ಹೆಜಮಾಡಿ ಟೋಲ್ ಗೇಟ್‌ನಲ್ಲಿ ಸುಂಕ ವಿನಾಯಿತಿ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಹಾಗೂ ಸಂಸದರಿಗೆ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮನವಿ

ಕಾಪು : ಕಾಪು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹೆಜಮಾಡಿಯಲ್ಲಿ ಹಲವಾರು ವರ್ಷಗಳಿಂದ ಟೋಲ್ ಗೇಟ್ ನಿರ್ಮಾಣಗೊಂಡು ಸುಂಕ ವಸೂಲಾತಿಯನ್ನು ಮಾಡುತ್ತಾ ಬಂದಿರುತ್ತಾರೆ. ಪಡುಬಿದ್ರಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಸಾರ್ವಜನಿಕರು ಸ್ಥಳೀಯ ವಾಹನಗಳಿಗೆ ಸುಂಕ ವಸೂಲಾತಿಯಿಂದ ವಿನಾಯಿತಿ ನೀಡಬೇಕೆಂದು ಮನವಿಯನ್ನು ಮಾಡಿರುತ್ತಾರೆ. ಅದರಂತೆ…

Read more

ಮಂಗಳೂರು ಮಹಾನಗರ ಪಾಲಿಕೆ ಆಡಳಿತಾಧಿಕಾರಿಯಾಗಿ ಮುಲ್ಲೈ ಮುಗಿಲನ್

ಮಂಗಳೂರು : ಮಹಾನಗರಪಾಲಿಕೆಯ ನೂತನ ಆಡಳಿತಾಧಿಕಾರಿಯಾಗಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಎಂ.ಪಿಯವರು ಸೋಮವಾರ ಅಧಿಕಾರ ಸ್ವೀಕರಿಸಿದರು.

Read more

ಪ್ರವಾಸಿಗ ರೆಸಾರ್ಟ್‌ನ ಈಜುಕೊಳಗೆ ಬಿದ್ದು ದಾರುಣ ಸಾವು

ಮಂಗಳೂರು : ಪ್ರವಾಸಿಯೊಬ್ಬರು ನಗರದ ರೆಸಾರ್ಟ್‌ನ ಈಜುಕೊಳದಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಸಂಭವಿಸಿದೆ. ಮಡಿಕೇರಿಯ ಕುಶಾಲನಗರದ ಪ್ರವಾಸಿ ನಿಶಾಂತ್ ಈಜಲೆಂದು ಈಜುಕೊಳಕ್ಕೆ ಹಾರಿದ ಸಂದರ್ಭ ತಲೆ ಟ್ವಿಸ್ಟ್ ಆಗಿ ಈಜುಕೊಳದಲ್ಲಿ ಮುಳುಗಿ ಸಾವಿಗೀಡಾಗಿದ್ದಾರೆ. ನಿಶಾಂತ್ ಕುಶಾಲನಗರದಲ್ಲಿ ಮೊಬೈಲ್ ಗ್ಯಾಲರಿ ಶಾಪ್ ಮಾಲೀಕರಾಗಿದ್ದರು.…

Read more

ಸುಲಿಗೆಯ ನಾಟಕವಾಡಿದ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲು

ಕಾರ್ಕಳ : ಮೆಣಸಿನ ಹುಡಿ ಎರಚಿ ಹಣ ಸುಲಿಗೆ ಮಾಡಿರುವುದಾಗಿ ನಾಟಕವಾಡಿ ಪೊಲೀಸರಿಗೆ ಸುಳ್ಳು ಮಾಹಿತಿ ನೀಡಿದ ವ್ಯಕ್ತಿಯ ವಿರುದ್ಧ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೂಡಬಿದ್ರೆ ತಾಲೂಕಿನ ಕಡಂದಲೆ ನಿವಾಸಿ ವಿಶ್ವನಾಥ ಎಂಬಾತ ತಾನು ಮಾಡಿದ್ದ ಸಾಲವನ್ನು…

