ನಿಷೇದಿತ ಮಾದಕ ವಸ್ತು ಎಂಡಿಎಂಎ ಸಾಗಾಟ ಮಾಡಲು ಯತ್ನ; ಇಬ್ಬರು ಆರೋಪಿಗಳ ಬಂಧನ

ಉಡುಪಿ : ಮಾದಕ ವಸ್ತು ಎಂಡಿಎಂಎ ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಉಡುಪಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕಟಪಾಡಿ ಕೋಟೆ ಗ್ರಾಮದ ನಿವಾಸಿ ಅಕ್ಬರ್ ಮುಹಮ್ಮದ್ ಬ್ಯಾರಿ (32) ಹಾಗೂ ಕಾಪು ಬಡಾ ಉಚ್ಚಿಲ ನಿವಾಸಿ ಎನ್ ಎಂ ಮಹಮ್ಮದ್ ಮುಕ್ದುಮ್ ಅಲಿ(28) ಬಂಧಿತ ಆರೋಪಿಗಳು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಉಡುಪಿ ನಗರ ಠಾಣೆ ಪೊಲೀಸರು, ಕೊರಂಗ್ರಪಾಡಿ ಗ್ರಾಮದ ಕೆಮ್ತೂರು ರೈಲ್ವೇ ಬ್ರಿಡ್ಜ್‌ ಬಳಿ ಕಾರಿನಲ್ಲಿ ನಿಷೇಧಿತ ಎಂಡಿಎಂಎ ಪೌಡರನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತರಿಂದ ಎಂಡಿಎಂಎ 69 ಗ್ರಾಂ 127 ಮಿಲಿ ಗ್ರಾಂ, ಮೊಬೈಲ್ ಪೋನ್-6, ನಗದು 1100 ರೂ., ಕಾರು-1, ಲೆನೆವೋ ಲ್ಯಾಪಟಾಪ್-1 ಹಾಗೂ ಇತರೆ ಸೊತ್ತುಗಳು ಸಹಿತ ಅಂದಾಜು 20,11,900 ಮೌಲ್ಯದ ಸೊತ್ತುಗಳನ್ನು ವಶಡಿಸಿಕೊಂಡಿದ್ದಾರೆ‌. ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

ನೆಕ್ಲಾಜೆ ಶ್ರೀ ಕಾಳಿಕಾಂಬೆಗೆ ಸ್ವರ್ಣ ಪಾದುಕೆ ಸಮರ್ಪಣೆ

ಮೂಡುಬಿದಿರೆಯಲ್ಲಿ ಲ್ಯಾಪ್‌ ಟಾಪ್‌ ಕಳ್ಳತನ: ಅಂತರ್ ಜಿಲ್ಲಾ ಕಳ್ಳ ಅರೆಸ್ಟ್

ಶಾಸ್ತ್ರೀಪಾರ್ಕ್‌ ಫ್ಲೈಓವರ್‌ ತಳಭಾಗಕ್ಕೆ ಪೊಲೀಸ್‌ ನಿಯೋಜನೆ