ಬೆಳಾಲು ರಸ್ತೆ ಬದಿಯಲ್ಲಿ ಹೆಣ್ಣು ಮಗು ಪತ್ತೆ ಪ್ರಕರಣ; ಮಗುವಿನ ಹೆತ್ತವರನ್ನು ಪತ್ತೆ ಹಚ್ಚಿದ ಧರ್ಮಸ್ಥಳ ಪೊಲೀಸರು

ಮಡಂತ್ಯಾರು : ಬೆಳಾಲು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಪತ್ತೆಯಾದ ಹೆಣ್ಣು ಮಗುವಿನ ಪೋಷಕರ ಬಗ್ಗೆ ಖಚಿತ ಮಾಹಿತಿ ಸಿಕ್ಕಿದೆ ಎಂಬ ಮಾಹಿತಿ ಲಭಿಸಿದೆ.

ಮಗು ಸಾರ್ವಜನಿಕರಿಗೆ ಪತ್ತೆಯಾದ ಬಗ್ಗೆ ಊರಿನವರು ಧರ್ಮಸ್ಥಳ ಪೊಲೀಸರಿಗೆ ಮಾಹಿತಿ ನೀಡಲು ಮಗುವಿನ ತಂದೆ-ತಾಯಿ ವಿಳಾಸ, ಮೊಬೈಲ್ ಸಂಖ್ಯೆ ಸಮೇತ ಖಚಿತ ಮಾಹಿತಿಯನ್ನು ನೀಡಿದ್ದರು. ಅದರಂತೆ ಧರ್ಮಸ್ಥಳ ಪೊಲೀಸರಿಗೆ ಈ ಎಲ್ಲಾ ಮಾಹಿತಿ ನೀಡಿ ಸಹಕರಿಸಲಾಗಿತ್ತು.

ಈ ಬಗ್ಗೆ ಕಾರ್ಯಾಚರಣೆಗಿಳಿದ ಧರ್ಮಸ್ಥಳ ಸಬ್‌ಇನ್ಸೆಕ್ಟರ್ ಸಮರ್ಥ ಆರ್. ಗಾಣಿಗೇರಾ ಮತ್ತು ತಂಡ, ಮಗುವಿನ ತಂದೆ ಇರುವಿಕೆಯ ಬಗ್ಗೆ ಮಾಹಿತಿ ಪಡೆದು ಎ.2 ರಂದು ರಾತ್ರಿ ಮಗುವಿನ ತಂತೆ ರಂಜಿತ್ ಗೌಡನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಆಸ್ಪತ್ರೆಗೆ ಹೋಗದೆ ನಾರ್ಮಲ್ ಡೆಲಿವರಿ: ರಂಜಿತ್‌ ಮತ್ತು ಸುಶ್ಮಿತಾ ಪರಸ್ಪರ ಪ್ರೀತಿಸುತ್ತಿದ್ದರು. ಈ ವಿಚಾರ ಎರಡು ಮನೆಯವರಿಗೂ ಗೊತ್ತಿರಲಿಲ್ಲ. ಈ ಮಧ್ಯೆ ಸುಶ್ಮಿತಾ ಗರ್ಭಿಣಿಯಾಗಿದ್ದು, ಈ ವಿಚಾರವನ್ನೂ ಯಾರಿಗೂ ಹೇಳದೆ ಇಬ್ಬರು ಮುಚ್ಚಿಟ್ಟಿದ್ದರು ಎಂದು ಮನೆಯವರು ಹಾಗೂ ಸ್ಥಳೀಯರು ಹೇಳಿದ್ದಾರೆ.

ದಂಪತಿಗಳು ಪ್ರತಿ ತಿಂಗಳು ಕ್ಲಿನಿಕ್‌ಗೆ ಹೋಗುತ್ತಿದ್ದರು. ತಾಯಿ ಕಾರ್ಡ್ ಬಗ್ಗೆ ಕ್ಲಿನಿಕ್‌ನವರು ವಿಚಾರಿಸಿದಾಗ ಕೈ ತಪ್ಪಿ ಹೋಗಿದೆ ಎಂದು ಹೇಳಿರುವುದಾಗಿ ತಿಳಿದು ಬಂದಿದೆ.

ಮಾ.22ರ ಶನಿವಾರ ಬೆಳಾಲು ಕೊಡೋಳುಕೆರೆ ಎಂಬಲ್ಲಿ ಕಾಡಿನ ಮಧ್ಯೆ ಹೆಣ್ಣು ಮಗು ಪತ್ತೆಯಾಗಿತ್ತು.

Related posts

National Fame Award of India Books of Award – Sushanth Brahmavar

ಯಕ್ಷಗಾನ ಹಾಸ್ಯಗಾರ ಮುಖ್ಯಪ್ರಾಣ ಕಿನ್ನಿಗೋಳಿ ನಿಧನಕ್ಕೆ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಸಂತಾಪ

ಸಿಪಿಎಂ ಕಾರ್ಯದರ್ಶಿ ಮೇಲೆ ದುರುದ್ದೇಶಪೂರಿತ ಎಫ್ಐಆರ್ – ಖಂಡನೆ