NewsDesk

ಸಾಮಾಜಿಕ ಸಮಾನತೆ ಮತ್ತು ಸಹಬಾಳ್ವೆ ಅಂಬೇಡ್ಕರ್‌ರವರ ಆಶಯವಾಗಿತ್ತು : ಜಯನ್ ಮಲ್ಪೆ

ಉಡುಪಿ : ಸ್ವಾತಂತ್ರ್ಯ ಸಮಾನತೆ ಮತ್ತು ಸಹೋದರತ್ವ ಸಂವಿಧಾನದ ಮೂಲಭೂತ ಆಶಯವಾಗಿದೆ. ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆ ಇಂದಿನ ದಿನಗಳಲ್ಲಿ ಹೆಚ್ಚಾಗುತ್ತಿರುವಂತದ್ದು ಬಹಳ ಆತಂಕಕಾರಿಯಾಗಿದೆ. ಸಾಮಾಜಿಕ ಸಮಾನತೆ ಮತ್ತು ಸಾಮಾಜಿಕ ನ್ಯಾಯ ಒದಗಿಸುವಂಥದ್ದು ಸರ್ಕಾರದ ಕರ್ತವ್ಯವಾಗಿದೆ ಹಾಗಾದಾಗ ಅಂಬೇಡ್ಕರ್ ಜಯಂತಿ ಅರ್ಥಪೂರ್ಣವಾಗುತ್ತದೆ…

Read more

ಇಂದ್ರಾಳಿಯ ರೈಲ್ವೆ ನಿಲ್ದಾಣದ ಮೇಲ್ಸೇತುವೆಗೆ, ಮೇಲ್ಛಾವಣಿ ಅಳವಡಿಸುವಂತೆ ಆಗ್ರಹ

ಉಡುಪಿ : ಉಡುಪಿ ಇಂದ್ರಾಳಿ ರೈಲು ನಿಲ್ದಾಣದಲ್ಲಿರುವ ಮೇಲ್ಸೇತುವೆಗೆ ಮೇಲ್ಛಾವಣಿ ವ್ಯವಸ್ಥೆಯಿಲ್ಲದೆ, ಪ್ರಯಾಣಿಕರು ಬಿಸಿಲು ಮತ್ತು ಮಳೆಯಿಂದ ರಕ್ಷಿಸಿಕೊಳ್ಳಲು ಅಸಹಾಯಕ ಪರಿಸ್ಥಿತಿ ಎದುರಾಗಿದೆ. ಇತ್ತೀಚಿನ ದಿನದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಪ್ರಯಾಣಿಕರು ಇಂದ್ರಾಳಿ ರೈಲು ನಿಲ್ದಾಣದ ಮೇಲ್ಸೇತುವೆಯನ್ನು ಸಂಚರಿಸಲು ಬಳಸುತ್ತಾರೆ. ಸೇತುವೆಗೆ ಮಾಡಿಲ್ಲದೆ…

Read more

ಕಾರ್ಕಳ ಗ್ರಾಮಾಂತರ ಠಾಣೆಗೆ ನೂತನ ಎಸ್ಐ ಆಗಿ ಪ್ರಸನ್ನ ಎಂ ಎಸ್ ಅಧಿಕಾರ ಸ್ವೀಕಾರ

ಕಾರ್ಕಳ : ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಎಸ್ಐ ದಿಲೀಪ್ ಅವರು ವರ್ಗಾವಣೆಗೊಂಡಿದ್ದು ನೂತನ ಎಸ್ಐ ಆಗಿ ಪ್ರಸನ್ನ ಎಂ ಎಸ್ ಅವರು ನಿನ್ನೆ ಅಧಿಕಾರವನ್ನು ಸ್ವೀಕರಿಸಿದರು. ಮೂಲತಃ ಹಾಸನದವರಾದ ದಿಲೀಪ್ ಅವರು ಪಡುಬಿದ್ರೆ, ಸುಳ್ಯ ಠಾಣೆಯಲ್ಲಿ ಕರ್ತವ್ಯವನ್ನು ನಿರ್ವಹಿಸಿ ನಂತರ…

