ರೋಟರಿ ಕ್ಲಬ್ ಮಣಿಪಾಲ ವತಿಯಿಂದ ರೋಟರಿ ಜನಸೇವಾ ಅವಾರ್ಡ್ ಪ್ರಶಸ್ತಿ ಪ್ರಧಾನ

ಉಡುಪಿ : ರೋಟರಿ ಕ್ಲಬ್ ಮಣಿಪಾಲ್ ವತಿಯಿಂದ ರೋಟರಿ ಜನಸೇವಾ ಅವಾರ್ಡ್ ಪ್ರಶಸ್ತಿ ಪ್ರಧಾನ ಸಮಾರಂಭ ಸರಕಾರಿ ಉಡುಪಿ ಮಹಿಳಾ ಹೈಸ್ಕೂಲ್ ಸಭಾಂಗಣದಲ್ಲಿ ನಡೆಯಿತು.

ರೋಟರಿ ಜಿಲ್ಲೆ 3182ರ ಜಿಲ್ಲಾ ಗವರ್ನರ್ ಬಿ. ಸಿ. ಗೀತಾ‌ರವರು ದೀಪ ಪ್ರಜ್ವಲಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ವಿವಿಧ ಕೇತ್ರದಲ್ಲಿ ಗಣನೀಯ ಸೇವೆ ನೀಡುತ್ತಿರುವ ರೋಟರಿ ಜಿಲ್ಲೆ 3182‌ರ ಜಿಲ್ಲಾ ಗವರ್ನರ್ (ರಾಜ್ಯಪಾಲೆ) ಬಿ.ಸಿ. ಗೀತಾರವರಿಗೆ ಸಮಾಜಸೇವೆ, ಗ್ರಾಮೀಣ ಅಭಿವೃದ್ಧಿ, ಉತ್ತಮ ಸಂಘಟನೆ ಮೂಲಕ ಸಮಾಜಸೇವೆಯ ವಿಶೇಷ ಸಾಧನೆಯನ್ನು ಗುರುತಿಸಿ ರೋಟರಿ ಜನಸೇವಾ ಅವಾರ್ಡ್ ಪ್ರಶಸ್ತಿಯನ್ನು ಮುಖ್ಯ ಅತಿಥಿಗಳಾಗಿ ಶಾಲಾ ಸಮಿತಿಯ ಅಧ್ಯಕ್ಷರು ಹಾಗೂ ಶಾಸಕರಾದ ಯಶಪಾಲ್ ಸುವರ್ಣ ನೀಡಿ ಗೌರವಿಸಿದರು.

ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ವಿಶಿಷ್ಟ ಸೇವೆಯನ್ನು ಗುರುತಿಸಿ DIAT ಉಪ ಪ್ರಾಂಶುಪಾಲರು ಡಾ ಅಶೋಕ್ ಕಾಮತ್‌ರವರಿಗೆ ರೋಟರಿ ಜಿಲ್ಲಾ ಗವರ್ನರ್ ಬಿ. ಸಿ. ಗೀತಾ ರವರು ಪ್ರಶಸ್ತಿ ಪ್ರಧಾನ ಮಾಡಿ ಶುಭ ಹಾರೈಸಿದರು.

ಪರಿಸರ ಸಂರಕ್ಷಣೆ, ಕೃಷಿ ಭೂಮಿಯ ಫಲವತ್ತತೆ ಕುರಿತು ವಿಶೇಷ ಅಧ್ಯಯನ ಮಾಡಿ ಸಾಧನೆಗೈದ ZUARI ಆಗ್ರೀ ಕೆಮಿಕಲ್ ಸೀನಿಯರ್ ಮೆನೇಜರ್ ಅನಂತ ಪ್ರಭು ಗೋವಾ‌ರವರಿಗೆ ರೋಟರಿ ನಿಕಟಪೂರ್ವ ಜಿಲ್ಲಾ ಗವರ್ನರ್ ಡಾ. ಗೌರಿ ರೋಟರಿ ಅವಾರ್ಡ್ ನೀಡಿ ಗೌರವಿಸಿದರು.

ವೇದಿಕೆಯಲ್ಲಿ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ‌ರಾದ ಗಣಪತಿ, ಬಿಇಒ ಡಾ ಯಲ್ಲಮ್ಮ, ಸಹಾಯಕ ಗವರ್ನರ್ ಪ್ರೇಮಕುಮಾರ್, ಮಹಿಳಾ ಕಾಲೇಜಿನ ಪ್ರಿನ್ಸಿಪಾಲ್ ಡಾ ಸುಮಾ, ಮಹಿಳಾ ಹೈಸ್ಕೂಲ್ ಮುಖ್ಯ ಉಪಾಧ್ಯಾಯನಿ ಇಂದಿರಾ, ಕಾರ್ಯದರ್ಶಿ ಡಾ ಶ್ರೀಕಾಂತ್ ಪ್ರಭು, ರೇಣು ಜಯರಾಂ, ಡಾ ಗಿರಿಜಾ, ಜೈವಿಠಲ್, ರಾಮಚಂದ್ರ ಉಪಧ್ಯಾಯ, ರೋಟರಿ ಪಧಾದಿಕಾರಿಗಳು ಉಪಸ್ಥಿತರಿದ್ದರು.

ರೋಟರಿ ಪದಾಧಿಕಾರಿಗಳು, ಶಾಲಾ ಶಿಕ್ಷಕರು, ನೂರಾರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ರೋಟರಿ ಕ್ಲಬ್ ಮಣಿಪಾಲ್ ಅಧ್ಯಕ್ಷರಾದ ಶ್ರೀಪತಿ ಸ್ವಾಗತಿಸಿದರು. ರೋಟರಿ ಸೇವಾ ನಿರ್ದೇಶಕ ಅಮಿತ್ ಅರವಿಂದ್ ನಾಯಕ್ ಕಾರ್ಯಕ್ರಮದ ನಿರೂಪಣೆಗೈದರು. ರೋಟರಿ ರಾಜವರ್ಮ ವಂದನಾರ್ಪಣೆಗೈದರು.

Related posts

ಕೋಟತಟ್ಟುವಿನಲ್ಲಿ ಹೆಜ್ಜೇನು ದಾಳಿ : ಇಬ್ಬರ ಸ್ಥಿತಿ ಗಂಭೀರ

ಬಾಕಿ ಇರುವ ಮನೆಹಾನಿ, ಬೆಳೆಹಾನಿ ಪರಿಹಾರ ತಕ್ಷಣ ವಿತರಿಸಿ – ಅಧಿಕಾರಿಗಳಿಗೆ ಎಡಿಸಿ ಸೂಚನೆ

ಸಿಬ್ಬಂದಿಗಳಿಗೆ ಝೂನೋಟಿಕ್ ರೋಗಗಳ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕುರಿತ ತರಬೇತಿ ಸಾಧನಗಳನ್ನು ಪ್ರಾರಂಭಿಸಿದ ಪ್ರಸನ್ನ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್