NewsDesk

ಉಡುಪಿ ಆದರ್ಶ ಆಸ್ಪತ್ರೆಯಲ್ಲಿ ವೈದ್ಯರ ದಿನಾಚರಣೆ

ಉಡುಪಿ : ಆದರ್ಶ ಆಸ್ಪತ್ರೆಯಲ್ಲಿ ವೈದ್ಯರ ದಿನಾಚರಣೆ ಕಾರ್ಯಕ್ರಮ ಭಾನುವಾರ ನಡೆಯಿತು. ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ವೈದ್ಯರು ದೇವರಿಗೆ ಸಮಾನ ಎಂಬ ಭಾವನೆ ಸಮಾಜದಲ್ಲಿದೆ. ಜೀವ ಉಳಿಸುವ ವೈದ್ಯರು ಹಾಗೂ ಜೀವನ ರೂಪಿಸುವ…

Read more

ಮಾಹೆಯಲ್ಲಿ ವೈಲ್ಡರ್‌ನೆಸ್‌ ಮೆಡಿಸಿನ್‌ ಆ್ಯಂಡ್‌ ಕನ್ಸರ್ವೇಶನ್‌ ರಿಸರ್ಚ್‌ ಸೆಂಟರ್‌ ಉದ್ಘಾಟನೆ

ಮಣಿಪಾಲ : ಮಣಿಪಾಲ್‌ ಅಕಾಡೆಮಿ ಆಫ್‌ ಹೈಯರ್‌ ಎಜುಕೇಶನ್‌ [ಮಾಹೆ] ಮಾಹೆ-ವನ್ಯಸ್ಥ ವೈದ್ಯಕೀಯ ಮತ್ತು ಸುರಕ್ಷಾ ಸಂಶೋಧನ ಕೇಂದ್ರ [ಮಾಹೆ-ವೈಲ್ಡರ್‌ನೆಸ್‌ ಮೆಡಿಸಿನ್‌ ಆ್ಯಂಡ್‌ ಕನ್ಸರ್ವೇಶನ್‌ ರಿಸರ್ಚ್‌ ಸೆಂಟರ್‌]ನ್ನು ಇತ್ತೀಚೆಗೆ ಮಣಿಪಾಲದ ಕಂಚಿನಬೈಲುವಿನಲ್ಲಿ ಆರಂಭಿಸಿತು. ಮಾಹೆಯ ವನ್ಯಸ್ಥ ವೈದ್ಯಕೀಯ ಕೇಂದ್ರ [ಸೆಂಟರ್‌ ಫಾರ್‌…

Read more

ಜು.09 ರಂದು ಉಡುಪಿ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿದ ಜಿಲ್ಲಾಧಿಕಾರಿ

ಉಡುಪಿ : ಉಡುಪಿ ಜಿಲ್ಲೆಯಲ್ಲಿ ವ್ಯಾಪಕ ಮಳೆ ಮುಂದುವರಿದಿದ್ದು ರೆಡ್ ಅಲರ್ಟ್ ಘೋಷಿಸಲಾಗಿದೆ. ಅದರಂತೆ ಉಡುಪಿ ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳಿಗೆ ಮಂಗಳವಾರ(ಜು.09) ಜಿಲ್ಲಾಡಳಿತ ರಜೆ ಘೋಷಿಸಿ ಆದೇಶ ಹೊರಡಿಸಿದೆ. ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಮಳೆಯ ತೀವ್ರತೆ ಹೆಚ್ಚಾಗುವುದರಿಂದ ಮುಂಜಾಗೃತ ಕ್ರಮವಾಗಿ…

Read more

ಕ್ಷೇತ್ರದ ನೆರೆಪೀಡಿತ ಪ್ರದೇಶಕ್ಕೆ ಶಾಸಕ ಗುರುರಾಜ್‌ ಗಂಟಿಹೊಳೆ ಭೇಟಿ : ಅಗತ್ಯ ತುರ್ತು ‌ಕ್ರಮ, ಪರಿಹಾರಕ್ಕೆ ಸೂಚನೆ