Read more

ದಿಢೀ‌ರ್ ಸುರಿದ ಗಾಳಿ ಮಳೆಗೆ 26 ಮನೆಗಳಿಗೆ ಭಾಗಶಃ ಹಾನಿ; 53 ಲಕ್ಷಕ್ಕೂ ಹೆಚ್ಚು ಸೊತ್ತು ಹಾನಿ

ಉಡುಪಿ : ಜಿಲ್ಲೆಯಲ್ಲಿ ಸೋಮವಾರ ಸಂಜೆ ದಿಢೀ‌ರ್ ಸುರಿದ ಭಾರೀ ಗಾಳಿ ಮಳೆಗೆ ಎರಡು ಮನೆಗಳು ಸಂಪೂರ್ಣ ಹಾನಿಯಾಗಿದ್ದರೆ, 26 ಮನೆಗಳು ಭಾಗಶಃ ಹಾನಿಯಾಗಿದ್ದು 15.76 ಲಕ್ಷ ರೂ. ನಷ್ಟ ಅಂದಾಜಿಸಲಾಗಿದೆ. ಮೆಸ್ಕಾಂಗೆ ಸರಿ ಸುಮಾರು 53 ಲಕ್ಷ ಹಾಗೂ 15…

Read more

ಮಲ್ಪೆ ಬೀಚ್ ಬಳಿ ಹೋಟೆಲ್‌ನಲ್ಲಿ ಅಗ್ನಿ ಅವಘಡ – ಲಕ್ಷಾಂತರ ಮೌಲ್ಯದ ವಸ್ತುಗಳು ಬೆಂಕಿಗಾಹುತಿ

ಮಲ್ಪೆ : ಮಲ್ಪೆ ಬೀಚ್ ಬಳಿಯ ಹೋಟೆಲೊಂದರಲ್ಲಿ ರಾತ್ರಿ ವೇಳೆ ಅಗ್ನಿ ಅವಘಡ ಸಂಭವಿಸಿದ್ದು ಲಕ್ಷಾಂತರ ರೂ.ಮೌಲ್ಯದ ವಸ್ತುಗಳು ಬೆಂಕಿಗಾಹುತಿಯಾಗಿವೆ. ಸಚಿನ್ ಎಂಬವರಿಗೆ ಸೇರಿದ ಅಮ್ಮ ಹೋಟೆಲ್‌ನಲ್ಲಿ ಈ ದುರ್ಘಟನೆ ಸಂಭವಿಸಿದೆ. ರಾತ್ರಿ ಎಂದಿನಂತೆ ಸಿಬ್ಬಂದಿ ಹೋಟೆಲ್ ಬಂದ್ ಮಾಡಿ ಹೋದ…

Read more

ಕರ್ನಾಟಕ ಜಾನಪದ ಪರಿಷತ್ತು ರಾಜ್ಯಾಧ್ಯಕ್ಷ ಪ್ರೊ. ಹಿ.ಚಿ ಬೋರಲಿಂಗಯ್ಯ ಅವರಿಗೆ ತಲ್ಲೂರ್ಸ್ ಜಾನಪದ ರತ್ನ ಪ್ರಶಸ್ತಿ ಪ್ರದಾನ

ಉಡುಪಿ : ಬಯಲು ಸೀಮೆಯ ಮೂಡಲಪಾಯ, ಉತ್ತರ ಕರ್ನಾಟಕದ ಶ್ರೀಕೃಷ್ಣ ಪಾರಿಜಾತಾ ಮೊದಲಾದ ಕಲಾಪ್ರಕಾರಗಳು ಸೂಕ್ತ ಪ್ರೋತ್ಸಾಹವಿಲ್ಲದೆ ಅಳಿವಿನಂಚಿನಲ್ಲಿವೆ. ಆದರೆ ಕರಾವಳಿಯ ಯಕ್ಷಗಾನ ಇಂದು ವಿಶ್ವಧರ್ಜೆಯ ಕಲೆಯಾಗಿ ಮೆರೆಯುವಂತೆ ಮಾಡಿದ ಇಲ್ಲಿನ ವಿದ್ಯಾವಂತರು, ಕಲಾ ಪ್ರೋತ್ಸಾಹಕರು ಅಭಿನಂದನಾರ್ಹರು ಎಂದು ಕರ್ನಾಟಕ ಜಾನಪದ…

