ನವೆಂಬರ್ 29ರಿಂದ ಎಂಜಿಎಂ ಕಾಲೇಜಿನ ಅಮೃತ ಮಹೋತ್ಸವ ಸಮಾರಂಭ

ಉಡುಪಿ : ಮಹಾತ್ಮ ಗಾಂಧಿ ಮೆಮೋರಿಯಲ್ ಕಾಲೇಜಿನ ಅಮೃತ ಮಹೋತ್ಸವ ಸಮಾರಂಭವು ನವೆಂಬರ್ 29, 30 ಹಾಗೂ ಡಿಸೆಂಬರ್ 1 ರಂದು ಕಾಲೇಜಿನಲ್ಲಿ ನಡೆಯಲಿದೆ. 1949ರಲ್ಲಿ ಡಾ.ಟಿ.ಎಂ.ಎ.ಪೈಗಳ ಕನಸಾಗಿ ಆರಂಭವಾದ ಉಡುಪಿಯ ಮೊತ್ತ ಮೊದಲ ಕಾಲೇಜಾದ ಎಂಜಿಎಂ ಕಾಲೇಜು ಇಂದು ಎಪ್ಪತ್ತೈದು ವರ್ಷಗಳನ್ನು ಸಂಪೂರ್ತಿಗೊಳಿಸಿದೆ. ಉಡುಪಿಯ ಗಾಂಧಿ ಮೈನ್ ಶಾಲೆಯಲ್ಲಿ ಆರಂಭವಾದ ಈ ಕಾಲೇಜು ಮರುವರ್ಷವೇ ಈಗಿನ ಸುಂದರ ಕ್ಯಾಂಪಸ್ಸಿಗೆ ಸ್ಥಳಾಂತರಗೊಂಡು ತನ್ನ ಗುಣಮಟ್ಟದ ವಿದ್ಯಾಭ್ಯಾಸ ಹಾಗೂ ಸಾಂಸ್ಕೃತಿಕ ಪರಂಪರೆಯಿಂದ ಜನಮನ ಗೆದ್ದಿದೆ.

ಅಮೃತ ಮಹೋತ್ಸವದ ಕಾರ್ಯಕ್ರಮಗಳು ಮೂರು ದಿನ ನಡೆಯಲಿದ್ದು, ದಿನಾಂಕ 29-11-2024 ಬೆಳಗ್ಗೆ 9 ಗಂಟೆಗೆ ಶ್ರೀ ಟಿ. ಮೋಹನದಾಸ ಪೈ ಮೆಮೋರಿಯಲ್ ‘ಅಮೃತ ಸೌಧ’ದ ಉದ್ಘಾಟನೆಯು ಎಂ.ಜಿ.ಎಂ. ಕಾಲೇಜು ಟ್ರಸ್ಟ್‌ನ ಅಧ್ಯಕ್ಷರಾದ ಟಿ. ಸತೀಶ್ ಯು ಪೈ. ಯವರಿಂದ ನಡೆಯಲಿಕ್ಕಿದೆ. ಶ್ರೀ ಕೃಷ್ಣಾಪುರ ಮಠದ ಶ್ರೀ ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿಗಳ ದಿವ್ಯ ಉಪಸ್ಥಿತಿ ಉದ್ಘಾಟನೆಯಲ್ಲಿ ಇರಲಿದೆ. ಬೆಳಗ್ಗೆ 9.30ಕ್ಕೆ ವಸ್ತು ಪ್ರದರ್ಶನದ ಉದ್ಘಾಟನೆಯನ್ನು ಮಾನ್ಯ ಜಿಲ್ಲಾಧಿಕಾರಿಗಳಾದ ಡಾ. ಕೆ. ವಿದ್ಯಾಕುಮಾರಿ ನೆರವೇರಿಸಲಿದ್ದಾರೆ. ಈ ವಸ್ತುಪ್ರದರ್ಶನವು ಮೂರು ದಿನಗಳ ಕಾಲ ನಡೆಯಲಿಕ್ಕಿದೆ. ನಂತರ ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ಎಂ.ಜಿ.ಎಂ. ಕಾಲೇಜು ಟ್ರಸ್ಟ್‌ನ ಅಧ್ಯಕ್ಷರಾದ ಟಿ. ಸತೀಶ್ ಯು ಪೈ. ಅಧ್ಯಕ್ಷತೆ ವಹಿಸಲಿದ್ದು, ಕೃಷ್ಣಾಪುರ ಮಠದ ಶ್ರೀ ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿಗಳು ಆಶೀರ್ವಚನ ನೀಡಿ ಅಂಚೆ ಲಕೋಟೆ ಬಿಡುಗಡೆ ಮಾಡಲಿದ್ದಾರೆ. ಶಾಸಕರಾದ ಯಶ್ಚಾಲ್ ಸುವರ್ಣ, ಮಣಿಪಾಲ ಎಜಿಇಯ ರಿಜಿಸ್ಟ್ರಾರ್ ರಂಜನ್ ಆರ್.ಪೈ, ಟಿಎಂಎ ಪೈ ಫೌಂಡೇಶನ್‌ ಅಧ್ಯಕ್ಷರಾದ ಅಶೋಕ್ ಪೈ, ಎಂಜಿಎಂ ಕಾಲೇಜಿನ ಟ್ರಸ್ಟಿ ವಸಂತಿ ಆರ್ ಪೈ, ಮಾಹೆ ಮಣಿಪಾಲದ ಸಹಕುಲಾಧಿಪತಿ ಹಾಗೂ ಎಜಿಇ ಮಣಿಪಾಲದ ಅಧ್ಯಕ್ಷ ಡಾ.ಎಚ್‌ಎಸ್.ಬಲ್ಲಾಳ್, ಮಾಹೆಯ ಸಹ ಉಪಕುಲಪತಿ ಡಾ.ನಾರಾಯಣ ಸಭಾಹಿತ್, ಬೆಂಗಳೂರು ಉತ್ತರ ವಿವಿ.ಯ ಉಪಕುಲಪತಿ ಡಾ.ನಿರಂಜನ ವಾನಳ್ಳಿ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಮಧ್ಯಾಹ್ನ 12 ಗಂಟೆಗೆ ಆಡಳಿತ ಮಂಡಳಿಯ ಸದಸ್ಯರಿಗೆ ಗೌರವಾರ್ಪಣೆ ಹಾಗೂ 2 ಗಂಟೆಗೆ ವಿಶ್ರಾಂತ ಪ್ರಾಂಶುಪಾಲರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳಿಗೆ ಗೌರವಾರ್ಪಣೆ ನಡೆಯಲಿದೆ. ಮಧ್ಯಾಹ್ನ 3 ಗಂಟೆಯಿಂದ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ 5.30 ರಿಂದ ಇಂದ್ರಾಳಿ ಯಕ್ಷಗಾನ ಕೇಂದ್ರದ ವತಿಯಿಂದ ‘ವೀರ ವೃಷಸೇನ ಕಾಳಗ’ ಯಕ್ಷಗಾನ ಪ್ರದರ್ಶನ ನಡೆಯಲಿದೆ.