ಬೈಂದೂರು : ಪುನರ್ವಸು ಮಳೆಯ ಆರ್ಭಟ ಜೋರಾಗಿದ್ದು ಬೈಂದೂರು ತಾಲ್ಲೂಕಿನ ಹಲವು ಭಾಗಗಳಲ್ಲಿ ನೆರೆ, ನೆರೆಭೀತಿ ಎದುರಾಗಿದ್ದು ಶಾಸಕರಾದ ಗುರುರಾಜ್ ಗಂಟಿಹೊಳೆ ಅವರು ಸ್ಥಳೀಯ ಮುಖಂಡರು ಹಾಗೂ ಅಧಿಕಾರಿಗಳೊಂದಿಗೆ ಸ್ಥಳಕ್ಕೆ‌ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನೆರೆಯಿಂದಾಗಿ ಇಡೀ ತಾಲೂಕಿಗೆ ಹಲವು…

Read more

ಕುಮಾರಧಾರಾ ನದಿಯಲ್ಲಿ ಸಿಲುಕಿದ ವ್ಯಕ್ತಿಯ ರಕ್ಷಣೆ

ಕಡಬ : ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾ| ಕುಮಾರಧಾರಾ ನದಿಯಲ್ಲಿ ಸಿಲುಕಿದ ವ್ಯಕ್ತಿಯ ರಕ್ಷಣೆ ಮಾಡಲಾಗಿದೆ. ಕಡಬ ತಾಲೂಕಿನ ಪುಳಿಕುಕ್ಕು ಎಂಬಲ್ಲಿ ಘಟನೆ ನಡೆದಿದೆ. ಬೆಂಗಳೂರು ಮೂಲದ ರವಿಕುಮಾರ್ ಎಂಬ ವ್ಯಕ್ತಿ ತುಂಬಿ ಹರಿಯುತ್ತಿರುವ ಕುಮಾರಧಾರಾ ನದಿಯಲ್ಲಿ ಇಳಿದಿದ್ದರು, ಈ…

Read more

ಜುಲೈ 9ರಂದು ಡಾ.ಟಿ.ಎಂ.ಎ.ಪೈ ರೋಟರಿ ಆಸ್ಪತ್ರೆಯಲ್ಲಿ ಉಚಿತ ಮೂಳೆಯ ಖನಿಜಾಂಶಗಳ ಸಾಂದ್ರತೆ ಪರೀಕ್ಷಾ ಶಿಬಿರ

ಕಾರ್ಕಳ : ಮೂಳೆಗಳನ್ನು ದುರ್ಬಲಗೊಳಿಸುವ ಮತ್ತು ಮುರಿತದ ಅಪಾಯವನ್ನು ಹೆಚ್ಚಿಸುವ ಸ್ಥಿತಿಯಾದ ಆಸ್ಟಿಯೊಪೊರೋಸಿಸ್, ಅದರ ಬಗ್ಗೆ ಅರಿವಿನ ಕೊರತೆಯಿಂದಾಗಿ ಪತ್ತೆಯಾಗುವುದೇ ಇಲ್ಲ. ಇದು ಪ್ರಧಾನವಾಗಿ ಋತುಬಂಧಕ್ಕೊಳಗಾದ ಮಹಿಳೆಯರ ಮೇಲೆ ಪರಿಣಾಮ ಬೀರುತ್ತದೆ ಮತ್ತು ಇದನ್ನು ತಡೆಗಟ್ಟಲು ಆರಂಭಿಕ ರೋಗನಿರ್ಣಯವು ನಿರ್ಣಾಯಕವಾಗಿದೆ. ಈ…

