ಪೆರ್ಡೂರಿನಲ್ಲಿ ಶ್ರೀ ಅನಂತಪದ್ಮನಾಭ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವ; ಮೀನ ಸಂಕ್ರಮಣದಂದು ನಡೆದ ಕೆರೆದೀಪ, ಗರುಡವಾಹನ, ಕಟ್ಟೆಪೂಜೆ ಸಂಭ್ರಮ

ಉಡುಪಿ : ಪೆರ್ಡೂರು ಕದಳೀಪ್ರಿಯ ಮಹತೋಭಾರ ಶ್ರೀ ಅನಂತಪದ್ಮನಾಭ ದೇವಸ್ಥಾನದ ವಾರ್ಷಿಕ ಜಾತ್ರೆ ಮಾ.19ರವರೆಗೆ ಕ್ಷೇತ್ರದ ತಂತ್ರಿಗಳಾದ ಕೆ.ಜಿ. ರಾಘವೇಂದ್ರ ತಂತ್ರಿ ಹಾಗೂ ಅರ್ಚಕ ಪಿ.ಕೃಷ್ಣ ಅಡಿಗ ಅವರ ಧಾರ್ಮಿಕ ನೇತೃತ್ವದಲ್ಲಿ ವಿವಿಧ ವಿಧಿ ವಿಧಾನಗಳೊಂದಿಗೆ ನಡೆಯಲಿದೆ.

ಮಾ.14ರಂದು ಮೀನ ಸಂಕ್ರಮಣ ಆಚರಣೆ ನಡೆಯಿತು. ಮಧ್ಯಾಹ್ನ ಪ್ರಧಾನ ಹೋಮ, ಕಲಶಾಭಿಷೇಕ, ಮಹಾಪೂಜೆ, ರಾತ್ರಿ ದೀವಟಿಕೆ ಸಲಾಮ್, ಕೊಡಿಪೂಜೆ, ಉತ್ಸವ ಬಲಿ, ಗರುಡವಾಹನ, ತೆಪ್ಪೋತ್ಸವ, ರಥೋತ್ಸವ, ವಾಲಗಮಂಟಪ ಪೂಜೆ, ವೇದಪಾರಾಯಣ, ಸಂಗೀತ, ವಾದ್ಯ, ನರ್ತನ ಸೇವೆಗಳು, ಮಹಾಪೂಜೆ, ನಿತ್ಯಬಲಿ, ಸವಾರಿ ಬಲಿ, ಕಟ್ಟೆಪೂಜೆ, ಕಂಚಲ ಸೇವೆ, ದೊಡ್ಡರಂಗಪೂಜೆ, ರಂಗಪೂಜೆ ಬಲಿ, ಕೆರೆದೀಪ, ಚಂದ್ರಮಂಡಲ ರಥ, ಉಷಾಃಕಾಲ ಪೂಜೆ, ಕಂಚಲ ಪ್ರಸಾದ ವಿತರಣೆ ನಡೆಯಿತು.

ಪ್ರತಿದಿನ ಮಧ್ಯಾಹ್ನ ಅನ್ನಸಂತರ್ಪಣೆ, ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪ್ರಮೋದ್ ರೈ ಪಳಜೆ, ಕಾರ್ಯನಿರ್ವಹಣಾಧಿಕಾರಿ ಗುರುರಾಜ್ ಪಿ.ಆರ್. ತಿಳಿಸಿದ್ದಾರೆ.

Related posts

ಅಲೈನ್ಸ್ ಕ್ಲಬ್ ಉಡುಪಿಯಿಂದ ವೈದ್ಯರ ದಿನಾಚರಣೆ : ಪ್ರಸಿದ್ಧ ವೈದ್ಯ ಡಾ.ಆರ್.ಎನ್.ಭಟ್ ಅವರಿಗೆ ಸನ್ಮಾನ

ಶತಾವಧಾನಿ ಡಾ. ಆರ್. ಗಣೇಶ್ ಅವರಿಗೆ ತಲ್ಲೂರು ಕನಕ ಅಣ್ಣಯ್ಯ ಶೆಟ್ಟಿ ಪ್ರಶಸ್ತಿ ಪ್ರದಾನ

ರಂಗೋಲಿ ಕಲಾ ಸಾಧಕಿ, ಭಾರತಿ ಮರವಂತೆಗೆ ‘ಮಧುರಚೆನ್ನ ರಾಜ್ಯ ಪ್ರಶಸ್ತಿ’ ಪ್ರದಾನ