Read more

ಮನೆಯ ಮೇಲೆ ಆಲದ ಮರ ಬಿದ್ದು ಮನೆಯೊಳಗಿದ್ದ ದಂಪತಿಗೆ ಗಾಯ- ಮನೆಗೆ ಸಂಪೂರ್ಣ ಹಾನಿ

ಉಡುಪಿ : ಸೋಮವಾರ ಸಂಜೆ ಬೀಸಿದ ವೇಗದ ಗಾಳಿಗೆ ಬೃಹ‌ತ್ ಆಲದ ಮರವೊಂದು ಮನೆಯ ಮೇಲೆ ಉರುಳಿಬಿದ್ದ ಘಟನೆ ಕಡಿಯಾಳಿ ಕಟ್ಟೆ ಆಚಾರ್ಯ ಮಾರ್ಗದಲ್ಲಿ ಸಂಭವಿಸಿದೆ. ಈ ಸಂದರ್ಭ ಮನೆಯೊಳಗೆ‌‌ ಸಿಲುಕಿ‌ಕೊಂಡಿದ್ದ ದಂಪತಿಯನ್ನು ಸ್ಥಳೀಯರು ಹೊರ ತೆಗೆದಿದ್ದಾರೆ. ಘಟನೆಯಲ್ಲಿ ಇಬ್ಬರಿಗೂ ಗಂಭೀರ…

Read more

“ಯಕ್ಷಗಾನ ಕಲಿಕೆಯಿಂದ ಮಕ್ಕಳ ಸರ್ವತೋಮುಖ ಅಭಿವೃದ್ಧಿ” ಸಾಲಿಗ್ರಾಮದಲ್ಲಿ ಯಕ್ಷಗಾನ ನೃತ್ಯ ಅಭಿನಯ ತರಬೇತಿ ಶಿಬಿರ ಉದ್ಘಾಟಿಸಿ ಅಧ್ಯಕ್ಷ ಡಾ.ತಲ್ಲೂರು

ಉಡುಪಿ : ಮಕ್ಕಳಿಗೆ ಯಕ್ಷಗಾನ ಕಲಿಸುವುದರಿಂದ ಅವರಲ್ಲಿ ವಾಕ್ಚಾತುರ್ಯ, ಅಭಿನಯ, ನೃತ್ಯ, ಪೌರಾಣಿಕ ಪ್ರಸಂಗಗಳ ಬಗ್ಗೆ ಜ್ಞಾನವುಂಟಾಗುವುದಲ್ಲದೆ ಅವರ ಸರ್ವತೋಮುಖ ಬೆಳವಣಿಗೆಗೆ ಕಾರಣವಾಗುತ್ತದೆ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು. ಅವರು ಭಾನುವಾರ ಯಕ್ಷಗಾನ ಕೇಂದ್ರ…

Read more

ಯಕ್ಷಗಾನ ಅಕಾಡೆಮಿ ವತಿಯಿಂದ ಗುರುಪುರದಲ್ಲಿ ಯಕ್ಷಗಾನ ಕಮ್ಮಟ

ಉಡುಪಿ : ಯಕ್ಷಗಾನ ಸಾಂಸ್ಕೃತಿಕವಾಗಿ ಸಮಾಜವನ್ನು ಒಗ್ಗೂಡಿಸುತ್ತದೆ. ಕೇವಲ ಹಿಂದೂಗಳಷ್ಟೇ ಅಲ್ಲ, ಅನ್ಯ ಧರ್ಮಿಯ ಕಲಾವಿದರು ಇಲ್ಲಿ ತೊಡಗಿಸಿಕೊಂಡಿರುವುದು ಈ ಕಲೆಯ ವೈಶಿಷ್ಟ್ಯವಾಗಿದೆ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು. ಅವರು ಶನಿವಾರ ಮಂಗಳೂರು…

Read more

ಶೇಂದಿ ತೆಗೆಯುತ್ತಿದ್ದ ವೇಳೆ ತೆಂಗಿನ ಮರದಿಂದ ಬಿದ್ದು ವ್ಯಕ್ತಿ ಮೃತ್ಯು

ಉಳ್ಳಾಲ : ಶೇಂದಿ ತೆಗೆಯುತ್ತಿದ್ದ ವೇಳೆ ತೆಂಗಿನ ಮರದಿಂದ ಆಯತಪ್ಪಿ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಕೊಕ್ಯ ಸಮೀಪದ ಕನೀರುತೋಟದಲ್ಲಿ ನಡೆದಿದೆ. ಮೃತಪಟ್ಟ ವ್ಯಕ್ತಿಯನ್ನು ಕೊಲ್ಯ ಕನೀರುತೋಟದ ಬಲ್ಯ ನಡುಪೊಲಿಕೆ ನಿವಾಸಿ ಯಶೋಧರ್ (46) ಎಂದು ಗುರುತಿಸಲಾಗಿದೆ. ಯಶೋಧರ್ ಅವರು ಬೆಳಗ್ಗೆ…

Read more