ನವರಾತ್ರಿಗೆ ಆಕಾಶದಲ್ಲಿ ಅಪರೂಪದ ಅತಿಥಿಯ ಆಗಮನ

ಉಡುಪಿ : ಈ ಬಾರಿ ನವರಾತ್ರಿಗೆ ಆಕಾಶದಲ್ಲಿ ಅಪರೂಪದ ಅತಿಥಿಯ ದರ್ಶನವಾಗಲಿದೆ. ಅಪರೂಪದ ಧೂಮಕೇತು ಒಂದು ಬರಿಯ ಕಣ್ಣಿಗೆ ಕಾಣ ಸಿಗಲಿದೆ.

ಒಂದು ಧೂಳು ಹಾಗೂ ಹಿಮಕಲ್ಲಿನ ಉಂಡೆಯು ಸೌರಮಂಡಲದ ಅಂಚಿನಿಂದ ಹೊರಟಿತ್ತು. ಹಿಂದಿನ ವರ್ಷ ಚೀನಾದಲ್ಲಿ ಖಗೋಳಶಾಸ್ತ್ರಜ್ಞರು ಇದನ್ನು ಗುರುತಿಸಿದ್ದರು. ಈ ಧೂಮಕೇತು ಸೂರ್ಯನ ಸುತ್ತ ಒಂದು ಸುದೀರ್ಘ ವೃತ್ತಾಕಾರದ ಕಕ್ಷೆಯಲ್ಲಿ ಹಾದು ಹೋಗುತ್ತದೆ. ಈ ಧೂಮಕೇತು ಅಕ್ಟೋಬರ್ 12 ರಂದು ಸುಮಾರು 70,67,200 ಕಿಮೀ ದೂರದಲ್ಲಿ ಹಾದು ಹೋಗಲಿದ್ದು ಪ್ರಕಾಶಮಾನವಾಗಿ ಗೋಚರಿಸಲಿದೆ. ಬರಿಯ ಕಣ್ಣಿನಲ್ಲಿ ಇದನ್ನು ನೋಡಲು ಸಾಧ್ಯ. ಮೊದಲ ಅವಕಾಶ ತಪ್ಪಿದರೆ ಅಕ್ಟೋಬರ್ 15ರಿಂದ 30ರವರೆಗೆ ಸಂಜೆ ಆಕಾಶದಲ್ಲಿ ಶುಕ್ರ ಗ್ರಹದ ಬಲಬದಿಯಲ್ಲಿ ಗುರುತಿಸಬಹುದಾಗಿದೆ.

Related posts

ಅಲೈನ್ಸ್ ಕ್ಲಬ್ ಉಡುಪಿಯಿಂದ ವೈದ್ಯರ ದಿನಾಚರಣೆ : ಪ್ರಸಿದ್ಧ ವೈದ್ಯ ಡಾ.ಆರ್.ಎನ್.ಭಟ್ ಅವರಿಗೆ ಸನ್ಮಾನ

ಶತಾವಧಾನಿ ಡಾ. ಆರ್. ಗಣೇಶ್ ಅವರಿಗೆ ತಲ್ಲೂರು ಕನಕ ಅಣ್ಣಯ್ಯ ಶೆಟ್ಟಿ ಪ್ರಶಸ್ತಿ ಪ್ರದಾನ

ರಂಗೋಲಿ ಕಲಾ ಸಾಧಕಿ, ಭಾರತಿ ಮರವಂತೆಗೆ ‘ಮಧುರಚೆನ್ನ ರಾಜ್ಯ ಪ್ರಶಸ್ತಿ’ ಪ್ರದಾನ