ಗಣೇಶ ಚತುರ್ಥಿಯ ಮೆರವಣಿಗೆಯ ವೇಳೆ ದೈವಾರಾಧನೆಗೆ ಸಂಬಂಧಿಸಿದ ಟ್ಯಾಬ್ಲೋಗಳನ್ನು ನಿಷೇಧಿಸಲು ತುಳುನಾಡ ದೈವಾರಾಧನೆ ಸಂರಕ್ಷಣಾ ವೇದಿಕೆ ಮನವಿ

ಮಂಗಳೂರು : ವಿಶ್ವ ಹಿಂದೂ ಪರಿಷತ್ ಜಿಲ್ಲಾ ಕಾರ್ಯಾಲಯ ಕದ್ರಿ, ಇಲ್ಲಿಗೆ ಭೇಟಿ ನೀಡಿ ಗಣೇಶ ಚತುರ್ಥಿಯ ಅಂಗವಾಗಿ ನಡೆಯುವ ಮೆರವಣಿಗೆಯ ವೇಳೆ ದೈವಾರಾಧನೆಗೆ ಸಂಬಂಧಿಸಿದ ಸ್ಥಬ್ಧಚಿತ್ರ/ಟ್ಯಾಬ್ಲೋಗಳನ್ನು ನಿಷೇಧಿಸಲು ಸಂಘಟನೆಯ ಮೂಲಕ ಕರೆ ನೀಡಬೇಕು ಎಂದು ತುಳುನಾಡ ದೈವಾರಾಧನೆ ಸಂರಕ್ಷಣಾ ವೇದಿಕೆ (ರಿ) ಮೂಲಕ ಮನವಿ ಮಾಡಲಾಯಿತು.

ಹಿಂದೂ ಧರ್ಮದ ಅವಿಭಾಜ್ಯ ನಂಬಿಕೆಯಾಗಿರುವ ದೈವಗಳನ್ನು ಟ್ಯಾಬ್ಲೋಗಳಲ್ಲಿ ಪ್ರದರ್ಶಿಸುವುದನ್ನು ಸಂಘಟನೆ ಸಹಿಸುವುದಿಲ್ಲ. ಈ ಕುರಿತು ಜಿಲ್ಲೆಯಿಂದ ಸಂಘಟನೆಯ ಪ್ರಮುಖರಿಗೆ, ಕಾರ್ಯಕರ್ತರಿಗೆ, ಕಾರ್ಯಕ್ರಮದ ಆಯೋಜಕರಿಗೆ ಈ ಬಗ್ಗೆ ಸ್ಪಷ್ಟ ಸೂಚನೆ ನೀಡುವುದಾಗಿ ಸಂಘಟನೆಯ ಪ್ರಮುಖರು ಭರವಸೆ ನೀಡಿದ್ದಾರೆ.

ವಿಶ್ವ ಹಿಂದೂ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಶ್ರೀ ಎಚ್.ಕೆ ಪುರುಷೋತ್ತಮ, ವಿಎಚ್‌ಪಿ ಪ್ರಾಂತ ಸೇವಾ ಸಹ ಪ್ರಮುಖ್ ಶ್ರೀ ಗೋಪಾಲ್ ಕುತ್ತಾರ್, ಜಿಲ್ಲಾ ಕಾರ್ಯದರ್ಶಿ ಶ್ರೀ ರವಿ ಅಸೈಗೋಳಿ, ಜಿಲ್ಲಾ ಉಪಾಧ್ಯಕ್ಷರಾದ ಶ್ರೀ ಸಂಜೀವ ಸೂಟರ್‌ಪೇಟೆ, ಭಜರಂಗದಳ ವಿಭಾಗ ಸಂಯೋಜಕರಾದ ಶ್ರೀ ಪುನೀತ್ ಅತ್ತಾವರ ಹಾಗೂ ದೈವಾರಾಧನೆ ಸಂರಕ್ಷಣಾ ವೇದಿಕೆಯ ಅಧ್ಯಕ್ಷರಾದ ಶ್ರೀ ಭರತ್ ಬಳ್ಳಾಲ್ ಬಾಗ್, ಕಾರ್ಯದರ್ಶಿಗಳಾದ ಶ್ರೀ ಗಿರೀಶ್ ಸುವರ್ಣ ಮೂಲ್ಕಿ, ಸದಸ್ಯರಾದ ಶ್ರೀ ಮಹೇಶ್ ಅಮೀನ್, ಶ್ರೀ ಸಂತು ಅನಂತಾಡಿ ಉಪಸ್ಥಿತರಿದ್ದರು.

Related posts

ವಿಶ್ವದ ವೇಗದ ಭಗವದ್ಗೀತಾ ಲೇಖಕ : ಕೇವಲ 5.30 ಗಂಟೆಗಳಲ್ಲಿ 18 ಅಧ್ಯಾಯ ಮತ್ತು 700 ಶ್ಲೋಕಗಳ ಬರಹ ಪೂರ್ಣಗೊಳಿಸಿದ ಅದ್ಭುತ ಸಾಧನೆ!

Worlds Fastest Bhagvad Gita Writer Completing 18 Chapters & 700 Verses in Just 5.30 Hours

ಮೀನುಗಾರರ ಪ್ರತಿಭಟನೆಯಲ್ಲಿ ಪ್ರಚೋದನಕಾರಿ ಭಾಷಣ-ಹಿಂದೂ ಯುವಸೇನೆ ಮುಖಂಡನ ವಿರುದ್ಧ ಸುಮೊಟೋ ಕೇಸ್