ಆಧಿವಕ್ತಾ ಪರಿಷತ್ ಕರ್ನಾಟಕ ದಕ್ಷಿಣ ಪ್ರಾಂತದ ಉಡುಪಿ ಜಿಲ್ಲೆಯ ಪ್ರಶಿಕ್ಷಣ ವರ್ಗ

ಬ್ರಹ್ಮಾವರ : ