ಕಾಂತಾರ ಸಕ್ಸಸ್ ಬಳಿಕ ಕೊರಗಜ್ಜ ಸನ್ನಿಧಾನಕ್ಕೆ ರಿಶಬ್ ಶೆಟ್ಟಿ; ಭಾಗ ೧ ಸಕ್ಸಸ್‌ಗೆ ಬಬ್ಬುಸ್ಚಾಮಿ, ಕೊರಗಜ್ಜ, ಪಂಜುರ್ಲಿ ದೈವಗಳಿಗೆ ವಿಶೇಷ ಪ್ರಾರ್ಥನೆ

ಕಾಂತಾರ ಸಿನಿಮಾ ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಂಡಿದೆ. ಈ ದೊಡ್ಡ ಮಟ್ಟದ ಯಶಸ್ಸಿನ ಹಿಂದೆ ಇರುವ ಉಡುಪಿಯ ಬೈಲೂರು ಭಾಗದ ನೀಲಕಂಠ ಬಬ್ಬುಸ್ವಾಮಿ ದೈವಸ್ಥಾನದ ಸನ್ನಿಧಾನದಲ್ಲಿರುವ ಕೊರಗಜ್ಜನಿಗೆ ಮಧ್ಯ, ಚಕ್ಕುಲಿ, ಬೀಡ ಕೊಟ್ಟು ವಿಶೇಷ ಪೂಜೆ ಸಲ್ಲಿಸಿದ್ದಾರೆ ನಟ, ನಿರ್ದೇಶಕ ರಿಶಬ್ ಶೆಟ್ಟಿ. ಹೌದು, ಈ ಸನ್ನಿಧಾನದಲ್ಲಿರುವ ಬಬ್ಬುಸ್ವಾಮಿ, ಕೊರಗಜ್ಜ, ಬಳಿ ಪ್ರಾರ್ಥನೆ ಮಾಡಿದ ವೇಳೆ ಪಂಜುರ್ಲಿ ದೈವದ ಮೇಲೆ ಕಥೆ ನಿರ್ಮಿಸಿ ಎನ್ನುವ ನುಡಿ ಕೇಳಿ ಬಂದಿತ್ತಂತೆ. ಈ ಹಿನ್ನಲೆ ಕಾಂತಾರ ದೊಡ್ಡ ಸಕ್ಸಸ್ ಕಂಡಿತ್ತು. ಈ ಯಶಸ್ಸಿನ ಬಳಿಕ ಮತ್ತೆ ರಿಶಬ್ ಶೆಟ್ಟಿ ಪತ್ನಿ, ಮಕ್ಕಳ ಜೊತೆ ಆಗಮಿಸಿ ಕೊರಗಜ್ಜ, ಬಬ್ಬುಸ್ವಾಮಿಗೆ ವಿಶೇಷ ಪ್ರಾರ್ಥನೆ, ಪೂಜೆ ಸಲ್ಲಿಸಿದ್ರು. ಈಗಾಗಲೇ ನಡೆಯುತ್ತಿರುವ ಕಾಂತಾರ ಭಾಗ ೧ ಸಿನಿಮಾಗೂ ದೊಡ್ಡ ಮಟ್ಟದ ಯಶಸ್ಸು ಸಿಗಲಿ ಎಂದು ಪ್ರಾರ್ಥನೆ ಸಲ್ಲಿಸಿದ್ದಾರೆ. ಈ ವೇಳೆ ದೈವಸ್ಥಾನದ ಆಡಳಿತ ಮಂಡಳಿ ರಿಶಬ್ ಶೆಟ್ಟಿ ಕುಟುಂಬವನ್ನ ಗೌರವಿಸಿತು. ರಿಶಬ್ ಬರೋದನ್ನೇ ಕಾಯುತ್ತಿದ್ದ ಅಭಿಮಾನಿಗಳು ಸೆಲ್ಪಿ ತೆಗೆದು ಖುಷಿಪಟ್ರು.

Related posts

ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು ಭೇಟಿಯಾದ ಸಂಸದ ಕ್ಯಾ. ಬ್ರಿಜೇಶ್‌ ಚೌಟ : ಎನ್‌ಐಎ ಘಟಕ ಸ್ಥಾಪಿಸುವಂತೆ ಕೋರಿಕೆ

ಅಶ್ವತ್ಥದ ಎಲೆಯಲ್ಲಿ ಮೂಡಿಬಂದ ಆರ್ಥಿಕ ತಜ್ಞ ಮನಮೋಹನ್ ಸಿಂಗ್

ಮೀನು ಸಾಗಿಸುವ ವಾಹನದಲ್ಲಿ ಜಾನುವಾರು ಸಾಗಾಟ : ಪಲ್ಟಿಯಾದ ವಾಹನ, ಆರೋಪಿ ಚಾಲಕ ಪರಾರಿ