ನದಿ ನೀರಲ್ಲಿ ಕೊಚ್ಚಿಹೋಗಿದ್ದ ಆನಂದ ಎಂಬವರ ಮೃತದೇಹ ಪತ್ತೆ

ಉಡುಪಿ : ನಾಡ್ಪಾಲು ಗ್ರಾಮದ ಚೇರೋಳಿಯಲ್ಲಿ ಬುಧವಾರ ನೀರು ಪಾಲಾದ ಆನಂದ ಎಂಬವರ ಮೃತದೇಹ ಪತ್ತೆಯಾಗಿದೆ. ಮುಳುಗುತಜ್ಞ ಈಶ್ವರ ಮಲ್ಪೆ ತಂಡದ ಕಾರ್ಯಾಚರಣೆಯಿಂದ ಆನಂದ ಅವರ ಮೃತದೇಹವನ್ನು 4 ಕಿ.ಮೀ. ದೂರದಲ್ಲಿ ಪತ್ತೆಹಚ್ಚಲಾಯಿತು.

ನಾಡ್ಪಾಲಿನಲ್ಲಿ ತೋಟವೊಂದರಲ್ಲಿ ಕೂಲಿ ಕೆಲಸಕ್ಕಾಗಿ ಬಂದಿದ್ದ ಆನಂದ, ನದಿಯನ್ನು ಹಗ್ಗದ ಸಹಾಯದಿಂದ ದಾಟುತ್ತಿದ್ದಾಗ ಕೊಚ್ಚಿಹೋಗಿದ್ದರು.

ಮುಳುಗುತಜ್ಞ ಈಶ್ವರ ಮಲ್ಪೆ ತಂಡದ ಸದಸ್ಯರು ಸ್ಥಳಕ್ಕೆ ಧಾವಿಸಿ, ಕಾರ್ಯಾಚರಣೆ ನಡೆಸಿದರು. ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

ಅಣ್ಣನಿಂದ ಲಕ್ಷಾಂತರ ರೂ. ಚಿನ್ನ ಪಡೆದು ತಂಗಿಯಿಂದಲೇ ವಂಚನೆ

ಬೆಳಕು ಮೀನುಗಾರಿಕೆ ಹಾಗೂ ಬುಲ್‌ಟ್ರಾಲ್ ಮೀನುಗಾರಿಕೆ ನಿಷೇಧ – ಉಲ್ಲಂಘಿಸಿದರೆ ಕಠಿಣ ಕ್ರಮ

ಮಾ.31ರಂದು ಬಜೆಟ್‌ನಲ್ಲಿ ಉಡುಪಿ ಜಿಲ್ಲೆಗೆ ಮಲತಾಯಿ ಧೋರಣೆ ತೋರಿದ ರಾಜ್ಯ ಕಾಂಗ್ರೆಸ್ ಸರಕಾರದ ವಿರುದ್ಧ ಪ್ರತಿಭಟನೆ