ತುಳುಕೂಟ ವತಿಯಿಂದ ಉಡುಪಿಯಲ್ಲಿ “ಆಟಿಡೊಂಜಿ ದಿನ”

ಉಡುಪಿ : ಉಡುಪಿಯ ತುಳುಕೂಟ ಸಂಘಟನೆ ಆಟಿಡೊಂಜಿ ದಿನ ಕಾರ್ಯಕ್ರಮವನ್ನು ಆಚರಿಸಿತು. ಆಷಾಢ ಅಮಾವಾಸ್ಯೆಯ ದಿನ ಹಾಳೆ ಮರದ ತೊಗಟೆಯ ರಸ ತೆಗೆದು ಕಷಾಯ ಮಾಡಿ ಕುಡಿಯುವುದು ತುಳುನಾಡಿನ ಸಂಪ್ರದಾಯ. ಮಳೆಗಾಲದಲ್ಲಿ ಆರೋಗ್ಯ ವೃದ್ಧಿಗಾಗಿ, ರೋಗ ರುಜಿನಗಳು ಬಾಧಿಸದಂತೆ ಈ ಕಷಾಯ ರಕ್ಷಾ ಕವಚವಾಗಿದೆ.

ರೈಲ್ವೆ ಸ್ಟೇಷನ್ ರಸ್ತೆಯ ಜಯಸಿಂಹ ಲಯನ್ಸ್ ಭವನದಲ್ಲಿ ಆಟಿ ಅಮಾವಾಸ್ಯೆ ಕಷಾಯ ಕುಡಿಯುವ ಅವಕಾಶವನ್ನು ಸಾರ್ವಜನಿಕರಿಗೆ ತುಳಕೂಟ ಕಲ್ಪಿಸಿ ಕೊಟ್ಟಿತು. ತುಳುಕುಟ ಸಂಘಟನೆ ಅಧ್ಯಕ್ಷ ಜಯಕರ್ ಶೆಟ್ಟಿ ಇಂದ್ರಾಳಿ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು. ನೂರಾರು ಜನ ಈ ಸಂದರ್ಭದಲ್ಲಿ ಆಟಿ ಕಷಾಯವನ್ನು ಕುಡಿದರು. ಕಷಾಯದ ಜೊತೆ ಮೆಂತೆ ಗಂಜಿ, ಮೆಂತೆ ಲಡ್ಡು, ಜಾರಿಗೆ ಹುಳಿಯನ್ನು ವಿತರಿಸಲಾಯಿತು. ಕಷಾಯ ತಯಾರಿಸಿದ ಕೃಷ್ಣಶೆಟ್ಟಿಗಾರ್ ಕುಟುಂಬಕ್ಕೆ ಈ ಸಂದರ್ಭದಲ್ಲಿ ತುಳುಕುಟ ಸನ್ಮಾನಿಸಿತು.

ಇದೇ ಸಂದರ್ಭದಲ್ಲಿ ಇಂದ್ರಾಳಿ ದೇವಸ್ಥಾನಕ್ಕೆ ಅಪರೂಪದ ರುದ್ರಾಕ್ಷಿ ಗಿಡವನ್ನು ಸಮರ್ಪಣೆ ಮಾಡಲಾಯಿತು.‌

Related posts

ನೆಕ್ಲಾಜೆ ಶ್ರೀ ಕಾಳಿಕಾಂಬೆಗೆ ಸ್ವರ್ಣ ಪಾದುಕೆ ಸಮರ್ಪಣೆ

ಶಾಸ್ತ್ರೀಪಾರ್ಕ್‌ ಫ್ಲೈಓವರ್‌ ತಳಭಾಗಕ್ಕೆ ಪೊಲೀಸ್‌ ನಿಯೋಜನೆ

ಕಾರು ಕಳವು ಗೈದ ಆರೋಪಿ ಪೊಲೀಸ್ ವಶಕ್ಕೆ