ಸಿಎಂ ವಿರುದ್ಧ ಪ್ರಾಸಿಕ್ಯೂಷನ್‌ ಅನುಮತಿ ರಾಜ್ಯಪಾಲರು ಯಾವ ಮಟ್ಟಕ್ಕೆ ಕೆಳಗಿಳಿದಿದ್ದಾರೆ ಅನ್ನುವುದು ತೋರಿಸುತ್ತದೆ

ಮಂಗಳೂರು : ರಾಜ್ಯಪಾಲರು ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ಅನುಮತಿ ನೀಡಿರುವುದು ನೋಡಿದಾಗ ಅವರು ಯಾವ ಮಟ್ಟಕ್ಕೆ ಕೆಳಗಿಳಿದಿದ್ದಾರೆ ಎಂಬುದನ್ನು ತೋರಿಸುತ್ತದೆ. ಗವರ್ನರ್ ಬಿಜೆಪಿ ಕೈಗೊಂಬೆಯಾಗಿ ವರ್ತಿಸುತ್ತಿದ್ದಾರೆ ಎಂದು ಸಚಿವ ದಿನೇಶ್ ಗುಂಡೂರಾವ್ ಕಿಡಿಕಾರಿದರು.

ಮಂಗಳೂರಿನಲ್ಲಿ ಮಾತನಾಡಿದ ಅವರು, ಇದೊಂದು ಷಡ್ಯಂತರದ ಭಾಗ ಎಂಬುದು ಮೊದಲೇ ನಮಗೆ ಗೊತ್ತಿದೆ. ಮೋದಿ ಸರ್ಕಾರ ಎಲ್ಲಾ ಸಂವಿಧಾನಿಕ ಹುದ್ದೆಗಳನ್ನು ಸರ್ವನಾಶ ಮಾಡುತ್ತಿದೆ. ಇಡಿ, ಐಟಿ, ಸಿಬಿಐ ಎಲ್ಲವನ್ನೂ ದುರುಪಯೋಗ ಮಾಡಿದೆ. ರಾಜ್ಯಪಾಲರ ಕಚೇರಿ ಈಗ ಬಿಜೆಪಿ ಕಚೇರಿ ಆಗಿದೆ. ನಾವು ಕಾನೂನು ಹೋರಾಟ ಮಾಡುತ್ತಿದ್ದೇವೆ. ಸಿಎಂ ಇದಕ್ಕೆಲ್ಲಾ ಜಗ್ಗೋದು ಇಲ್ಲ, ಬಗ್ಗೋದು ಇಲ್ಲ ಎಂದರು.

ಯಡಿಯೂರಪ್ಪ ಮೇಲೆ ಲೋಕಾಯುಕ್ತ ಸಂತೋಷ್ ಹೆಗ್ಡೆಯವರೇ ವರದಿ ಕೊಟ್ಟಿದ್ದರು. ಯಡಿಯೂರಪ್ಪ ತಪ್ಪಿನ ಬಗ್ಗೆ ಆ ವರದಿಯಲ್ಲಿ ಇತ್ತು. ಆದರೂ ಗವರ್ನರ್ ಆಗ ಬಹಳಷ್ಟು ನೋಡಿ ಪ್ಯಾಷಿಕ್ಯೂಷನ್ ಅನುಮತಿ ನೀಡಿದ್ದರು. ಯಡಿಯೂರಪ್ಪರಿಗೂ ಸಿದ್ದರಾಮಯ್ಯರಿಗೂ ಹೋಲಿಕೆ ಮಾಡಲು ಆಗುವುದಿಲ್ಲ. ಯಡಿಯೂರಪ್ಪ ಒಬ್ಬ ಮಹಾಭ್ರಷ್ಟ, ಅವರು ಹಲವು ಕೇಸ್‌ಗಳಲ್ಲಿ ಇದ್ದಾರೆ ಎಂದರು.

ರಾಜ್ಯಪಾಲರ ನಡೆ ಅತ್ಯಂತ ಅಕ್ಷಮ್ಯ ಅಪರಾಧ. ಮೋದಿ, ಅಮಿತ್ ಶಾ ಕಚೇರಿಯಲ್ಲೇ ಇದೆಲ್ಲಾ ಸಿದ್ದವಾಗಿದೆ.‌ ಇದು ಸಿದ್ದರಾಮಯ್ಯರನ್ನ ಮುಗಿಸೋ ಅತೀ ದೊಡ್ಡ ಷಡ್ಯಂತ್ರ. ಸಿಎಂ ಸಿದ್ದರಾಮಯ್ಯ ಇನ್ನಷ್ಟು ಗಟ್ಟಿಯಾಗಿದ್ದಾರೆ, ಜನಪ್ರಿಯರಾಗಿದ್ದಾರೆ.‌ ಬಿಜೆಪಿ ಪಾದಯಾತ್ರೆ ಅತೀ ದೊಡ್ಡ ಪ್ಲಾಪ್ ಶೋ, ನಮ್ಮ ಸಮಾವೇಶ ಗೆದ್ದಿದೆ.‌ ಇದರ ವಿರುದ್ದ ನಾವು ಹೋರಾಟ ಮಾಡಿಯೇ ಮಾಡ್ತೇವೆ ಎಂದು ದಿನೇಶ್ ಗುಂಡೂರಾವ್ ಹೇಳಿದರು.

Related posts

ಮಂಗಳೂರು ವಿವಿಯಿಂದ ಯಕ್ಷ ಮಂಗಳ ಪ್ರಶಸ್ತಿ ಪ್ರದಾನ

ಮೂಡಲಪಾಯ ಯಕ್ಷಗಾನದ ಅಭ್ಯುದಯವನ್ನು ಬೆಂಬಲಿಸಲು ಅಕಾಡೆಮಿ ಬದ್ಧವಾಗಿದೆ : ಡಾ. ತಲ್ಲೂರು

National Fame Award of India Books of Award – Sushanth Brahmavar