ಹೆಜಮಾಡಿ ಟೋಲ್ ಪ್ಲಾಝಾದಲ್ಲಿ ಗೂಂಡಾಗಿರಿ; ಸಿಬ್ಬಂದಿಗೆ ಥಳಿಸಿದ್ದ ಬಂಟ್ವಾಳ ಮೂಲದ ಸಲೀಂ ಬಂಧನ

ಪಡುಬಿದ್ರಿ : ಹೆಜಮಾಡಿಯ ಒಳ ರಸ್ತೆಯ ಕಿರು ಟೋಲ್ ಗೇಟ್‌ನಲ್ಲಿ ಅಲ್ಲಿಯ ಸಿಬ್ಬಂದಿಗೆ ಹಿಗ್ಗಾಮುಗ್ಗ ಥಳಿಸಿದ್ದ ಕಾರು ಚಾಲಕ ಯುವಕನನ್ನು ಪಡುಬಿದ್ರಿ ಪೊಲೀಸರು ಬಂಧಿಸಿದ್ದಾರೆ. ದ.ಕ ಜಿಲ್ಲೆ ಬಂಟ್ವಾಳ ಮೂಲದ ಸಲೀಂ ಬಂಧಿತ ಆರೋಪಿ.

ಆರೋಪಿಯು ಟೋಲ್ ನಿಯಮ ಉಲ್ಲಂಘಿಸಿ ಗೇಟ್ ದಾಟಿ ಮುಂದೆ ಹೋಗಿದ್ದ. ಅದನ್ನು ಪ್ರಶ್ನಿಸಿದ ಸಿಬ್ಬಂದಿಯೊಂದಿಗೆ ಉಡಾಫೆ‌ಯಾಗಿ ವರ್ತಿಸಿ ಡಿಕ್ಕಿಯಾಗುವಂತೆ ಕಾರು ಚಲಾಯಿಸಿಕೊಂಡು ಮುಂದೆ ಹೋಗಿದ್ದ. ಬಳಿಕ ಕಾರು ನಿಲ್ಲಿಸಿ ಸಿಬ್ಬಂದಿಗೆ ಹಿಗ್ಗಾಮುಗ್ಗಾ ಥಳಿಸಿದ್ದು, ಆ ಸಂದರ್ಭ ಮಹಿಳಾ ಸಿಬ್ಬಂದಿಗಳು ಸಹಿತ ಸ್ಥಳೀಯರು ಹಲ್ಲೆಗೊಳಗಾದ ಸಿಬ್ಬಂದಿಯ ನೆರವಿಗೆ ಬರುತ್ತಿದಂತೆ ಕಾರನ್ನೇರಿ ಪಲಾಯನ ಮಾಡಿದ್ದ.

ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಗೆ ದೂರು ನೀಡಿದ್ದು ಕಾರು ಸಂಚರಿಸಿದ ಜಾಡು ಹಿಡಿದು ಹೊರಟ ಪಡುಬಿದ್ರಿ ಪೊಲೀಸರು ಕೆಲವೇ ಹೊತ್ತಲ್ಲಿ ಕಾರನ್ನು ಬೆನ್ನಟ್ಟಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದರು. ಇದೀಗ ಆರೋಪಿ ವಿರುದ್ಧ ಬಿಎನ್‌ಎಸ್ ನಿಯಮದಡಿ 110, 115 (2)118(1) 352, 351(2) ಪ್ರಕರಣ ದಾಖಲು ಮಾಡಲಾಗಿದ್ದು ತನಿಖೆ ಮುಂದುವರೆದಿದೆ.

Related posts

ಉಡುಪಿ ಜಿಲ್ಲೆಯಲ್ಲಿ ಉಪವಾಸ, ಧ್ಯಾನದೊಂದಿಗೆ ಗುಡ್ ಫ್ರೈಡೆ ಆಚರಣೆ

ಬಿಎಸ್‌ಎನ್‌ಎಲ್ ಸಂಪರ್ಕದ ಕುಂದು ಕೊರತೆ, ಗುಣಮಟ್ಟ ಉತ್ತಮಗೊಳಿಸುವಿಕೆ ಸಭೆಯಲ್ಲಿ ಸಂಸದ ಕೋಟ ಭಾಗಿ

ನೇತ್ರಾವತಿ ಹೋರಾಟಕ್ಕೆ ಸಜ್ಜು – ತೋನ್ಸೆ ಜಯಕೃಷ್ಣ ಶೆಟ್ಟಿ