Read more

ನಗರಾಭಿವೃದ್ಧಿ ಪ್ರಾಧಿಕಾರದ ಸಾಮಾನ್ಯ ಸಭೆ – ವಿವಿಧ ಯೋಜನೆಗಳ ಬಗ್ಗೆ ಚರ್ಚೆ

ಉಡುಪಿ : ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಸಾಮಾನ್ಯ ಸಭೆಯು ಇಂದು ಪ್ರಾಧಿಕಾರದ ಕಚೇರಿಯಲ್ಲಿ ನಡೆಯಿತು‌.ಸಭೆಯಲ್ಲಿ ವಿವಿಧ ಯೋಜನೆಗಳನ್ನು ಕಾರ್ಯಗತಗೊಳಿಸುವ ಬಗ್ಗೆ ಚರ್ಚೆ ನಡೆಯಿತು. ಪ್ರಾಧಿಕಾರಕ್ಕೆ ಸಂಬಂಧಿಸಿದಂತೆ ಜನರಿಂದ ಬಂದ ದೂರು ಅಹವಾಲುಗಳ ಕುರಿತು ಶಾಸಕರುಗಳ ನೇತೃತ್ವದಲ್ಲಿ ಚರ್ಚೆ ನಡೆಸಲಾಯಿತು. ಸಭೆಯಲ್ಲಿ ಉಡುಪಿ…

Read more

ಮನೆಯಲ್ಲಿದ್ದ ವೃದ್ಧೆಯ ಚಿನ್ನ ಎಗರಿಸಿದ ಖತರ್ನಾಕ್ ಕಳ್ಳ

ಕೋಟ : ಮನೆಯಲ್ಲಿ ವೃದ್ಧೆ ಮಾತ್ರ ಇರುವ ವೇಳೆ ಬಾಗಿಲು ಮುರಿದು ಒಳಪ್ರವೇಶಿಸಿದ ಕಳ್ಳನೋರ್ವ ಅವರೊಂದಿಗೆ ಮನೆಯವರಂತೆ ಮಾತನಾಡಿ ಆಕೆಯ ಚಿನ್ನಾಭರಣ ಕದ್ದು ಪರಾರಿಯಾದ ಘಟನೆ ಕೋಟ ಪೊಲೀಸ್ ಠಾಣೆ ವ್ಯಾಪ್ತಿಯ ಮಣೂರಿನಲ್ಲಿ ಮಾ.20ರಂದು ನಡೆದಿದೆ. ರುದ್ರಮ್ಮ(92) ಚಿನ್ನ ಕಳೆದುಕೊಂಡಿರುವ ವೃದ್ಧೆ.…

Read more

ಪ್ರಮೋದ್ ಮಧ್ವರಾಜ್‌ರನ್ನು ಬಂಧಿಸುವಂತೆ ಕರ್ನಾಟಕ ರಾಜ್ಯ ಬಂಜಾರ ಯುವಕರ ಮತ್ತು ವಿದ್ಯಾರ್ಥಿ ಸಂಘ ಆಗ್ರಹ

ಉಡುಪಿ : ಮಲ್ಪೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲ್ಪೆಯಲ್ಲಿ ಬಂಧಿತರನ್ನು ಬಿಡುಗಡೆ ಮಾಡಲು ಆಗ್ರಹಿಸಿ ನಡೆದ ಪ್ರತಿಭಟನೆಯಲ್ಲಿ ಪ್ರಚೋದನಕಾರಿಯಾಗಿ ಮಾತನಾಡಿದ ಆರೋಪದಡಿಯಲ್ಲಿ ಮಾಜಿ ಸಚಿವ ಪ್ರಮೋದ್ ಮಧ್ಚರಾಜ್ ವಿರುದ್ಧ ಪ್ರಕರಣ ದಾಖಲಾಗಿದೆ. ಇದೀಗ ಅವರನ್ನು ಕೂಡಲೇ ಬಂಧಿಸಬೇಕೆಂದು ಕರ್ನಾಟಕ ರಾಜ್ಯ ಬಂಜಾರ…

