ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಬಾಂಗ್ಲಾಪ್ರಜೆ – ಉಡುಪಿಯಲ್ಲಿ ಅಕ್ರಮವಾಗಿ ಪಾಸ್‌ಪೋರ್ಟ್ ಮಾಡಿದ್ದ ನುಸುಳುಕೋರ

ಮಂಗಳೂರು : ಭಾರತಕ್ಕೆ ಅಕ್ರಮವಾಗಿ ನುಸುಳಿಕೊಂಡು ಬಂದು ಉಳಿದುಕೊಂಡಿದ್ದಲ್ಲದೆ, ಅಕ್ರಮ ಪಾಸ್‌ಪೋರ್ಟ್ ಮಾಡಿಸಿ ದುಬೈಗೆ ಹಾರಲೆತ್ನಿಸಿದ ಬಾಂಗ್ಲಾ ಮೂಲದ ವ್ಯಕ್ತಿಯೊಬ್ಬನನ್ನು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ.

ಬಾಂಗ್ಲಾದೇಶ ಮೂಲದ ನಿವಾಸಿ ಮಾಣಿಕ್ ಹುಸೈನ್ (26) ಬಂಧಿತ ಆರೋಪಿ.

ಮಾಣಿಕ್ ಹುಸೈನ್ 2017ರಲ್ಲಿ ಪಶ್ಚಿಮ ಬಂಗಾಳ ಗಡಿಯ ಮೂಲಕ ಬಾಂಗ್ಲಾದಿಂದ ಭಾರತಕ್ಕೆ ಬಂದಿದ್ದ. ಬಳಿಕ, ಚೆನ್ನೈನಲ್ಲಿ ಕೆಲಸ ಮಾಡುತ್ತಿದ್ದ ಎಂಬ ಮಾಹಿತಿ ತಿಳಿದುಬಂದಿದೆ. ಇತ್ತೀಚೆಗೆ ಉಡುಪಿ ಜಿಲ್ಲೆಯ ಪರಿಚಿತನೊಬ್ಬನ ಮೂಲಕ ನಕಲಿ ಆಧಾರ್ ಇನ್ನಿತರ ಐಡಿಗಳನ್ನು ಮಾಡಿ, ನಕಲಿ ವಿಳಾಸ ಮೂಲಕ ಭಾರತದ ಪಾಸ್‌ಪೋರ್ಟ್ ರೆಡಿ ಮಾಡಿಸಿದ್ದ. ಇದೀಗ ಮಂಗಳೂರು ವಿಮಾನ ನಿಲ್ದಾಣದ ಮೂಲಕ ದುಬೈಗೆ ಹಾರಲು ಯತ್ನಿಸುತ್ತಿದ್ದಾಗಲೇ ಇಮಿಗ್ರೇಷನ್ ಅಧಿಕಾರಿಗಳು ಸಂಶಯದಲ್ಲಿ ತಪಾಸಣೆ ನಡೆಸಿದ್ದು ವಶಕ್ಕೆ ಪಡೆದಿದ್ದಾರೆ.

ಉಡುಪಿಯಲ್ಲಿ ಸಿದ್ಧಪಡಿಸಿದ ಪಾಸ್‌ಪೋರ್ಟ್‌ನಲ್ಲಿ ತನ್ನ ಹೆಸರನ್ನು ಮಹಮ್ಮದ್ ಮಾಣಿಕ್ ಎಂದು ಬದಲಾಯಿಸಿದ್ದ. ಸದ್ಯ ಆರೋಪಿಯನ್ನು ಬಜಪೆ ಪೋಲೀಸರಿಗೆ ಒಪ್ಪಿಸಲಾಗಿದೆ. ಬಜಪೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಬಾಂಗ್ಲಾ ಮೂಲದ ಈ ವ್ಯಕ್ತಿಯೊಂದಿಗೆ ಇನ್ನಷ್ಟು ಮಂದಿ ಉಡುಪಿಗೆ ಬಂದಿದ್ದಾರೆ ಎನ್ನಲಾಗುತ್ತಿದೆ.

Related posts

ಯುವನಿಧಿಯ ಫಲಾನುಭವಿಗಳಿಗೆ ಕೌಶಲ್ಯ ತರಬೇತಿ ನೀಡಿ : ರಮೇಶ್ ಕಾಂಚನ್

ದೆಹಲಿಗೆ ಮಹಿಳಾ ಮುಖ್ಯಮಂತ್ರಿ : ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಸಂಭ್ರಮಾಚರಣೆ

ನಿಲ್ಲಿಸಿದ್ದ ಮೀನುಗಾರಿಕಾ ಬೋಟ್‌ನಲ್ಲಿ ಅಗ್ನಿ ಅವಘಡ – 15 ಲಕ್ಷ ರೂ.ನಷ್ಟ