ಹೊಸ ವರ್ಷದ ಶುಭಾಶಯ ಕೋರುವ ಹಾನಿಕಾರಕ ಎಪಿಕೆ ಫೈಲ್‌ಗ‌ಳ ಕುರಿತು ಎಚ್ಚರ – ಉಡುಪಿ ಎಸ್ಪಿ

ಉಡುಪಿ : ಹೊಸ ವರ್ಷದ ಶುಭಾಶಯ ಕೋರುವ ಹಾನಿಕಾರಕ ಎಪಿಕೆ ಫೈಲ್‌ಗ‌ಳ ಕುರಿತು ಎಚ್ಚರಿಕೆ ವಹಿಸವಂತೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ| ಅರುಣ್‌ ಕೆ. ತಿಳಿಸಿದ್ದಾರೆ.

ಹೊಸ ವರ್ಷದ ಸಂದರ್ಭವನ್ನೇ ಬಳಸಿಕೊಂಡು ಸೈಬರ್‌ ಕ್ರಿಮಿನಲ್‌ಗ‌ಳು ಸಾರ್ವಜನಿಕರ ಮೊಬೈಲ್‌ಗ‌ಳಿಗೆ ಹಾನಿಕಾರಕ ಲಿಂಕ್‌ ಮತ್ತು ಎಪಿಕೆ ಫೈಲ್‌ಗ‌ಳನ್ನು ಕಳುಹಿಸಿ ಸಾರ್ವಜನಿಕರ ಮೊಬೈಲ್‌ ಹ್ಯಾಕ್‌ ಮಾಡುವ ಸಾಧ್ಯತೆಯಿದೆ. ವಾಟ್ಸಾಪ್‌, ಮೆಸೇಜ್ ಸೇರಿದಂತೆ ಸಾಮಾಜಿಕ ಜಾಲತಾಣಗಳ ಮೂಲಕ ದೊಡ್ಡ ಮಟ್ಟದಲ್ಲಿ ಶೇರ್‌ ಮಾಡುವ ಸಾಧ್ಯತೆಗಳಿವೆ. ಈ ಬಗ್ಗೆ ಸಾರ್ವಜನಿಕರು ಎಚ್ಚರ ವಹಿಸಬೇಕು ಎಂದು ತಿಳಿಸಿದ್ದಾರೆ.

ಅನಾಮಧೇಯ ನಂಬರಿನಿಂದ ಬರುವ ಇಂತಹ ಸಂದೇಶಗಳ ಲಿಂಕ್‌ ಒತ್ತಿದರೆ ಖಾತೆಯಿಂದ ಹಣ ಕಳೆದುಕೊಳ್ಳುವ ಸಂಭವವಿದೆ. ಈ ಬಗ್ಗೆ ಸಾಕಷ್ಟು ಮುನ್ನೆಚ್ಚರಿಕೆ ವಹಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.

Related posts

ಮಣಿಪಾಲದಲ್ಲಿ ಸಂಚಾರ ನಿಯಮ ಉಲ್ಲಂಘನೆ: ಐವರು ವಿದ್ಯಾರ್ಥಿಗಳು ಒಂದೇ ದ್ವಿಚಕ್ರ ವಾಹನದಲ್ಲಿ!

ಗ್ಯಾಸ್ ಹಚ್ಚುವಾಗ ಬೆಂಕಿ ತಗುಲಿ ಚಿಕಿತ್ಸೆ ಫಲಿಸದೆ ವ್ಯಕ್ತಿ ಸಾವು

ಜನಿವಾರ ತೆಗೆಸಿದ ಪ್ರಕರಣ – ಒಂದು ಸಮಾಜದ ಮೇಲೆ ದಬ್ಬಾಳಿಕೆ ಸರಿಯಲ್ಲ : ಕೋಟ