NewsDesk

ಸರಕಾರಿ ಶಾಲೆಗೆ 1 ಕೋಟಿ ದೇಣಿಗೆ ನೀಡಿದ ಹಳೆ ವಿದ್ಯಾರ್ಥಿ! ಕಾವೂರು ಶಾಲೆಯ ನೂತನ ಕಟ್ಟಡಕ್ಕೆ ಶಂಕುಸ್ಥಾಪನೆ

ಕಾವೂರು : ದ.ಕ.ಜಿ.ಪಂ. ಮಾದರಿ ಹಿರಿಯ ಪ್ರಾಥಮಿಕ ಶಾಲೆ ಕಾವೂರು ಇದರ ನೂತನ ಕಟ್ಟಡದ ಶಂಕುಸ್ಥಾಪನೆ ಬುಧವಾರ ಬೆಳಗ್ಗೆ ನಡೆಯಿತು. ಕೊಡುಗೈ ದಾನಿ ಶಾಲೆಯ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕೇಶವ ಅಮೀನ್ ಅವರು ಅಂದಾಜು 1 ಕೋಟಿ ರೂ. ವೆಚ್ಚದಲ್ಲಿ…

Read more

ಜಿಲ್ಲೆಯಲ್ಲಿ ಕಾಲರಾ ಭೀತಿ : ಸಾರ್ವಜನಿಕರು ಸ್ವಚ್ಛತೆಗೆ ಆದ್ಯತೆ ನೀಡಿ – ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ

ಉಡುಪಿ : ಜಿಲ್ಲೆಯ ಕೆಲವು ಭಾಗಗಳಲ್ಲಿ ಕಾಲರಾ ಪ್ರಕರಣಗಳು ಕಂಡುಬಂದಿದ್ದು, ಸಾರ್ವಜನಿಕರು ಈ ಬಗ್ಗೆ ಎಚ್ಚರದಿಂದ ಇದ್ದು ಸ್ವಚ್ಛತೆಗೆ ಆದ್ಯತೆ ನೀಡಿದ್ದಲ್ಲಿ, ಕಾಲರಾ ರೋಗದಿಂದ ದೂರವಿರಲು ಸಾಧ್ಯ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಹೇಳಿದರು.ಅವರು ಇಂದು ನಗರದ ರಜತಾದ್ರಿಯ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ…

Read more

ಷೇರು ಮಾರುಕಟ್ಟೆಯ ಲಾಭಾಂಶ ನೀಡುವುದಾಗಿ ನಂಬಿಸಿ ಲಕ್ಷಾಂತರ ರೂ. ಆನ್‌ಲೈನ್ ವಂಚನೆ

ಉಡುಪಿ : ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ನೀಡುವುದಾಗಿ ನಂಬಿಸಿ ಲಕ್ಷಾಂತರ ರೂ. ಆನ್‌ಲೈನ್ ವಂಚನೆ ಎಸಗಿರುವ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕುಂಜಿಬೆಟ್ಟುವಿನ ಅಶ್ವಿನ್ ಕಾಮತ್(42) ಎಂಬವರನ್ನು ಅಪರಿಚಿತರು ವಾಟ್ಸಾಪ್…

Read more

ಡೆನ್ಮಾರ್ಕ್‌ನಲ್ಲಿ ವಿಶ್ವ ಅಗ್ನಿಶಾಮಕ ಕ್ರೀಡಾಕೂಟ – ಉಡುಪಿಯ ಇಬ್ಬರು ಸಿಬ್ಬಂದಿಗೆ ಚಿನ್ನದ ಪದಕ

ಉಡುಪಿ : ಡೆನ್ಮಾರ್ಕ್‌ನಲ್ಲಿ ನಡೆದ 15ನೇ ವಿಶ್ವ ಅಗ್ನಿಶಾಮಕ ಕ್ರೀಡಾಕೂಟದಲ್ಲಿ ಉಡುಪಿ ಜಿಲ್ಲಾ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಿಬ್ಬಂದಿ ಅಶ್ವಿನ್ ಸನಿಲ್ ಮತ್ತು ಕುಮಟಾ ಅಗ್ನಿಶಾಮಕ ದಳದ ಸಿಬ್ಬಂದಿ ರಾಜೇಶ್ ಮಡಿವಾಳ ಚಿನ್ನದ ಪದಕದೊಂದಿಗೆ ಭಾರತಕ್ಕೆ ಹಿಂತಿರುಗಿದ್ದಾರೆ. ಅಶ್ವಿನ್ ಸನಿಲ್…

