ಮಕ್ಕಳಿಗೆ ಜನ್ಮ ನೀಡುವ ಜತೆಗೆ ಸಂಸ್ಕಾರಯುತವಾಗಿ ಬೆಳೆಸುವ ಬಗ್ಗೆಯೂ ಪೋಷಕರು ಕಾಳಜಿ ವಹಿಸಬೇಕು : ಅದಮಾರು ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು

ಉಡುಪಿ : ಆದರ್ಶ ಆಸ್ಪತ್ರೆ ವತಿಯಿಂದ ಉಡುಪಿ ಕ್ಲೌಡ್ ನೈನ್ ಫರ್ಟಿಲಿಟಿ ಆಸ್ಪತ್ರೆ ಬೆಂಗಳೂರು ಸಹಭಾಗಿತ್ವದಲ್ಲಿ ಫರ್ಟಿಲಿಟಿ ಕ್ಲೀನಿಕ್ ಆರಂಭಿಸಿದ್ದು, ಇದರ ಉದ್ಘಾಟನಾ ಸಮಾರಂಭ ಆದರ್ಶ ಆಸ್ಪತ್ರೆಯಲ್ಲಿ ನೆರವೇರಿತು.

ದೀಪ ಬೆಳಗಿಸಿದ ಅದಮಾರು ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು ಮಾತನಾಡಿ, ಆದರ್ಶ ಆಸ್ಪತ್ರೆಯು ರೋಗಿಗಳು ಆರೈಕೆ ಮಾಡುವ ಪದ್ಧತಿ ಚಿಕಿತ್ಸಾ ಕ್ರಮದಲ್ಲಿ ಉತ್ತಮ ಗುಣಮಟ್ಟವನ್ನು ಕಾಯ್ದುಕೊಳ್ಳುತ್ತಾರೆ. ಮಕ್ಕಳಿಗೆ ಜನ್ಮ ನೀಡುವ ಜತೆಗೆ ಅವರನ್ನು ಸಂಸ್ಕಾರಯುತವಾಗಿ ಬೆಳೆಸುವ ಬಗ್ಗೆಯೂ ಪೋಷಕರು ಕ್ರಮವಹಿಸಬೇಕು.

ಸಮಾಜಕ್ಕೆ ಅನ್ಯಾಯ ಮಾಡುವಂತೆ ಮಕ್ಕಳನ್ನು ಬೆಳೆಸುವುದು ಬೇಡ. ಸಮಾಜಮುಖಿ ಚಿಂತನೆ ಉಳ್ಳ ಒಂದು ಮನೆಯಲ್ಲಿದ್ದರೂ ಸಾಕು. ಆದರ್ಶ ಆಸ್ಪತ್ರೆ ಉತ್ತಮ ಚಿಕಿತ್ಸಾಾ ವಿಧಾನ, ಆರೋಗ್ಯ ಸಲಹೆ ನೀಡುವ ಮೂಲಕ ಮಾದರಿ ಆರೋಗ್ಯ ಸಂಸ್ಥೆಯಾಗಿ ಗುರುತಿಸಿಕೊಂಡಿದೆ. ಫರ್ಟಿಲಿಟಿ ಕ್ಲಿನಿಕ್ ಮೂಲಕ ಜನರಿಗೆ ಇನ್ನಷ್ಟು ಅಗತ್ಯ ಮಾಹಿತಿ ಸಿಗುವಂತಾಗಲಿ ಎಂದು ಆಶೀರ್ವಚನ ನೀಡಿದರು.

