ಪಣಿಯಾಡಿಯಲ್ಲಿ ಅನಂತವ್ರತ ಹಾಗೂ ಕದಳಿ ಪೂಜೆ

ಉಡುಪಿ : ಪಣಿಯಾಡಿ ಶ್ರೀ ಅನಂತಾಸನ ಶ್ರೀ ಲಕ್ಷ್ಮೀ ಅನಂತ ಪದ್ಮನಾಭ ದೇವಸ್ಥಾನದಲ್ಲಿ ಅನಂತವ್ರತ ಕಾರ್ಯಕ್ರಮ ದೇವಾಲಯದ ತಂತ್ರಿಗಳವರಾದ ಹಯವದನ ತಂತ್ರಿ, ವಾದಿರಾಜ ತಂತ್ರಿ, ಪ್ರದಾನ ಅರ್ಚಕ ರಾಘವೇಂದ್ರ ಭಟ್, ಪುತ್ತಿಗೆ ಮಠದ ದಿವಾನರಾದ ನಾಗರಾಜ ಆಚಾರ್ಯ ಹಾಗೂ ಅನಂತ ವಿಪ್ರ ಬಳಗದವರ ಸಹಕಾರದಿಂದ ವೈಭವದಿಂದ ಜರುಗಿತು.

ವಿಶೇಷವಾಗಿ ಅನಂತ ಕದಳಿ ಸಮರ್ಪಣೆ ಸೇವೆ ಭಕ್ತಾದಿಗಳಿಂದ ನಡೆಯಿತು. ಕದಿರು ಕಟ್ಟುವುದು, ಪಂಚಾಮೃತ ಅಭಿಷೇಕ, ಅಲಂಕಾರ ಪೂಜೆ, ಕಲ್ಪೋಕ್ತ ಕಲಶ ಪೂಜೆ, ವಿಷ್ಣು ಸಹಸ್ರನಾಮ ಪಾರಾಯಣ, ಲಕ್ಷ್ಮೀ ಶೋಭಾನೆ, ಮಹಾಪೂಜೆ, ವ್ರತದಾರಿಗಳ ಕೈಗೆ ಅನಂತ ಸೂತ್ರದಾರ ಕಟ್ಟುವ ಪ್ರಕ್ರಿಯೆ, ಅನ್ನಸಂತರ್ಪಣೆ, ವಿಶೇಷ ಭಜನೆ, ಹೂವಿನ ಪೂಜೆ, ರಂಗಪೂಜೆ, ಅಸ್ಟವಧಾನ ಸೇವೆ ನಡೆಯಿತು.

ಭಕ್ತರು ಬೆಳಿಗ್ಗೆನಿಂದ ರಾತ್ರಿಯ ತನಕ ಶ್ರೀ ಕ್ಷೇತ್ರ ಸ್ವಾಮಿಯ ದರ್ಶನ ಪಡೆದು ವಿಶೇಷ ಕದಳಿ ಪ್ರಸಾದ ಸ್ವೀಕರಿಸಿದರು.

Related posts

ಅಣ್ಣನಿಂದ ಲಕ್ಷಾಂತರ ರೂ. ಚಿನ್ನ ಪಡೆದು ತಂಗಿಯಿಂದಲೇ ವಂಚನೆ

ಬೆಳಕು ಮೀನುಗಾರಿಕೆ ಹಾಗೂ ಬುಲ್‌ಟ್ರಾಲ್ ಮೀನುಗಾರಿಕೆ ನಿಷೇಧ – ಉಲ್ಲಂಘಿಸಿದರೆ ಕಠಿಣ ಕ್ರಮ

ಮಾ.31ರಂದು ಬಜೆಟ್‌ನಲ್ಲಿ ಉಡುಪಿ ಜಿಲ್ಲೆಗೆ ಮಲತಾಯಿ ಧೋರಣೆ ತೋರಿದ ರಾಜ್ಯ ಕಾಂಗ್ರೆಸ್ ಸರಕಾರದ ವಿರುದ್ಧ ಪ್ರತಿಭಟನೆ