ಗಾಂಜಾ ಮಾರಾಟಕ್ಕೆ ಯತ್ನ – ಬಿಹಾರ ಮೂಲದ ವ್ಯಕ್ತಿ ಅರೆಸ್ಟ್, 1.50ಕೆಜಿ ಗಾಂಜಾ ವಶ

ಮಂಗಳೂರು : ನಗರದ ಹೊಸಬೆಟ್ಟು ಬೀಚ್ ರಸ್ತೆಯಲ್ಲಿ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಬಿಹಾರ ಮೂಲದ ವ್ಯಕ್ತಿಯೋರ್ವನನ್ನು ಸುರತ್ಕಲ್ ಪೊಲೀಸರು ಬಂಧಿಸಿದ್ದಾರೆ. ಬಿಹಾರ್ ರಾಜ್ಯದ ನಿವಾಸಿ ಸೋನಿ ಕುಮಾರ್(27) ಬಂಧಿತ ಆರೋಪಿ.

ಸುರತ್ಕಲ್ ಠಾಣಾ ಪೊಲೀಸರು ಹೊಸಬೆಟ್ಟು ಬಳಿ ಬೀಚ್ ರಸ್ತೆಯಲ್ಲಿ ಗಸ್ತು ತಿರುಗಾಡುತ್ತಿದ್ದರು‌. ಈ ವೇಳೆ ಹೆಗಲಿನಲ್ಲಿ ಬ್ಯಾಗ್ ಹಾಕಿಕೊಂಡು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಯುವಕನೋರ್ವನು ಪೊಲಿಸ್ ಜೀಪ್ ಅನ್ನು ಕಂಡ ತಕ್ಷಣ ಓಡಲು ಯತ್ನಿಸಿದ್ದಾನೆ‌‌. ಆತನನ್ನು ಪೊಲೀಸರು ಹಿಡಿದು ವಿಚಾರಿಸಿದರೆ, ಆತನು ಹಿಂದಿ ಭಾಷೆಯಲ್ಲಿ ಮಾತನಾಡಿದ್ದಾನೆ. ಓಡಿ ಹೋಗಲು ಕಾರಣವೇನು ಕೇಳಿದಾಗ ಮಾಹಿತಿ ನೀಡಲು ತಡವರಿಸಿದ್ದಾನೆ. ತಕ್ಷಣ ಕೂಲಂಕುಶವಾಗಿ ವಿಚಾರಿಸಿದಾಗ ತನ್ನ ಬ್ಯಾಗ್‌ನಲ್ಲಿ ಗಾಂಜಾ ಇರುವುದಾಗಿ ತಿಳಿಸಿದ್ದಾನೆ.

ತಾನು ಬಿಹಾರ ರಾಜ್ಯದಿಂದ ಗಾಂಜಾವನ್ನು ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ಮಾರಾಟ ಮಾಡಲು ತಂದಿರುವುದಾಗಿ ತಿಳಿಸಿದ್ದಾನೆ. ತಕ್ಷಣ ಆತನನ್ನು ವಶಕ್ಕೆ ತೆಗೆದುಕೊಂಡ ಸುರತ್ಕಲ್ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆರೋಪಿಯಿಂದ ಕೃತ್ಯಕ್ಕೆ ಉಪಯೋಗಿಸಿದ 30,000 ರೂ. ಮೌಲ್ಯದ ಸುಮಾರು 1.5 ಕೆಜಿ ಗಾಂಜಾ, 15,000 ರೂ. ಮೌಲ್ಯದ ಮೊಬೈಲ್ ಫೋನನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.

Related posts

ನಿಲ್ಲಿಸಿದ್ದ ಮೀನುಗಾರಿಕಾ ಬೋಟ್‌ನಲ್ಲಿ ಅಗ್ನಿ ಅವಘಡ – 15 ಲಕ್ಷ ರೂ.ನಷ್ಟ

ಸ್ಕೂಟರ್ ಹಾಗೂ ಗೂಡ್ಸ್ ರಿಕ್ಷಾ ಮುಖಮುಖಿ ಡಿಕ್ಕಿ – ಸವಾರ ಮೃತ್ಯು, ಸಹಸವಾರ ಗಂಭೀರ

ಫಾಸ್ಟ್‌ಟ್ಯಾಗ್‌ ಹೊಸ ನಿಯಮ ಜಾರಿ: ಕಡಿಮೆ ಬ್ಯಾಲೆನ್ಸ್ ಇದ್ರೆ ದುಪ್ಪಟ್ಟು ದಂಡ.!