ಕೆಡಿಪಿ ಸಭೆಯಲ್ಲಿ ಭೋಜೇಗೌಡರ ಆಕ್ರೋಶ

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಶಿಷ್ಟಾಚಾರ ಪಾಲಿಸಿಲ್ಲವೆಂದು ಎಂಎಲ್‌ಸಿ ಎಸ್. ಭೋಜೇಗೌಡರು ಗರಂ ಆಗಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ನೇತೃತ್ವದಲ್ಲಿ ನಡೆದ ಈ ಸಭೆಯಲ್ಲಿ, ವೇದಿಕೆಯಲ್ಲಿ ಅಧಿಕಾರಿಗಳನ್ನು ಕುಳಿತುಕೊಳ್ಳಿಸುವ ವಿಚಾರದಲ್ಲಿ ಶಿಷ್ಟಾಚಾರ ಪಾಲಿಸಿಲ್ಲ ಎಂದು ಭೋಜೇಗೌಡರು ಆಕ್ಷೇಪ ವ್ಯಕ್ತಪಡಿಸಿದರು. ಡಿಸಿ ಮುಲ್ಲೈ ಮುಹಿಲನ್ ಮತ್ತು ಜಿಪಂ ಸಿಇಒ ವೇದಿಕೆಯಲ್ಲಿ ಕುಳಿತಿದ್ದರು, ಆದರೆ ಅರಣ್ಯ ಇಲಾಖೆಯ ಅಧಿಕಾರಿ ಸೇರಿದಂತೆ ಇತರ ಅಧಿಕಾರಿಗಳು ವೇದಿಕೆಯಲ್ಲಿ ಕುಳಿತಿರುವುದಕ್ಕೆ ಅವರು ಆಕ್ಷೇಪಿಸಿದರು.

ಭೋಜೇಗೌಡರು, “ಅಧಿಕಾರಿಗಳಿಗೆ ವೇದಿಕೆಯಲ್ಲಿ ಆಸನ ನೀಡಲು ಯಾವ ನೀತಿಸಂಹಿತೆಯ ಆಧಾರವಿದೆ?” ಎಂದು ಪ್ರಶ್ನಿಸಿದರು. ಡಿಸಿ ಮುಲ್ಲೈ ಮುಹಿಲನ್ ಅವರು, “ಇದು ಪದ್ಧತಿ ಪ್ರಕಾರ ಮಾಡಲಾಗಿದೆ, ಪರಿಶೀಲನೆ ನಡೆಸುತ್ತೇನೆ” ಎಂದು ಉತ್ತರಿಸಿದರು.

ಈ ಸಂದರ್ಭದಲ್ಲಿ, ಭೋಜೇಗೌಡರು “ನಾನು ಮೇಲೆ ಬಂದು ಕೂರಲಾ?” ಎಂದು ಗರಂ ಆದರು. ಸಭೆಯಲ್ಲಿ ದಿನೇಶ್ ಗುಂಡೂರಾವ್ ಸಮಾಧಾನಪಡಿಸಲು ಪ್ರಯತ್ನಿಸಿದರೂ, ಭೋಜೇಗೌಡರು ಡಿಸಿಯವರಿಂದ ಸ್ಪಷ್ಟನೆ ಪಡೆಯಲು ಪಟ್ಟು ಹಿಡಿದರು.

ಅಂತಿಮವಾಗಿ, ಡಿಸಿಯವರು “ತಮಗೆ ಈ ಬಗ್ಗೆ ಗೊತ್ತಿರಲಿಲ್ಲ” ಎಂದು ಹೇಳಿದ ನಂತರ, ಭೋಜೇಗೌಡರ ಆಕ್ರೋಶ ಶಮನವಾಯಿತು.

Related posts

ಮಂಗಳೂರು ವಿವಿಯಿಂದ ಯಕ್ಷ ಮಂಗಳ ಪ್ರಶಸ್ತಿ ಪ್ರದಾನ

National Fame Award of India Books of Award – Sushanth Brahmavar

ಯಕ್ಷಗಾನ ಹಾಸ್ಯಗಾರ ಮುಖ್ಯಪ್ರಾಣ ಕಿನ್ನಿಗೋಳಿ ನಿಧನಕ್ಕೆ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಸಂತಾಪ