ಶ್ರೀ ಶನಿ ಕ್ಷೇತ್ರ ಬನ್ನಂಜೆಯಲ್ಲಿ ವಾರ್ಷಿಕ ಶನೈಶ್ವರ ಉತ್ಸವ ಸಂಪನ್ನ

ಉಡುಪಿ : ಬನ್ನಂಜೆ ಗರಡಿ ರಸ್ತೆ ಶ್ರೀ ಶನಿ ಕ್ಷೇತ್ರ ಬನ್ನಂಜೆ ಮಠದ ಕರ್ನಾಟಕದ ಅತೀ ದೊಡ್ಡ ಶ್ರೀ ಶನಿ ದೇವರ 23 ಅಡಿ ಎತ್ತರದ ಏಕಶಿಲಾ ಮೂರ್ತಿ ಸನ್ನಿಧಾನದಲ್ಲಿ ಗುರುವಾರ ಶನೈಶ್ಚರ ಜಯಂತಿ ಹಾಗೂ ವಾರ್ಷಿಕ ಶನೈಶ್ವರ ಉತ್ಸವವು ಶ್ರೀ ಬನ್ನಂಜೆ ರಾಘವೇಂದ್ರ ತೀರ್ಥ ಶ್ರೀಪಾದರ ದಿವ್ಯ ಉಪಸ್ಥಿತಿಯಲ್ಲಿ ನಡೆಯಿತು.

ಬೆಳಿಗ್ಗೆ ಸಾಮೂಹಿಕ ಪ್ರಾರ್ಥನೆ ಶ್ರೀ ರಾಮ ವಿಠ್ಠಲ್ ಹಾಗು ಶನೈಶ್ಚರ ಸ್ವಾಮಿಯ ಸನ್ನಿದಿಯಲ್ಲಿ ಸಗ್ರಹ ಮಖ ಶನಿಶಾಂತಿ ಪುರಸ್ಪರ ಯಕ್ಷ್ಮನಾಶನ ಸೂಕ್ತ ಯಾಗದ ಧಾರ್ಮಿಕ ಪೂಜಾ ವಿದಾನಗಳನ್ನೂ ಕೊರಂಗ್ರಪಾಡಿ ಕುಮಾರ ಗುರುತಂತ್ರಿ ನೇತೃತ್ವದಲ್ಲಿ ಅರ್ಚಕರ ತಂಡ ನೆರವೇರಿಸಿದರು.

ಶ್ರೀ ದೇವರ ಸನ್ನಿದಿಯಲ್ಲಿ ಪಂಚಾಮೃತ ಅಭಿಷೇಕ, ಯಾಗದ ಪೂರ್ಣಾಹುತಿ, ಪಲ್ಲಪೂಜೆ, ಮಂಡಲಪೂಜೆ, ಉತ್ಸವ ಬಲಿ ಪೂಜೆ ನಡೆಯಿತು. ಶ್ರೀ ದೇವರಿಗೆ ವಿಶೇಷ ಅಲಂಕಾರ, ಭಜನಾ ಕಾರ್ಯಕ್ರಮ ಜರಗಿತು. ಮದ್ಯಾಹ್ನ ಮಹಾ ಪೂಜೆಯ ಬಳಿಕ ಸಾರ್ವಜನಿಕ ಮಹಾ ಅನ್ನಸಂತರ್ಪಣೆಯಲ್ಲಿ ಸಾವಿರಾರು ಭಕ್ತರೂ ಭೋಜನ ಪ್ರಸಾದ ಸ್ವೀಕರಿಸಿದರು. ಸರತಿ ಸಾಲಿನಲ್ಲಿ ಸಾವಿರಾರು ಭಕ್ತದಿಗಳಿಂದ ಶನಿ ದೇವರಿಗೆ ತೈಲಾಭಿಷೇಕ, ಎಳ್ಳು ದೀಪಾ ಬೆಳಗಿಸಿ ಶನೇಶ್ವರಣ ಕೃಪೆಗೆ ಪಾತ್ರರಾದರು.

ಸಮಾರಂಭದಲ್ಲಿ ಪ್ರಧಾನ ಅರ್ಚಕರಾದ ಸತ್ಯನಾರಾಯಣ ಆಚಾರ್ಯ, ಶ್ರೀಮತಿ ಜಯಲಕ್ಷ್ಮೀ ಆಚಾರ್ಯ, ಪ್ರಹ್ಲಾದ ಆಚಾರ್ಯ, ಯತೀಶ್ ಆಚಾರ್ಯ, ಶ್ರೀಪಾದ ಆಚಾರ್ಯ, ಪೂಜಾ ಆಚಾರ್ಯ, ಪ್ರತೀಕ ಆಚಾರ್ಯ, ಸಾವಿರಾರು ಭಕ್ತರು ಉಪಸ್ಥರಿದ್ದರು.

Related posts

ಕರ್ನಾಟಕ ಕ್ರೀಡಾಕೂಟದಲ್ಲಿ ಸಮರಾಗೆ ಚಿನ್ನದ ಪದಕ

ಪ್ರಥಮ ಬಾರಿಗೆ ಯಕ್ಷ ರಂಗದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ

ಯಕ್ಷಗಾನ ಪ್ರದರ್ಶನಕ್ಕೆ ಅಡ್ಡಿ – ಬ್ರಿಟಿಷ್ ಆಡಳಿತವನ್ನೂ ಮೀರಿಸಿದ ಸಿದ್ಧರಾಮಯ್ಯ ಸರ್ಕಾರ : ಯಶ್‌ಪಾಲ್ ಸುವರ್ಣ