Read more

ಮಳೆಯ ನೆರೆಯಲ್ಲೇ ಕಷ್ಟದಿಂದ ಶಾಲೆಗೆ ತೆರಳಿದ ಮಕ್ಕಳು

ಉಡುಪಿ : ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಉಡುಪಿ ನಗರಸಭೆ ವ್ಯಾಪ್ತಿಯ ಹಲವೆಡೆ ಮನೆಗಳು ಜಲಾವೃತಗೊಂಡಿದೆ. ರವಿವಾರ ಹಾಗೂ ಸೋಮವಾರ ಮಳೆಯ ಪ್ರಮಾಣ ಹೆಚ್ಚಾಗಿದ್ದು, ಸೋಮವಾರ ಮುಂಜಾನೆ ಭಾರೀ ಮಳೆಯ ನಡುವೆಯೇ ಮಕ್ಕಳು ಶಾಲೆಗೆ ತೆರಳಿದ ದೃಶ್ಯಕಂಡು ಬಂತು.…

Read more

ಕೆ.ಎಸ್.ಆರ್.ಟಿ.ಸಿ ಬಸ್ಸು ಹಾಗೂ ಬೈಕ್ ನಡುವಿನ ಅಪಘಾತಕ್ಕೆ ಸವಾರ ಬಲಿ

ಬಂಟ್ವಾಳ : ರಾ.ಹೆ.75ರ ಫರಂಗಿಪೇಟೆ ಸಮೀಪದ ಮಾರಿಪಳ್ಳದಲ್ಲಿ ಕೆ.ಎಸ್.ಆರ್.ಟಿ.ಸಿ ಬಸ್ಸು ಹಾಗೂ ದ್ವಿಚಕ್ರ ವಾಹನ ನಡುವೆ ಸಂಭವಿಸಿದ ಅಪಘಾತದಲ್ಲಿ ಸವಾರ ಮೃತಪಟ್ಟ ಘಟನೆ ರವಿವಾರ ನಡೆದಿದೆ. ದ್ವಿಚಕ್ರ ವಾಹನ ಸವಾರ ಬೆಂಜನಪದವು ನಿವಾಸಿ ನಯನ್ ಕುಮಾರ್ ಮೃತಪಟ್ಟ ದುರ್ಧೈವಿ. ಕಡೆಗೋಳಿ ಭಾಗದಿಂದ…

Read more

ಡೆಂಗ್ಯೂ ಚಿಕಿತ್ಸೆಯ ಸಂಪೂರ್ಣ ಹೊಣೆ ಸರ್ಕಾರ ಹೊರಬೇಕು : ಆರ್. ಅಶೋಕ್

ಬೆಂಗಳೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಡೆಂಗ್ಯೂ ಮಹಾಮಾರಿಯ ಅಬ್ಬರ ಜೋರಾಗುತ್ತಿದೆ. ಸರ್ಕಾರ ಮಾತ್ರ ಇನ್ನೂ ಸರಿಯಾದ ಮುಂಜಾಗ್ರತಾ ಕ್ರಮ ಕೈಗೊಳ್ಳಲಿಲ್ಲ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಇಂದು ಜಯನಗರದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಡೆಂಗ್ಯೂ ರೋಗಿಗಳ…

Read more

ಮೊಬೈಲ್ ಟವರ್ ಬ್ಯಾಟರಿ ಕದಿಯುತ್ತಿದ್ದ ಕಳ್ಳ ಅರೆಸ್ಟ್

ಮಂಗಳೂರು : ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೊಬೈಲ್ ಟವರ್‌ಗಳ ಬ್ಯಾಟರಿಗಳನ್ನು ಮತ್ತು ಕಂಪೌಂಡ್ ಗೇಟ್‌ಗಳನ್ನು ಕಳ್ಳತನ ಮಾಡಿದ ಆರೋಪಿಯನ್ನು ಮುಲ್ಕಿ ಪೊಲೀಸರು ಅರೆಸ್ಟ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಯನ್ನು ಕೇರಳ ಇಟ್ಟಿ ಪನಿಕರ್(58) ಎಂದು ಗುರುತಿಸಲಾಗಿದೆ. ಆರೋಪಿ ಮುಲ್ಕಿ ಪೊಲೀಸ್…

Read more