ಕರ್ನಾಟಕ ಲಲಿತ ಕಲಾ ಅಕಾಡೆಮಿಗೆ ಸಹ ಸದಸ್ಯರಾಗಿ ಆಸ್ಟ್ರೋ ಮೋಹನ್ ನೇಮಕ

ಉಡುಪಿ : ಹಿರಿಯ ಕಲಾ ಛಾಯಾಗ್ರಾಹಕ ಆಸ್ಟ್ರೋ ಮೋಹನ್ ಅವರನ್ನು ಕರ್ನಾಟಕ ಲಲಿತ ಕಲಾ ಅಕಾಡೆಮಿಗೆ ಸಹ ಸದಸ್ಯರನ್ನಾಗಿ ನೇಮಕ ಮಾಡಿ ಅಕಾಡೆಮಿ ಆದೇಶ ಹೊರಡಿಸಿದೆ.

ಉದಯವಾಣಿ ಮಣಿಪಾಲ ಆವೃತ್ತಿಯಲ್ಲಿ ಹಿರಿಯ ಪತ್ರಿಕಾ ಛಾಯಾಗ್ರಾಹಕರಾಗಿ ಸೇವೆ ಸಲ್ಲಿಸುತ್ತಿರುವ ಆಸ್ಟ್ರೋ ಮೋಹನ್ ಕಳೆದ ಮೂರೂವರೆ ದಶಕಗಳಿಂದ ಸುದ್ದಿ ಹಾಗೂ ಕಲಾತ್ಮಕ ಛಾಯಾಗ್ರಹಣದಲ್ಲಿ ಸುಪ್ರಸಿದ್ಧರು. ಸುಮಾರು 750 ಕ್ಕೂ ಅಧಿಕ ರಾಷ್ಟ್ರೀಯ-ಅಂತಾರಾಷ್ಟ್ರೀಯ ಪುರಸ್ಕಾರಗಳನ್ನು ಪಡೆದಿದ್ದಾರೆ. ಉಡುಪಿ – ಮಣಿಪಾಲ ಕುರಿತಂತೆ 5, ಪೇಜಾವರ ಶ್ರೀ ಹಾಗೂ ಪತ್ರಿಕಾ ಛಾಯಾಗ್ರಹಣ ಕುರಿತಂತೆ ಒಂದು ಒಟ್ಟು 8 ಪುಸ್ತಕಗಳು ಪ್ರಕಟವಾಗಿವೆ. ಆಂಧ್ರ ಪ್ರದೇಶ ಫೋಟೋಗ್ರಫಿ ಅಕಾಡೆಮಿಯೂ ಇವರ ಕೃತಿಗಳ ಕುರಿತಾಗಿ ಪುಸ್ತಕವನ್ನು ಪ್ರಕಟಿಸಿದೆ. ಫೋಟೋಗ್ರಫಿ ಸೊಸೈಟಿ ಆಫ್ ಅಮೆರಿಕ ಸಂಸ್ಥೆಯು ಇವರನ್ನು “ಅಸಿಸ್ಟೆಂಟ್ ಕಂಟ್ರಿ ಮೆಂಬರ್ ಶಿಪ್ ಡೈರೆಕ್ಟರ್” ಆಗಿ ಆಯ್ಕೆಮಾಡಿಕೊಂಡಿದೆ.

Related posts

ಗ್ರಾಮೀಣ ಬಂಟರ ಸಂಘದ ಸ್ಕಿಲ್ ಡೆವೆಲಪ್ಮೆಂಟ್ ಕೇಂದ್ರದಲ್ಲಿ ಕೌಶಲ್ಯಾಭಿವೃದ್ಧಿ ತರಬೇತಿ

ಉಗ್ರರನ್ನು ಸದೆಬಡಿಯಲು ಎಲ್ಲರೂ ಒಗ್ಗಟ್ಟಾಗಿ ಹೋರಾಡಬೇಕು : ಸಚಿವೆ ಲಕ್ಷ್ಮೀ ಹೆಬ್ಬಾಳಕರ್

ಪತ್ರಕರ್ತ ಸಂದೀಪ್ ಪೂಜಾರಿಗೆ ಶ್ರದ್ಧಾಂಜಲಿ ಸಭೆ