NewsDesk

“ಕಲಾಂತರಂಗ 2023-24” ಬಿಡುಗಡೆ

ಯಕ್ಷಗಾನ ಕಲಾರಂಗದ ಒಂದು ವರ್ಷದ ಸಮಗ್ರ ಚಟುವಟಿಕೆಯ ವಿವರಗಳನ್ನು ಒಳಗೊಂಡ ಮುನ್ನೂರು ಪುಟಗಳ ಸಚಿತ್ರ ”ಕಲಾಂತರಂಗ 2023-24″ ವನ್ನು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗಡೆಯವರು ಅನಾವರಣಗೊಳಿಸಿದರು. ಈ ಸಂದರ್ಭದಲ್ಲಿ ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ.ಗಂಗಾಧರ್ ರಾವ್ ಮತ್ತು ಕಾರ್ಯದರ್ಶಿ…

Read more

ಭೂಗತ ಪಾತಕಿ ಕಲಿ ಯೋಗೀಶನ ಸಹಚರರಿಬ್ಬರ ಸೆರೆ : ಪಿಸ್ತೂಲ್, ರಿವಾಲ್ವರ್, ಸಜೀವ ಮದ್ದುಗಳು, ಮಾದಕ ವಸ್ತುಗಳ ವಶ

ಮಂಗಳೂರು : ನಗರದಲ್ಲಿ ಅಪರಾಧ ಕೃತ್ಯವನ್ನು ನಡೆಸುವ ಉದ್ದೇಶದಿಂದ ಅಕ್ರಮವಾಗಿ ಶಸ್ತ್ರಾಸ್ತ್ರವಾದ ಪಿಸ್ತೂಲ್, ರಿವಾಲ್ವರ್, ಸಜೀವ ಮದ್ದುಗುಂಡುಗಳು, ಮಾದಕ ವಸ್ತುಗಳನ್ನು ಹೊಂದಿಕೊಂಡಿದ್ದ ಕುಖ್ಯಾತ ಆರೋಪಿಗಳಿಬ್ಬರನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಕೇರಳ ರಾಜ್ಯ ಕಾಸರಗೋಡು ಜಿಲ್ಲೆಯ ಮುಹಮ್ಮದ್ ಹನೀಫ್ ಯಾನೆ ಅಲಿ…

Read more

ನಾಡಿನಲ್ಲಿ ಸಂಚಾರಿಸುತ್ತಿರುವ ಚಿರತೆ : ಸಾರ್ವಜನಿಕರಲ್ಲಿ ಹೆಚ್ಚಿದ ಆತಂಕ

ಮಣಿಪಾಲ : ಕಳೆದ ಒಂದು ವಾರದಿಂದ ಮಣಿಪಾಲ ಪರಿಸರದಲ್ಲಿ ನಿರಂತರ ಚಿರತೆ ಓಡಾಡುತ್ತಿದ್ದು, ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದೆ. ಅರಣ್ಯ ಇಲಾಖೆಯಿಂದ ಅತೀ ಶೀಘ್ರ ಚಿರತೆಯ ಜಾಡು ಹಿಡಿಯುವ ಕಾರ್ಯ ಆಗಬೇಕು ಎಂಬ ಆಗ್ರಹ ಜನರಿಂದ ವ್ಯಕ್ತವಾಗಿದೆ. ಕಳೆದ ಶುಕ್ರವಾರ ರಾತ್ರಿ ಪೆರಂಪಳ್ಳಿಯ…

Read more

ಭಾರೀ ಮಳೆ ಹಿನ್ನೆಲೆ ಉಡುಪಿ, ಕಾರ್ಕಳ, ಹೆಬ್ರಿ, ಕಾಪು ತಾಲೂಕುಗಳ ಶಾಲಾ ಕಾಲೇಜುಗಳಿಗೆ ಇಂದು ರಜೆ ಘೋಷಣೆ

ಉಡುಪಿ : ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಉಡುಪಿ ಜಿಲ್ಲೆಯ ಉಡುಪಿ, ಕಾಪು, ಕಾರ್ಕಳ, ಹೆಬ್ರಿ ತಾಲೂಕುಗಳ ಅಂಗನವಾಡಿ ಪ್ರಾಥಮಿಕ ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳಿಗೆ ಜು.31ರಂದು ರಜೆ ಘೋಷಿಸಿ ಆಯಾ ತಾಲೂಕಿನ…

Read more

ವಿನಯ್ ಕುಮಾರ್ ಸೊರಕೆ ಸತತ ಸೋಲಿನಿಂದ ಹತಾಶರಾಗಿದ್ದಾರೆ – ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಹೇಳಿಕೆ

ಕಾಪು : ಸತತ ಎರಡು ಬಾರಿಯ ಸೋಲಿನಿಂದ ವಿನಯ ಕುಮಾರ್ ಸೊರಕೆ ಕಂಗೆಟ್ಟಿದ್ದಾರೆ. ನಮ್ಮದೇ ಸರಕಾರ ಇದೆ, ನಾನು ಏನು ಆಗಿಲ್ಲ ಎಂಬ ಹತಾಶೆ ಅವರನ್ನು ಕಾಡುತ್ತಿದೆ ಎಂದು ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಲೇವಡಿ ಮಾಡಿದರು. ಕಾಪುವಿನಲ್ಲಿ ನಡೆದ…

