ಇಂದು ಬಿಗ್ ಬಾಸ್ ಖ್ಯಾತಿಯ ಚೈತ್ರಾ ಕುಂದಾಪುರ ಮದುವೆ

ಕುಂದಾಪುರ : ಬಿಗ್ ಬಾಸ್ ಸೀಸನ್​-11ರಲ್ಲಿ ಖ್ಯಾತಿ ಪಡೆದಿದ್ದ ಚೈತ್ರಾ ಕುಂದಾಪುರ ಅವರು ದಾಂಪತ್ಯ ಜೀವನಕ್ಕೆ ಇಂದು(ಶುಕ್ರವಾರ) ಕಾಲಿಡುತ್ತಿದ್ದಾರೆ.

ಚೈತ್ರಾ ಕುಂದಾಪುರ ಅವರು ಮದುವೆ ಆಗುತ್ತಿರುವ ಹುಡುಗ ಯಾರು ಎನ್ನುವ ಕುತೂಹಲ ಎಲ್ಲರಲ್ಲೂ ಇದೆ. ಏಕೆಂದರೆ ಬಿಗ್​ ಬಾಸ್ ಬಳಿಕ ಖ್ಯಾತಿ ಪಡೆದಿರುವ ಚೈತ್ರಾ ಕುಂದಾಪುರ ಅವರು ಎಲ್ಲರಿಗೂ ಗೊತ್ತು. ಅದರಂತೆ ಅವರು ವಿವಾಹವಾಗುತ್ತಿರುವ ಆ ಹುಡುಗ ಯಾರು ಎನ್ನುವುದು ಯಾರಿಗೂ ತಿಳಿದಿಲ್ಲ.

ಚೈತ್ರಾ ಕುಂದಾಪುರ ಅವರನ್ನು ಮದುವೆ ಆಗುತ್ತಿರುವ ಹುಡುಗನ ಹೆಸರು ಶ್ರೀಕಾಂತ್ ಕಶ್ಯಪ್. ಕಾಲೇಜು ದಿನಗಳಿಂದಲೂ ಚೈತ್ರಾ ಹಾಗೂ ಶ್ರೀಕಾಂತ್ ಕಶ್ಯಪ್‌ ಇಬ್ಬರು ಪರಸ್ಪರ ಪ್ರೀತಿ ಮಾಡುತ್ತಿದ್ದರು.

ಶ್ರೀಕಾಂತ್ ಕಶ್ಯಪ್ ಮೂಲತಃ ಉಡುಪಿ ಜಿಲ್ಲೆಯ ಹಿರಿಯಡ್ಕ ಪಟ್ಟಣದವರು. ಆನಿಮೇಷನ್ ಓದಿದ್ದರೂ ವಾಸ್ತು ಹಾಗೂ ಜ್ಯೋತಿಷ್ಯ ಶಾಸ್ತ್ರದಲ್ಲಿ ಹೆಚ್ಚು ಆಸಕ್ತಿ ಇದೆ. ಚೈತ್ರಾಗೆ, ಶ್ರೀಕಾಂತ್ ಕಾಲೇಜು ದಿನಗಳಿಂದಲೇ ಪರಿಚಯ. ಇದೇ ಪರಿಚಯ ಸ್ನೇಹವಾಗಿ ಬಳಿಕ ಪ್ರೀತಿಯಾಗಿ ಮಾರ್ಪಟ್ಟು 12 ವರ್ಷಗಳ ಕಾಲ ಪ್ರೀತಿ ಮಾಡಿದ್ದರು.

ಚೈತ್ರಾ ಕುಂದಾಪುರ ಹಾಗೂ ಶ್ರೀಕಾಂತ್ ಕಶ್ಯಪ್ ಅವರ ಮದುವೆ ಇಂದು ಕುಂದಾಪುರದಲ್ಲಿ ನಡೆಯಲಿದೆ. ಅವರ ಮೆಹಂದಿ ಕಾರ್ಯಕ್ರಮ ಜೋರಾಗಿ ನಡೆದಿದ್ದು ಇದರ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

Related posts

ನೆಕ್ಲಾಜೆ ಶ್ರೀ ಕಾಳಿಕಾಂಬೆಗೆ ಸ್ವರ್ಣ ಪಾದುಕೆ ಸಮರ್ಪಣೆ

ಶಾಸ್ತ್ರೀಪಾರ್ಕ್‌ ಫ್ಲೈಓವರ್‌ ತಳಭಾಗಕ್ಕೆ ಪೊಲೀಸ್‌ ನಿಯೋಜನೆ

ಕಾರು ಕಳವು ಗೈದ ಆರೋಪಿ ಪೊಲೀಸ್ ವಶಕ್ಕೆ