ಅಪ್ತಿ ಆಚಾರ್ಯ ಇಂಡಿಯಾ ಬುಕ್ ಆಫ್ ರೆಕಾರ್ಡ್ ಸಾಧನೆ

ಉಡುಪಿ : ಮುನಿಯಾಲಿನ ಅಪ್ತಿ ಆಚಾರ್ಯ ಜಿಮ್ನಾಸ್ಟಿಕ್‌ನ ಮಾದರಿಯಲ್ಲೊಂದಾದ ಹೆಡ್ರೋಲ್‌ನಲ್ಲಿ ಗರಿಷ್ಠ 4 ನಿಮಿಷ 40 ಸೆಕೆಂಡ್‌ನಲ್ಲಿ ಸತತ 65 ರೌಂಡ್‌ಗಳನ್ನು ಮಾಡುವ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ ಮಾಡಿದ್ದಾಳೆ.

ಮುನಿಯಾಲಿನ ಶಿವಾನಂದ ಆಚಾರ್ಯ ಮತ್ತು ಲತಾ ಆಚಾರ್ಯ ದಂಪತಿಯ ಪುತ್ರಿಯಾಗಿರುವ ಆಪ್ತಿ ಆಚಾರ್ಯ ಹೆಬ್ರಿಯ ಎಸ್. ಆ‌ರ್ ಪಬ್ಲಿಕ್ ಸ್ಕೂಲಿನ 4ನೇ ತರಗತಿಯ ವಿದ್ಯಾರ್ಥಿಯಾಗಿದ್ದಾಳೆ. ಕಳೆದ ಎರಡು ವರ್ಷಗಳಿಂದ ಅವಿನಾಶ್ ಪೆರ್ಡೂರು ಅವರಿಂದ ನೃತ್ಯ ಮತ್ತು ಜಿಮ್ನಾಸ್ಟಿಕ್‌ ತರಬೇತಿ ಪಡೆಯುತ್ತಿದ್ದಾಳೆ.

Related posts

ಅಲೈನ್ಸ್ ಕ್ಲಬ್ ಉಡುಪಿಯಿಂದ ವೈದ್ಯರ ದಿನಾಚರಣೆ : ಪ್ರಸಿದ್ಧ ವೈದ್ಯ ಡಾ.ಆರ್.ಎನ್.ಭಟ್ ಅವರಿಗೆ ಸನ್ಮಾನ

ಶತಾವಧಾನಿ ಡಾ. ಆರ್. ಗಣೇಶ್ ಅವರಿಗೆ ತಲ್ಲೂರು ಕನಕ ಅಣ್ಣಯ್ಯ ಶೆಟ್ಟಿ ಪ್ರಶಸ್ತಿ ಪ್ರದಾನ

ರಂಗೋಲಿ ಕಲಾ ಸಾಧಕಿ, ಭಾರತಿ ಮರವಂತೆಗೆ ‘ಮಧುರಚೆನ್ನ ರಾಜ್ಯ ಪ್ರಶಸ್ತಿ’ ಪ್ರದಾನ