ಉಡುಪಿ ಎಪಿಎಂಸಿಯಲ್ಲಿಯೂ ನಿಷೇಧಿತ ಚೀನಿ ಬೆಳ್ಳುಳ್ಳಿ ಹಾವಳಿ; ಅಧಿಕಾರಿಗಳಿಂದ ದಾಳಿ – 5 ಕ್ವಿಂಟಾಲ್ ವಶ

ಉಡುಪಿ : ಕೆಲವು ದಿನಗಳಿಂದ ನಿಷೇಧಿತ ಚೀನೀ ಬೆಳ್ಳುಳ್ಳಿ ಹಾವಳಿ ಹೆಚ್ಚುತ್ತಿದ್ದು ಉಡುಪಿ ಎಪಿಎಂಸಿಯಲ್ಲಿಯೂ ಪತ್ತೆಯಾಗಿದೆ.

ಇಲ್ಲಿನ ಆದಿಉಡುಪಿ ಎಪಿಎಂಸಿ ಗೋದಾಮಿನಲ್ಲಿ ನಿಷೇಧಿತ ಚೀನಾ ಬೆಳ್ಳುಳ್ಳಿಯನ್ನು ಸಂಗ್ರಹಿಸಿಡಲಾಗಿತ್ತು. ಖಚಿತ ಮಾಹಿತಿ ಪಡೆದ ಉಡುಪಿ ನಗರಸಭೆ ಮುಖ್ಯ ಆಯುಕ್ತ ರಾಯಪ್ಪ ದಿಢೀರ್ ದಾಳಿ ನಡೆಸಿ 5 ಕ್ವಿಂಟಾಲ್ ಬೆಳ್ಳುಳ್ಳಿಯನ್ನು ಪತ್ತೆ ಮಾಡಿದ್ದಾರೆ.
ಸಾರ್ವಜನಿಕರ ದೂರು ಹಿನ್ನೆಲೆಯಲ್ಲಿ ಈ ದಾಳಿ ನಡೆಯಿತು.

ಚೀನಿ ಬೆಳ್ಳುಳ್ಳಿ ಮಾರಾಟದ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು ಮಾರಕ ರೋಗಗಳಿಗೆ ಕಾರಣವಾಗುವ ಚೀನಿ ಬೆಳ್ಳುಳ್ಳಿ ಮಾರಾಟಗಾರರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಉಡುಪಿ ನಗರಸಭೆ ಪೌರಾಯುಕ್ತರು ಮಾತನಾಡಿ, ಆಹಾರ ಪದಾರ್ಥಗಳಿಗೆ ರಾಸಾಯನಿಕ ಸಿಂಪಡಣೆಯಂತಹ ಕೃತ್ಯಗಳನ್ನು ಸಹಿಸಿಕೊಳ್ಳುವುದಿಲ್ಲ. ಎಪಿಎಂಸಿಯಲ್ಲಿ ನಿಷೇಧಿತ ಬೆಳ್ಳುಳ್ಳಿ ಮಾರಾಟದ ಬಗ್ಗೆ ದೂರುಗಳಿದ್ದವು. ದೂರಿನ ಅನ್ವಯ ದಾಳಿ ನಡೆಸಿದ್ದೇವೆ. ಇಂತಹ ಕೃತ್ಯ ಎಸಗುವವರ ವಿರುದ್ದ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.

Related posts

ಅಲೈನ್ಸ್ ಕ್ಲಬ್ ಉಡುಪಿಯಿಂದ ವೈದ್ಯರ ದಿನಾಚರಣೆ : ಪ್ರಸಿದ್ಧ ವೈದ್ಯ ಡಾ.ಆರ್.ಎನ್.ಭಟ್ ಅವರಿಗೆ ಸನ್ಮಾನ

ಶತಾವಧಾನಿ ಡಾ. ಆರ್. ಗಣೇಶ್ ಅವರಿಗೆ ತಲ್ಲೂರು ಕನಕ ಅಣ್ಣಯ್ಯ ಶೆಟ್ಟಿ ಪ್ರಶಸ್ತಿ ಪ್ರದಾನ

ರಂಗೋಲಿ ಕಲಾ ಸಾಧಕಿ, ಭಾರತಿ ಮರವಂತೆಗೆ ‘ಮಧುರಚೆನ್ನ ರಾಜ್ಯ ಪ್ರಶಸ್ತಿ’ ಪ್ರದಾನ