ಪೊಲೀಸರಿಂದ ಸಾರ್ವಜನಿಕರಿಗೆ ಜಾಗೃತಿ – ಜಾಥಾಗೆ ನೂರಾರು ವಿದ್ಯಾರ್ಥಿಗಳ ಸಾಥ್

ಉಡುಪಿ : ಉಡುಪಿ ಜಿಲ್ಲಾ ಪೊಲೀಸರು ಅಪರಾಧ ತಡೆ ಮಾಸಾಚರಣೆ ಪ್ರಯುಕ್ತ ಜಾಥಾ ಮಾಡಿದರು. ಈ ಮೂಲಕ ಅಪರಾಧ ತಡೆಗಟ್ಟುವ ಕುರಿತು ಸಾರ್ವಜನಿಕವಾಗಿ ಅರಿವು ಮೂಡಿಸಿದರು.

ನಗರದ ಬೋರ್ಡ್ ಹೈಸ್ಕೂಲು ಮುಂಭಾಗದಲ್ಲಿ ಜಾಥಾ ಆರಂಭವಾಗಿ ನಗರದ ಪ್ರಮುಖ ಬೀದಿಗಳಲ್ಲಿ ಸಂಚಾರ ಮಾಡಿತು. ಉಡುಪಿ ಎಸ್‌ಪಿ ಡಾ. ಅರುಣ್ ಕುಮಾರ್ ಕಾಲ್ನಡಿಗೆ ಜಾಥಾದ ನೇತೃತ್ವ ವಹಿಸಿದ್ದರು. ನಗರದ ಕಾಲೇಜು, ನರ್ಸಿಂಗ್ ವಿದ್ಯಾರ್ಥಿಗಳು ಭಾಗಿಯಾಗಿ ಜನಕ್ಕೆ ಮಾಹಿತಿಗಳನ್ನು ನೀಡಿದರು.

ನೂಕುನುಗ್ಗಲಿರುವ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗುವ ಸಂದರ್ಭದಲ್ಲಿ ಮುಂಜಾಗೃತೆ ವಹಿಸಬೇಕು, ಮೈಮರೆಯಬಾರದು.

ಮನೆಯನ್ನು ಬಿಟ್ಟು ಹೋಗುವಾದ ಬೆಲೆಬಾಳುವ ಚಿನ್ನಾಭರಣ, ನಗದನ್ನು ಸುರಕ್ಷಿತ ಲಾಕರ್‌ನಲ್ಲಿ ಇಡಬೇಕು, ದ್ವಿಚಕ್ರ ವಾಹನವನ್ನು ಲಾಕ್ ಮಾಡುವ ಜೊತೆ ಹ್ಯಾಂಡ್ ಲಾಕ್ ಮಾಡಬೇಕು. ಅನುಮಾನಾಸ್ಪದ ವ್ಯಕ್ತಿಗಳು ಕಂಡುಬಂದಲ್ಲಿ ಪೊಲೀಸರಿಗೆ ತಕ್ಷಣ ಮಾಹಿತಿ ನೀಡಬೇಕು ಎಂದು ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಯ್ತು.

Related posts

ಕರ್ನಾಟಕ ಕ್ರೀಡಾಕೂಟದಲ್ಲಿ ಸಮರಾಗೆ ಚಿನ್ನದ ಪದಕ

ಯಕ್ಷಗಾನ ಪ್ರದರ್ಶನಕ್ಕೆ ಅಡ್ಡಿ – ಬ್ರಿಟಿಷ್ ಆಡಳಿತವನ್ನೂ ಮೀರಿಸಿದ ಸಿದ್ಧರಾಮಯ್ಯ ಸರ್ಕಾರ : ಯಶ್‌ಪಾಲ್ ಸುವರ್ಣ

ಮಾರಿದ ಹಳೆಯ ಬಸ್ಸನ್ನು ಕದ್ದು ತಂದ ಆರೋಪ – ತಂದೆ ಮಗನ ವಿರುದ್ಧ ದೂರು ದಾಖಲು !