Read more

ಟೈಗರ್ ಕಾರ್ಯಾಚರಣೆಯಿಂದ ತಿರುಗಿಬಿದ್ದ ಬೀದಿಬದಿ ವ್ಯಾಪಾರಿಗಳು – ಮನಪಾ ಆಯುಕ್ತರ ಕಚೇರಿಗೆ ಮುತ್ತಿಗೆ ಹಾಕಿ ಆಕ್ರೋಶ

ಮಂಗಳೂರು : ಮಹಾನಗರ ಪಾಲಿಕೆಯಿಂದ ನಡೆದ ಟೈಗರ್ ಕಾರ್ಯಾಚರಣೆಯನ್ನು ವಿರೋಧಿಸಿ ಬೀದಿಬದಿ ವ್ಯಾಪಾರಸ್ಥರು ಮನಪಾ ಆಯುಕ್ತರ ಕಚೇರಿಗೆ ಮುತ್ತಿಗೆ‌ ಹಾಕಿದ್ದಾರೆ. ಮನಪಾ ಅಧಿಕಾರಿಗಳು ನಿನ್ನೆ ಟೈಗರ್ ಕಾರ್ಯಾಚರಣೆ ಹೆಸರಿನಲ್ಲಿ ನಗರದ ಮಣ್ಣಗುಡ್ಡ, ಲೇಡಿಹಿಲ್, ಯೆಯ್ಯಾಡಿ, ಸೆಂಟ್ರಲ್ ಮಾರುಕಟ್ಟೆಯಲ್ಲಿನ ಗೂಡಂಗಡಿಗಳ ಮೇಲೆ ಅಂಗಡಿಗಳನ್ನು…

Read more

ಅಂಧ, ಮಾನಸಿಕ ಅಸ್ವಸ್ಥ ಯುವಕನಿಗೆ ಆಶ್ರಯ ನೀಡಿದ ಹೊಸಬೆಳಕು ಆಶ್ರಮ

ಉಡುಪಿ : ಅಂಧ ಹಾಗೂ ಮಾನಸಿಕ ಅಸ್ವಸ್ಥ ಯುವಕನಿಗೆ ಕಾರ್ಕಳ ಬೈಲೂರಿನ ರಂಗನಪಲ್ಕೆಯ ಹೊಸಬೆಳಕು ಆಶ್ರಮ ಆಶ್ರಯ ನೀಡಿ ಮಾನವೀಯತೆ ಮೆರೆದಿದೆ. ಯುವಕ ರಾಜೇಶ್ (27) ಹೊರ ರಾಜ್ಯದವನಾಗಿದ್ದು, ದೃಷ್ಟಿ ಹೀನನಾಗಿದ್ದು ಜೊತೆಗೆ ಮಾನಸಿಕ ಅಸ್ವಸ್ಥತೆಗೆ ಜಾರಿದ್ದ. ಈತ ಉಡುಪಿ ಜಿಲ್ಲಾಸ್ಪತ್ರೆಯಲ್ಲಿ…

Read more

ಭಾರಿ ಮಳೆ : ನಾಳೆ (ಜು.31) ಶಾಲೆ, ಪಿಯು ಕಾಲೇಜಿಗೆ ರಜೆ

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಶಾಲೆಗಳಿಗೆ ರಜೆ ಘೋಷಿಸಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಆದೇಶಿಸಿದ್ದಾರೆ. ಎಲ್ಲಾ ಅಂಗನವಾಡಿ, ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಪ್ರಾಥಮಿಕ, ಪ್ರೌಢಶಾಲೆ, ಪದವಿ ಪೂರ್ವ…

Read more

ಕೊರಗರ ಹೋರಾಟಕ್ಕೆ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಬೆಂಬಲ

ಮಣಿಪಾಲ : ಕೊರಗ ಅಭಿವೃದ್ದಿ ಸಂಘಗಳ ಒಕ್ಕೂಟ (ರಿ.) ಕರ್ನಾಟಕ-ಕೇರಳ ಇದರ ವತಿಯಿಂದ ಸಮುದಾಯದ ಯುವ ಜನರ 100% ಉದ್ಯೋಗ ಭರವಸೆ ಈಡೇರಿಕೆಗಾಗಿ ಹಾಗೂ ಕೃಷಿ ಭೂಮಿ ಹಕ್ಕು ಪತ್ರ ಮಂಜೂರಾತಿಗಾಗಿ ಉಡುಪಿ ಜಿಲ್ಲಾಧಿಕಾರಿಗಳ ಕಛೇರಿ ಎದುರು ಕಳೆದ 7 ದಿನಗಳಿಂದ…

Read more

ರಿಯಾಯಿತಿ ದರದಲ್ಲಿ ಪುಸ್ತಕ ಮಾರಾಟ

ಉಡುಪಿ : ಸ್ವಾತಂತ್ರ‍್ಯ ದಿನಾಚರಣೆ ಅಂಗವಾಗಿ, ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಎಲ್ಲಾ ಪ್ರಕಟಣೆಗಳನ್ನು ಅಗಸ್ಟ್ 2024ರ ಮಾಹೆಯಲ್ಲಿ ಶೇ.50 ರ ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುವುದು. ಓದುಗರು ಆನ್‌ಲೈನ್ http://www.kuvempubhashabharathi.karnataka.gov.in ಮೂಲಕ ಅಥವಾ ಜಿಲ್ಲೆಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ…

Read more