Read more

ಸನ್ನಡತೆ ಆಧಾರದಲ್ಲಿ ಆರೋಪಿಗೆ ಶಿಕ್ಷೆಯಿಂದ ವಿನಾಯಿತಿ

ಕುಂದಾಪುರ : ಸರಕಾರಿ ಹಾಡಿಯಲ್ಲಿ ಮಣ್ಣಿನ ಮಡಿಕೆಯೊಂದರಲ್ಲಿ ಸಿಕ್ಕ ಹಳೆಯ ಕಾಲದ ಚಿನ್ನಾಭರಣಗಳನ್ನು ತನ್ನ ಸ್ವಂತಕ್ಕೆ ಬಳಸಿದ ಸಾಧು ಪೂಜಾರ್ತಿ(45) ಎಂಬವರ ವಿರುದ್ಧದ ಆರೋಪ ಸಾಬೀತಾಗಿದ್ದು, ಆಕೆಯನ್ನು ದೋಷಿ ಎಂಬುದಾಗಿ ಕುಂದಾಪುರದ 2ನೇ ಜೆಎಂಎಫ್‌ಸಿ ನ್ಯಾಯಾಲಯ ಆದೇಶ ನೀಡಿದೆ. ಆದರೆ ಕಳೆದ…

Read more

ಯಕ್ಷಗುರು ಬನ್ನಂಜೆ ಸಂಜೀವ ಸುವರ್ಣ ಅವರ ಜೀವನ ಸಾಧನೆಯ ಸಮಗ್ರ ದಾಖಲೀಕರಣ : ಡಾ.ತಲ್ಲೂರು

ಉಡುಪಿ : ಉಡುಪಿಯ ಖ್ಯಾತ ಯಕ್ಷಗಾನ ಗುರು ಬನ್ನಂಜೆ ಸಂಜೀವ ಸುವರ್ಣ ಅವರ ಯಕ್ಷಗಾನ ಜೀವನ ಸಾಧನೆ ಬಗ್ಗೆ ಸಮಗ್ರ ದಾಖಲೀಕರಣಕ್ಕೆ ರಾಜ್ಯ ಯಕ್ಷಗಾನ ಅಕಾಡೆಮಿ ಮುಂದಾಗಿದೆ ಎಂದು ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು. ಅವರು ಶನಿವಾರ ಉಡುಪಿಯ…

Read more

ಕೆ. ಗೋವಿಂದ ಭಟ್ ಇವರಿಗೆ “ಯಕ್ಷವಿದ್ಯಾ ಮಾನ್ಯ” ಪ್ರಶಸ್ತಿ

ಉಡುಪಿ : ಯತಿಶ್ರೇಷ್ಠರಾದ ವಿದ್ಯಾಮಾನ್ಯ ತೀರ್ಥ ಶ್ರೀಪಾದರ ಹೆಸರಿನಲ್ಲಿ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ಕೊಡ ಮಾಡುವ “ಯಕ್ಷವಿದ್ಯಾ ಮಾನ್ಯ” ಪ್ರಶಸ್ತಿಗೆ ತೆಂಕುತಿಟ್ಟಿನ ಶ್ರೇಷ್ಠ ಕಲಾವಿದ ಕೆ. ಗೋವಿಂದ ಭಟ್ ಆಯ್ಕೆಯಾಗಿದ್ದಾರೆ. ಕೂಡ್ಲು, ಇರಾ, ಸುರತ್ಕಲ್ ಮತ್ತು ದೀರ್ಘಕಾಲ ಧರ್ಮಸ್ಥಳ ಮೇಳದಲ್ಲಿ…

Read more