ಯೂನಿಯನ್ ಬ್ಯಾಂಕ್ ಎಸಿಯೊಳಗೆ ಹೆಬ್ಬಾವಿನ ಮರಿ ಪ್ರತ್ಯಕ್ಷ

ಮಂಗಳೂರು : ಮಂಗಳೂರಿನಲ್ಲಿ ಬ್ಯಾಂಕ್‌ನ ಎಸಿಯೊಳಗೆ ಹೆಬ್ಬಾವಿನ ಮರಿಯೊಂದು ಸಿಕ್ಕಿಹಾಕಿಕೊಂಡ ಘಟನೆ ನಡೆದಿದೆ.

ನಗರದ ಕೊಡಿಯಾಲ್ ಬೈಲ್ ಯೂನಿಯನ್ ಬ್ಯಾಂಕ್‌ನ ಎ.ಸಿ.ಯೊಳಗೆ ಹೆಬ್ಬಾವು ಮರಿ ಕಾಣ ಸಿಕ್ಕಿದ್ದು, ಉರಗ ತಜ್ಞ ಗಂಗೇಶ್ ಬೋಳಾರ್ ಅವರು ಹೆಬ್ಬಾವಿನ ಮರಿಯನ್ನು ರಕ್ಷಣೆ ಮಾಡಿದ್ದಾರೆ.

ಹೆಬ್ಬಾವು‌ ಮರಿ ಎ.ಸಿ.ಯ ಔಟ್ ಡೋರ್‌ನ ಪೈಪ್ ಮೂಲಕ ಒಳ ಬಂದಿರುವ ಸಾಧ್ಯತೆ ಇದ್ದು, ಎ.ಸಿ.ಪ್ಯಾನಲ್‌ ಒಳಗಿದ್ದ ಹೆಬ್ಬಾವು ಮರಿಯನ್ನ ನಾಜೂಕಾಗಿ ಉರಗ ತಜ್ಞ ತೆಗೆದಿದ್ದಾರೆ. ಹೆಬ್ಬಾವಿನ ಮರಿ ಸೇರಿಕೊಂಡ ಹಿನ್ನಲೆ ಆತಂಕದಲ್ಲಿದ್ದ ಬ್ಯಾಂಕ್ ಸಿಬ್ಬಂದಿ ನಿಟ್ಟುಸಿರು ಬಿಟ್ಟರು.

Related posts

ಕರ್ನಾಟಕ ಕ್ರೀಡಾಕೂಟದಲ್ಲಿ ಸಮರಾಗೆ ಚಿನ್ನದ ಪದಕ

ಪ್ರಥಮ ಬಾರಿಗೆ ಯಕ್ಷ ರಂಗದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ

ತಾಯಿ ಹಾಗೂ ಇಬ್ಬರು ಮಕ್ಕಳು ನಾಪತ್ತೆ