಈ ರೇಸ್‌ನಲ್ಲಿ ಬೈಕ್ ರೇಸರ್ ಆಗಿ ಪಾಲ್ಗೊಂಡಿದ್ದರು. ರೇಸ್‌ನಲ್ಲಿ ವೇಗವಾಗಿ ಬಂದ ಬೈಕ್ ಜಂಪಿಂಗ್ ಮಾಡುತ್ತಿದ್ದಾಗ ನೇರವಾಗಿ ನಿಲ್ಲುವ ಬದಲು ಕುಸಿದು ಬಿದ್ದಿದೆ‌. ಈ ವೇಳೆ ನೌಶಾದ್ ಕೂಡಾ ಬೈಕ್ ಮೇಲೆಯೇ ಬಿದ್ದಿದ್ದಾರೆ. ಆದರೆ ಅದೃಷ್ಟವಶಾತ್ ಅವರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ‌. ಅವರು ಬೀಳುತ್ತಿರುವ ಭಯಾನಕ ವೀಡಿಯೋ ವೈರಲ್ ಆಗಿದೆ.

Related posts

ನಿಲ್ಲಿಸಿದ್ದ ಮೀನುಗಾರಿಕಾ ಬೋಟ್‌ನಲ್ಲಿ ಅಗ್ನಿ ಅವಘಡ – 15 ಲಕ್ಷ ರೂ.ನಷ್ಟ

ಸ್ಕೂಟರ್ ಹಾಗೂ ಗೂಡ್ಸ್ ರಿಕ್ಷಾ ಮುಖಮುಖಿ ಡಿಕ್ಕಿ – ಸವಾರ ಮೃತ್ಯು, ಸಹಸವಾರ ಗಂಭೀರ

ಫಾಸ್ಟ್‌ಟ್ಯಾಗ್‌ ಹೊಸ ನಿಯಮ ಜಾರಿ: ಕಡಿಮೆ ಬ್ಯಾಲೆನ್ಸ್ ಇದ್ರೆ ದುಪ್ಪಟ್ಟು ದಂಡ.!