ಆದರ್ಶ ಆಸ್ಪತ್ರೆ ವೈದ್ಯಕೀಯ ನಿರ್ದೇಶಕ ಡಾ ಜಿ. ಎಸ್. ಚಂದ್ರಶೇಖರ್ ಮಾತನಾಡಿ, ಕ್ಲೌಡ್ ನೈನ್ ಫರ್ಟಿಲಿಟಿ ಆಸ್ಪತ್ರೆಯೊಂದಿಗೆ ಒಪ್ಪಂದ ಮಾಡಿಕೊಂಡು ಬಂಜೆತನದ ಬಗ್ಗೆ ಉತ್ತಮ ಚಿಕಿತ್ಸೆ ಮತ್ತು ಆರೋಗ್ಯ ಸಲಹೆ ನೀಡುವ ಉದ್ದೇಶದಿಂದ ಈ ಯೋಜನೆ ಜಾರಿಗೊಳಿಸಲಾಗಿದೆ. ಫರ್ಟಿಲಿಟಿ ತಜ್ಞೆ ಡಾ। ಅನುಷಾ ಜಿ. ಪಿ. ಅವರು ಪ್ರತೀ ತಿಂಗಳು ಮೊದಲ ಬುಧವಾರ ಮತ್ತು 3ನೇ ಬುಧವಾರ ಬೆಳಗ್ಗೆ 9ರಿಂದ ಸಂಜೆ 4 ಗಂಟೆವರೆಗೂ ಉಡುಪಿ ಆದರ್ಶ ಆಸ್ಪತ್ರೆಯಲ್ಲಿ ಲಭ್ಯರಿರುತ್ತಾರೆ ಎಂದು ಮಾಹಿತಿ ನೀಡಿದರು.

ಕ್ಲೌಡ್ ಕ್ಲಾಸ್ ನೈನ್ ಫರ್ಟಿಲಿಟಿ ಆಸ್ಪತ್ರೆಯ ಫರ್ಟಿಲಿಟಿ ತಜ್ಞೆ ಡಾ ಅನುಷಾ ಜಿ. ಪಿ. ಮಾತನಾಡಿ, ಬಂಜೆತನದ ಬಗ್ಗೆ ಅನೇಕರಿಗೆ ಸರಿಯಾದ ಮಾರ್ಗದರ್ಶನವಿಲ್ಲ. ಭಾರತದಲ್ಲಿ ಶೇ.30ರಷ್ಟು ದಂಪತಿಗಳಲ್ಲಿ ಬಂಜೆತನ ಕಾಣಿಸಿಕೊಳ್ಳುತ್ತದೆ. ಸಮಸ್ಯೆ ಇರುವರಿಗೆ ಪರಿಶೀಲಿಸಿ ಅಗತ್ಯಕ್ಕೆ ಪೂರಕವಾದ ಚಿಕಿತ್ಸೆ ನೀಡಲಾಗುತ್ತದೆ. ಬಂಜೆತನಕ್ಕೆ ಆಸ್ಪತ್ರೆಯಲ್ಲಿ ನೀಡಲಾಗುವ ವಿವಿಧ ಚಿಕಿತ್ಸಾ ಸೌಲಭ್ಯಗಳ ಕುರಿತು ವಿವರಿಸಿದರು.

ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿದರು. ಆದರ್ಶ ಆಸ್ಪತ್ರೆ ಸಿಇಒ ವಿಮಲಾ ಚಂದ್ರಶೇಖರ್, ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರಾದ ಡಾ ದಮಯಂತಿ, ಡಾ ರಂಜಿತಾ ಎಸ್. ನಾಯಕ್, ವ್ಯವಸ್ಥಾಪಕ ಡಿಯಾಗೋ ಕ್ವಾಡ್ರೋಸ್ ಉಪಸ್ಥಿತರಿದ್ದರು. ರಿಮಾ ಮಿನೇಜಸ್ ವಂದಿಸಿ, ಡಯಟಿಶೀಯನ್ ಅನುಶ್ರೀ ಆಚಾರ್ಯ ನಿರೂಪಿಸಿದರು.

Related posts

ವಿಶ್ವದ ವೇಗದ ಭಗವದ್ಗೀತಾ ಲೇಖಕ : ಕೇವಲ 5.30 ಗಂಟೆಗಳಲ್ಲಿ 18 ಅಧ್ಯಾಯ ಮತ್ತು 700 ಶ್ಲೋಕಗಳ ಬರಹ ಪೂರ್ಣಗೊಳಿಸಿದ ಅದ್ಭುತ ಸಾಧನೆ!

Worlds Fastest Bhagvad Gita Writer Completing 18 Chapters & 700 Verses in Just 5.30 Hours

ಮೀನುಗಾರರ ಪ್ರತಿಭಟನೆಯಲ್ಲಿ ಪ್ರಚೋದನಕಾರಿ ಭಾಷಣ-ಹಿಂದೂ ಯುವಸೇನೆ ಮುಖಂಡನ ವಿರುದ್ಧ ಸುಮೊಟೋ ಕೇಸ್