ರಾಜಕೀಯ ಕಾರಣಕ್ಕಾಗಿ ಮಹತ್ವಾಕಾಂಕ್ಷಿ ಯೋಜನೆಯೊಂದು ದಿಕ್ಕು ತಪ್ಪುತ್ತಿದೆ : ಪರಶುರಾಮ ಥೀಂ ಪಾರ್ಕ್ ವಿವಾದವನ್ನು ಹಿಂದುತ್ವ, ಧಾರ್ಮಿಕ ವಿಚಾರದಲ್ಲಿ ಎಳೆದು ತರುವುದು ಸರಿಯಲ್ಲ : ಸುನಿಲ್.ಕೆ.ಆರ್

ಪರಶುರಾಮ ಥೀಂ ಪಾರ್ಕ್‌ನ ಕುರಿತು ಕಳೆದ ಒಂದೂವರೆ ವರ್ಷದಲ್ಲಿ ತನಿಖೆ ನಡೆಸಿದರು ಸತ್ಯ ಬಹಿರಂಗ ಪಡಿಸಲು ಸಾಧ್ಯವಾಗಿಲ್ಲ. ಪ್ರವಾಸೋದ್ಯಮ ದೃಷ್ಟಿಯಿಂದ ರೂಪುಗೊಂಡಿರುವಂತಹ ಪರಶುರಾಮ ಥೀಮ್ ಪಾರ್ಕನ್ನು ಹಿಂದುತ್ವದ ಧಾರ್ಮಿಕ ವಿಚಾರದಲ್ಲಿ ಎಳೆದು ತರುವುದು ಸರಿಯಲ್ಲ. ಪರಶುರಾಮ ಥೀಮ್ ಪಾರ್ಕ್ ಮೂಲಕ ಬೈಲೂರು ಪ್ರವಾಸಿ ತಾಣವಾಗಿ ಪ್ರಸಿದ್ಧಿ ತಂದು ಕಾರ್ಕಳಕ್ಕೆ ಒಂದು ಮುಕುಟಪ್ರಾಯವಾಗಬೇಕಿತ್ತು. ಅತ್ಯಂತ ಸುಂದರ ಪರಿಸರದಲ್ಲಿ ಥೀಮ್ ಪಾರ್ಕ್ ನಿರ್ಮಾಣದೊಂದಿಗೆ ಎಲ್ಲೆಡೆಯಿಂದ ಪ್ರವಾಸಿಗರನ್ನು ಆಕರ್ಷಿಸಬೇಕಿತ್ತು.

ಆದರೆ, ರಾಜಕೀಯ ಕಾರಣಕ್ಕಾಗಿ ಮಹತ್ವಾಕಾಂಕ್ಷಿ ಯೋಜನೆಯೊಂದು ದಿಕ್ಕು ತಪ್ಪುತ್ತಿದೆ ಸ್ಥಗಿತಗೊಂಡ ಪರಶುರಾಮ ಥೀಂ ಪಾರ್ಕ್ ಕಾಮಗಾರಿಯನ್ನು ಆದಷ್ಟು ಶೀಘ್ರಪೂರ್ಣಗೊಳಿಸಿ ಪ್ರವಾಸಿಗರ ವೀಕ್ಷಣೆಗೆ ಮುಕ್ತವಾಗಿಸಿ ಕಾರ್ಕಳದ ಗರಿಮೆಯನ್ನ ನಾಡಿನಾದ್ಯಂತ ಪಸರಿಸೋಣ ಎಂದು ವಿಶ್ವಹಿಂದೂ ಪರಿಷದ್ ಪ್ರಮುಖರಾದ ಸುನಿಲ್ ಕೆ ಆರ್ ತಿಳಿಸಿದ್ದಾರೆ.

Related posts

ಅಲೈನ್ಸ್ ಕ್ಲಬ್ ಉಡುಪಿಯಿಂದ ವೈದ್ಯರ ದಿನಾಚರಣೆ : ಪ್ರಸಿದ್ಧ ವೈದ್ಯ ಡಾ.ಆರ್.ಎನ್.ಭಟ್ ಅವರಿಗೆ ಸನ್ಮಾನ

ಶತಾವಧಾನಿ ಡಾ. ಆರ್. ಗಣೇಶ್ ಅವರಿಗೆ ತಲ್ಲೂರು ಕನಕ ಅಣ್ಣಯ್ಯ ಶೆಟ್ಟಿ ಪ್ರಶಸ್ತಿ ಪ್ರದಾನ

ರಂಗೋಲಿ ಕಲಾ ಸಾಧಕಿ, ಭಾರತಿ ಮರವಂತೆಗೆ ‘ಮಧುರಚೆನ್ನ ರಾಜ್ಯ ಪ್ರಶಸ್ತಿ’ ಪ್ರದಾನ