ರಸ್ತೆ ಅಪಘಾತ ತಡೆಗಟ್ಟಲು ಕಟ್ಟು ನಿಟ್ಟಿನ ನಿರ್ದೇಶನವನ್ನು ಜಾರಿಗೊಳಿಸಲು ಸಂಚಾರಿ ಠಾಣಾ ಪೊಲೀಸರಿಗೆ ಮನವಿ

ಕುಂದಾಪುರ : ಕುಂದಾಪುರ ನಗರ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಟಿಪ್ಪರ್ ಹಾಗೂ ಲಾರಿಗಳು ಅತಿ ವೇಗ ಮತ್ತು ಅಜಾಗರುಕತೆಯಿಂದ ಚಲಿಸುತ್ತಿರುವುದು ಸಾರ್ವಜನಿಕರ ಗಮನಕ್ಕೆ ಬಂದಿದ್ದು ಇದಕ್ಕೆ ಮೊನ್ನೆ ನಡೆದ ಕೋಟೇಶ್ವರದ ಪದವಿ ವಿದ್ಯಾರ್ಥಿಯ ಟಿಪ್ಪರ್ ಅಪಘಾತವೇ ಸಾಕ್ಷಿಯಾಗಿದ್ದು ಎಲ್ಲಾ ಚಾಲಕರಿಗೂ ನಗರ ಸಂಚಾರಿ ಪೊಲೀಸ್ ಠಾಣೆಯಿಂದ ಕಟ್ಟು ನಿಟ್ಟಿನ ನಿರ್ದೇಶನವನ್ನು ನೀಡಿ ಕುಂದಾಪುರ ನಗರದಲ್ಲಿ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ನಡೆಯುತ್ತಿರುವ ಸರಣಿ ಅಪಘಾತಗಳನ್ನು ನಿಯಂತ್ರಣ ಮಾಡುವಲ್ಲಿ ಸಂಚಾರಿ ಪೊಲೀಸರು ಕಾರ್ಯಪ್ರವೃತ್ತರಾಗಬೇಕೆಂದು ಕುಂದಾಪುರದ ಸಂಚಾರಿ ಪೊಲೀಸ್ ಠಾಣಾ ಉಪನಿರೀಕ್ಷಕರಾದ ಪ್ರಸಾದ್ ಕೆ ಇವರಿಗೆ ಮನವಿಯನ್ನು ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ವಿಶ್ವ ಮಾನವಾಧಿಕಾರ ಮತ್ತು ಲೋಕಪರಿಷತ್‌ ಇದರ ಜಿಲ್ಲಾಧ್ಯಕ್ಷರಾದ ಇಕ್ಬಾಲ್‌ ಕುಂಜಿಬೆಟ್ಟು, ಉಪಾಧ್ಯಕ್ಷ ಸುಧೀರ್‌ ಜಿ ಕಾಳಾವರ, ಕಾರ್ಯದರ್ಶಿ ಸದಾಶಿವ ಕೋಟೇಗಾರ್‌, ಸಂಚಾಲಕ ಲಕ್ಷಣ್‌ ಖಾರ್ವಿ, ಶ್ರೀರಾಮ ವಿದ್ಯಾ ಕೇಂದ್ರ ಸಂಚಾಲಕರಾದ ನಾಗೇಶ್ ಕಾಮತ್, ಸುಜೀರ್ ದೇವೇಂದ್ರ ಸುವರ್ಣ ಮೊದಲಾದವರು ಉಪಸ್ಥಿತರಿದ್ದರು.

Related posts

ಉಡುಪಿ ಜಿಲ್ಲೆಯಲ್ಲಿ ಮಂಗನಕಾಯಿಲೆ ಪ್ರಕರಣ ಬಾರದಂತೆ ಮುನ್ನೆಚ್ಚರಿಕೆ ವಹಿಸಿ : ಆರೋಗ್ಯ ಇಲಾಖೆಗೆ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಸೂಚನೆ

ನಿಷೇಧಾಜ್ಞೆ, ಸಂತೆ, ಜಾತ್ರೆ ನಿಷೇಧ ಆದೇಶ ಹಿಂದೆಗೆತ : ಉಡುಪಿ ಜಿಲ್ಲಾಧಿಕಾರಿ

ಶಾಲಾ ವಾಹನಕ್ಕೆ ಬೈಕ್ ಢಿಕ್ಕಿಯಾಗಿ ಸವಾರ ಮೃತ್ಯು