ದಿನಾಂಕ 30-11-2024ರಂದು ಕಾರ್ಯಕ್ರಮದ ಎರಡನೇ ದಿನ ಬೆಳಗ್ಗೆ ಶೋಭಾಯಾತ್ರೆ ನಡೆಯಲಿದ್ದು, ಬೆಳಗ್ಗೆ 8:15ಕ್ಕೆ ಪರ್ಯಾಯ ಪುತ್ತಿಗೆ ಮಠದ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿಗಳು ಜ್ಯೋತಿ ಹಸ್ತಾಂತರಿಸಲಿದ್ದು, 9 ಗಂಟೆಗೆ ಗಾಂಧಿ ಮೈನ್ ಸ್ಕೂಲಿನಿಂದ ಡಾ.ರಂಜನ್ ಆರ್.ಪೈಯವರು ಶೋಭಾಯಾತ್ರಗೆ ವಿಧ್ಯುಕ್ತ ಚಾಲನೆ ನೀಡಲಿದ್ದಾರೆ. ಈ ಶೋಭಾಯಾತ್ರೆಯು ಎಂಜಿಎಂ ಕಾಲೇಜಿನವರೆಗೆ ಸಾಗಿ ಬರಲಿದೆ. ಬೆಳಗ್ಗೆ 11.30ಕ್ಕೆ ‘ಎಂಜಿಎಂ ನೆನಪು’ ಕಾರ್ಯಕ್ರಮ ನಡೆಯಲಿದ್ದು, ಕಾಲೇಜಿನ ವಿಶ್ರಾಂತ ಪ್ರಾಂಶುಪಾಲ ಪ್ರೊ.ಎಂ.ಎಲ್.ಸಾಮಗ ಹಾಗೂ ಸಿಎ ಗುಜ್ಜಾಡಿ ಪ್ರಭಾಕರ ನಾಯಕ್ ಕಾಲೇಜಿನ ನೆನಪುಗಳನ್ನು ಮೆಲುಕು ಹಾಕಲಿದ್ದಾರೆ. ಮಧ್ಯಾಹ್ನ 12.30 ರಿಂದ ಎಂಜಿಎಂ ಕಾಲೇಜು ನಡೆದು ಬಂದ ದಾರಿಯ ಕುರಿತಾಗಿ ಸಾಕ್ಷ್ಯಚಿತ್ರ ಪ್ರದರ್ಶನ ನಡೆಯಲಿದ್ದು, ಮಧ್ಯಾಹ್ನ 1.30ರಿಂದ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ 5.30ರಿಂದ ಮುಂಬೈಯ ‘ಊರ್ಜಾ’ ವಾದ್ಯವೃಂದದಿಂದ ವಾದ್ಯಮೇಳ ನಡೆಯಲಿದೆ.

