ಕಾಲೇಜಿನೊಳಗೆ ಬಂದು ಕೆಲಹೊತ್ತು ಆತಂಕ ಸೃಷ್ಟಿಸಿದ ಉಡ!

ಕಾಪು : ಪೊಲಿಪುವಿನ ಸರಕಾರಿ ಪದವಿಪೂರ್ವ ಕಾಲೇಜಿಗೆ ಇಂದು ಅಪರೂಪದ ಅತಿಥಿಯ ಆಗಮನವಾಗಿತ್ತು.

ಕಾಲೇಜು ಕೊಠಡಿಯೊಳಗೆ ಒಮ್ಮಿಂದೊಮ್ಮೆಲೆ ಸರಸರನೆ ‘ಉಡ’ದ ಪ್ರವೇಶವಾದಾಗ ಇಲ್ಲಿನ ಶಿಕ್ಷಕರು‌ ಗಾಬರಿಗೊಳಗಾದರು. ಒಂದು ಕ್ಷಣ ಇದು ಯಾವ ಪ್ರಾಣಿ ಎಂದೇ ಅಲ್ಲಿದ್ದವರಿಗೆ ಗೊತ್ತಾಗಲಿಲ್ಲ. ಕೆಲ ಹೊತ್ತು ಉಡ ಆತಂಕ ಸೃಷ್ಟಿಸಿದ ಬಳಿಕ ಸ್ಥಳೀಯರಾದ ಪ್ರಶಾಂತ್ ಪೂಜಾರಿ ಮತ್ತು ಶಿವಾನಂದ ಪೂಜಾರಿ ಅವರನ್ನು ಕರೆಸಲಾಯಿತು. ಸ್ಥಳಕ್ಕೆ ಬಂದ ಅವರು ಕಾರ್ಯಾಚರಣೆ ಮಾಡಿ ಉಡವನ್ನು ಹಿಡಿದು ಸುರಕ್ಷಿತ ಜಾಗದಲ್ಲಿ ಬಿಟ್ಟರು.

ಪ್ರಾಂಶುಪಾಲ ಶಿವಲಿಂಗಪ್ಪ ಹಾಗೂ ಶಾಲಾ ಶಿಕ್ಷಕ ವರ್ಗದವರು ಈ ವೇಳೆ ಇದ್ದು ರಜೆಯ ಕಾರಣ ವಿದ್ಯಾರ್ಥಿಗಳು ಇರಲಿಲ್ಲ.

Related posts

ಮಣಿಪಾಲದಲ್ಲಿ ಸಂಚಾರ ನಿಯಮ ಉಲ್ಲಂಘನೆ: ಐವರು ವಿದ್ಯಾರ್ಥಿಗಳು ಒಂದೇ ದ್ವಿಚಕ್ರ ವಾಹನದಲ್ಲಿ!

ಗ್ಯಾಸ್ ಹಚ್ಚುವಾಗ ಬೆಂಕಿ ತಗುಲಿ ಚಿಕಿತ್ಸೆ ಫಲಿಸದೆ ವ್ಯಕ್ತಿ ಸಾವು

ಜನಿವಾರ ತೆಗೆಸಿದ ಪ್ರಕರಣ – ಒಂದು ಸಮಾಜದ ಮೇಲೆ ದಬ್ಬಾಳಿಕೆ ಸರಿಯಲ್ಲ : ಕೋಟ