Read more

ಧಾರ್ಮಿಕ ಕೇಂದ್ರದಿಂದ ಶಾಸಕ ಸುನಿಲ್ ಕುಮಾರ್‌ನ್ನು ಬಹಿಷ್ಕರಿಸಿ

ಉಡುಪಿ : ಕಾರ್ಕಳ ಶಾಸಕ ಸುನಿಲ್ ಕುಮಾರ್ ತಾನು ಮಾಡಿದ ಅವ್ಯವಹಾರ, ಬೇನಾಮಿ ದುಡ್ಡು, ಕರ್ಮಕಾಂಡ ಇವೆಲ್ಲವನ್ನೂ ಉಳಿಸಲು ಧರ್ಮವನ್ನು ಎದುರು ತಂದು ಜನರನ್ನು ಮೋಸ ಮಾಡುತ್ತಿದ್ದಾರೆ. ಜಗತ್ತಿನಲ್ಲೇ ಇಷ್ಟೊಂದು ಧರ್ಮಕ್ಕೆ ಅಪಪ್ರಚಾರ ಮಾಡಿದವರು ಯಾರು ಇಲ್ಲ. ಇವರನ್ನು ಧಾರ್ಮಿಕ ಕೇಂದ್ರದೊಳಗೆ…

Read more

ಮಗನಿಂದ ಕಿರುಕುಳ – ತಾಯಿ ಸಖಿ ಸೆಂಟರ್‌ಗೆ ದಾಖಲು

ಉಡುಪಿ : ಮಾನಸಿಕ ಅಸ್ವಸ್ಥ ಮಗನ ಹಲ್ಲೆಗೆ ಹೆದರಿ ಜಿಲ್ಲಾಸ್ಪತ್ರೆಯಲ್ಲಿ ದುಃಖಿಸುತ್ತಿದ್ದ ಅಸಹಾಯಕ ಮಹಿಳೆಯನ್ನು ಸಮಾಜ ಸೇವಕ ವಿಶು ಶೆಟ್ಟಿ ಅವರು ಉಡುಪಿಯ ಸಖಿ ಸೆಂಟರ್‌ಗೆ ದಾಖಲಿಸಿದ್ದಾರೆ. ಕಾಪು ಠಾಣೆ ವ್ಯಾಪ್ತಿಯಲ್ಲಿ ವಾಸವಾಗಿರುವ ಈ ಕುಟುಂಬದಲ್ಲಿ ಮಹಿಳೆಯ ಮಗ ಮಾನಸಿಕ ಅಸ್ವಸ್ಥಗೊಂಡು…

Read more

ಪಣಿಯಾಡಿಯಲ್ಲಿ ಅನಂತವ್ರತ ಹಾಗೂ ಕದಳಿ ಪೂಜೆ

ಉಡುಪಿ : ಪಣಿಯಾಡಿ ಶ್ರೀ ಅನಂತಾಸನ ಶ್ರೀ ಲಕ್ಷ್ಮೀ ಅನಂತ ಪದ್ಮನಾಭ ದೇವಸ್ಥಾನದಲ್ಲಿ ಅನಂತವ್ರತ ಕಾರ್ಯಕ್ರಮ ದೇವಾಲಯದ ತಂತ್ರಿಗಳವರಾದ ಹಯವದನ ತಂತ್ರಿ, ವಾದಿರಾಜ ತಂತ್ರಿ, ಪ್ರದಾನ ಅರ್ಚಕ ರಾಘವೇಂದ್ರ ಭಟ್, ಪುತ್ತಿಗೆ ಮಠದ ದಿವಾನರಾದ ನಾಗರಾಜ ಆಚಾರ್ಯ ಹಾಗೂ ಅನಂತ ವಿಪ್ರ…