ದಿನಾಂಕ 01-12-2024ರಂದು ಮೂರನೇ ದಿನ ಬೆಳಗ್ಗೆ 9.30ರಿಂದ 11ರವರೆಗೆ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, 11 ಗಂಟೆಗೆ ಹಳೆವಿದ್ಯಾರ್ಥಿಗಳ ಕಾರ್ಯಕ್ರಮ ನಡೆಯಲಿದ್ದು, ನೀತಿ ಆಯೋಗದ ಸದಸ್ಯ ಹಾಗೂ ಹೈದರಾಬಾದ್ ಪವರ್ ಫೈನಾನ್ಸ್ ಕಾರ್ಪೊರೇಷನ್‌ನ ಸಹಪ್ರಾಧ್ಯಾಪಕ ಪ್ರೊ.ಪ್ರಸನ್ನ ತಂತ್ರಿ ಮುಖ್ಯ ಅತಿಥಿಯಾಗಿರಲಿದ್ದಾರೆ. ಮಧ್ಯಾಹ್ನ 12.30ರಿಂದ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ 2.30ರಿಂದ ಅಧ್ಯಾಪಕರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. 3.30ರಿಂದ ಸಮಾರೋಪ ಸಮಾರಂಭ ನಡೆಯಲಿದ್ದು, ಶ್ರೀ ಪೇಜಾವರ ಅಧೋಕ್ಷಜ ಮಠದ ಶ್ರೀ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿಗಳ ದಿವ್ಯ ಉಪಸ್ಥಿತಿ ಇರಲಿದೆ. ಎಂ.ಜಿ.ಎಂ. ಕಾಲೇಜು ಟ್ರಸ್ಟ್‌ನ ಅಧ್ಯಕ್ಷರಾದ ಟಿ. ಸತೀಶ್ ಯು ಪೈ. ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಕರ್ನಾಟಕ ಸರಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಳರ್, ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಯಶ್‌ಪಾಲ್ ಸುವರ್ಣ, ಮಂಗಳೂರು ವಿ.ವಿ. ಉಪಕುಲಪತಿ ಪ್ರೊ. ಪಿ.ಎಲ್.ಧರ್ಮ, ಪ್ರಾದೇಶಿಕ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕ ಪ್ರೊ.ರಾಮೇಗೌಡ, ಉಡುಪಿಯ ಡಿಡಿಪಿಯು ಮಾರುತಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಂಜೆ 5.30 ರಿಂದ ಶ್ರೀ ವಿದ್ಯಾಭೂಷಣ, ಬೆಂಗಳೂರು ಮತ್ತು ಕುಮಾರಿ ಮೇಧಾ ಹಿರಣ್ಯಯಿ, ಬೆಂಗಳೂರು ಇವರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ.

ಈ ಎಲ್ಲಾ ಕಾರ್ಯಕ್ರಮಗಳಿಗೆ ಎಂಜಿಎಂ ಕಾಲೇಜಿನ ಪ್ರಾಂಶುಪಾಲ ಪ್ರೊ.ಲಕ್ಷ್ಮೀನಾರಾಯನ ಕಾರಂತ, ಎಜಿಇ ಕಾರ್ಯದರ್ಶಿ ಬಿ.ಪಿ. ವರದರಾಯ ಪೈ, ಪ.ಪೂ.ವಿಭಾಗದ ಪ್ರಾಂಶುಪಾಲೆ ಮಾಲತಿ ದೇವಿ ಎ., ಸಂಧ್ಯಾ ಕಾಲೇಜಿನ ಪ್ರಾಂಶುಪಾಲ ಡಾ.ದೇವಿದಾಸ ಎಸ್.ನಾಯ್ಕ, ಟಿ.ಮೋಹನದಾಸ ಪೈ ಕೌಶಲ್ಯಾಭಿವೃದ್ಧಿ ಕೇಂದ್ರದ ನಿರ್ದೇಶಕ ಟಿ.ರಂಗಪೈ, ತಮ್ಮೆಲ್ಲರನ್ನು ಹೃತೂರ್ವಕವಾಗಿ ಆಮಂತ್ರಿಸುವವರಾಗಿದ್ದಾರೆ.

Related posts

ಕರ್ನಾಟಕ ಕ್ರೀಡಾಕೂಟದಲ್ಲಿ ಸಮರಾಗೆ ಚಿನ್ನದ ಪದಕ

ಯಕ್ಷಗಾನ ಪ್ರದರ್ಶನಕ್ಕೆ ಅಡ್ಡಿ – ಬ್ರಿಟಿಷ್ ಆಡಳಿತವನ್ನೂ ಮೀರಿಸಿದ ಸಿದ್ಧರಾಮಯ್ಯ ಸರ್ಕಾರ : ಯಶ್‌ಪಾಲ್ ಸುವರ್ಣ

ಮಾರಿದ ಹಳೆಯ ಬಸ್ಸನ್ನು ಕದ್ದು ತಂದ ಆರೋಪ – ತಂದೆ ಮಗನ ವಿರುದ್ಧ ದೂರು ದಾಖಲು !