ಬೈಕ್ ಕಾರು ಡಿಕ್ಕಿ – ತಾಯಿ ಮಗಳಿಗೆ ಗಾಯ

ಹಿರಿಯಡ್ಕ : ಸ್ಥಳೀಯರಾದ ದೀಪಕ್‌ (39) ಎಂಬವರು ತಮ್ಮ‌ ಬೈಕ್‌ನಲ್ಲಿ ಹೋಗುತ್ತಿದ್ದಾಗ ಎದುರಿನಿಂದ ಬಂದ ಕಾರು ಚಾಲಕ ಯಾವುದೇ ಸೂಚನೆ ನೀಡದೆ ರಸ್ತೆಯ ಬಲಭಾಗಕ್ಕೆ ಚಲಾಯಿಸಿದ ಪರಿಣಾಮ ಬೈಕ್ ಮತ್ತು ಕಾರು ಡಿಕ್ಕಿಯಾದ ಘಟನೆ ಬೊಮ್ಮರಬೆಟ್ಟು ಗ್ರಾಮದಲ್ಲಿ ಸಂಭವಿಸಿದೆ.

ಈ ವೇಳೆ ಬೈಕ್ ಹಿಂಬದಿ ಕುಳಿತಿದ್ದ ದೀಪಕ್ ಅವರ ಹೆಂಡತಿ ಆಶಾ ಮತ್ತು ಮಗಳು ಲಾಸ್ಯಳಿಗೆ ಗಾಯಗಳಾಗಿದೆ. ಸ್ಥಳೀಯರು ಗಾಯಾಳುಗಳನ್ನು ಮಣಿಪಾಲದ ಕೆಎಂಸಿ ಅಸ್ಪತ್ರೆಗೆ ದಾಖಲಿಸಿದ್ದಾರೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

ನೆಕ್ಲಾಜೆ ಶ್ರೀ ಕಾಳಿಕಾಂಬೆಗೆ ಸ್ವರ್ಣ ಪಾದುಕೆ ಸಮರ್ಪಣೆ

ಮೂಡುಬಿದಿರೆಯಲ್ಲಿ ಲ್ಯಾಪ್‌ ಟಾಪ್‌ ಕಳ್ಳತನ: ಅಂತರ್ ಜಿಲ್ಲಾ ಕಳ್ಳ ಅರೆಸ್ಟ್

ಶಾಸ್ತ್ರೀಪಾರ್ಕ್‌ ಫ್ಲೈಓವರ್‌ ತಳಭಾಗಕ್ಕೆ ಪೊಲೀಸ್‌ ನಿಯೋಜನೆ