Read more

ಚಿರತೆಯ ಹಾವಳಿಗೆ ಸಾಕು ನಾಯಿ ಬಲಿ

ಉಡುಪಿ : ಉಡುಪಿಯ ಪೆರ್ಡೂರು ಸಮೀಪ ಚಿರತೆಯ ದಾಳಿಯಿಂದ ಜನತೆ ಆತಂಕಗೊಂಡಿದ್ದು, ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ಜನವಸತಿ ಪ್ರದೇಶಗಳಲ್ಲಿ ಇಂತಹ ಘಟನೆಗಳು ಹೆಚ್ಚಾಗುತ್ತಿವೆ. ಚಿರತೆಗಳು ಸಾಕುಪ್ರಾಣಿಗಳನ್ನು ಬೇಟೆಯಾಡುತ್ತಿದ್ದು, ಇತ್ತೀಚಿಗೆ ಪೆರ್ಡೂರು ಗೋರೇಲ್‌ನಲ್ಲಿ ಹರಿನಾರಾಯಣ ಭಂಡಿಯವರ ಮನೆಯ ಸಾಕು ನಾಯಿ ಚಿರತೆಯ ಹಾವಳಿಗೆ…

Read more

ಪ್ರಾಕೃತಿಕ ವಿಕೋಪ ತುರ್ತು ಪರಿಹಾರ ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳ ಕಾರ್ಯವೈಖರಿ ಅಭಿನಂದನಾರ್ಹ : ಯಶ್‌ಪಾಲ್ ಸುವರ್ಣ

ಉಡುಪಿ : ಪ್ರಾಕೃತಿಕ ವಿಕೋಪಗಳು ಸಂಬಂಧಿಸಿದಾಗ ಸ್ಥಳೀಯಾಡಳಿತ ಜೊತೆಗೆ ಪರಿಹಾರ ಕಾರ್ಯಾಚರಣೆಯಲ್ಲಿ ಹಗಲಿರುಳು ಶ್ರಮಿಸಿ ಸಾರ್ವಜನಿಕರ ಸೇವೆಗೆ ಶೀಘ್ರವಾಗಿ ಸ್ಪಂದಿಸುವ ವಿವಿಧ ಇಲಾಖೆಗಳ ಸಿಬ್ಬಂದಿ ಹಾಗೂ ಸ್ವಯಂ ಸೇವಕರ ಕಾರ್ಯ ಅಭಿನಂದನಾರ್ಹ ಎಂದು ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಹೇಳಿದರು. ಪ್ರಧಾನಿ…

Read more

WGSHA ವಿದ್ಯಾರ್ಥಿಯಿಂದ ಪಾಕಶಾಲೆಯ ಶ್ರೇಷ್ಠತೆಯಲ್ಲಿ ವರ್ಲ್ಡ್ ಸ್ಕಿಲ್ಸ್ ಲಿಯಾನ್ 2024‌ರಲ್ಲಿ ಭಾರತಕ್ಕೆ ಐತಿಹಾಸಿಕ ಸಾಧನೆ

ಮಣಿಪಾಲ : ಫ್ರಾನ್ಸ್‌ನ EUREXPO ಲಿಯಾನ್‌ನಲ್ಲಿ ಸೆಪ್ಟೆಂಬರ್ 10 ರಿಂದ 15, 2024 ರವರೆಗೆ ನಡೆದ 47ನೇ ವಿಶ್ವ ಕೌಶಲ್ಯ ಸ್ಪರ್ಧೆಯು 70 ಕ್ಕೂ ಹೆಚ್ಚು ದೇಶಗಳಿಂದ 1,400 ಸ್ಪರ್ಧಿಗಳ ಭಾಗವಹಿಸುವಿಕೆಗೆ ಸಾಕ್ಷಿಯಾಯಿತು. ಎಲ್ಲರೂ ತಮ್ಮ ಕೌಶಲ್ಯಗಳಲ್ಲಿ ಗುರುತಿಸಿಕೊಳ್ಳಲು ಸ್ಪರ್ಧಿಸುತ್ತಿದ್ದಾರೆ. ಈ…

Read more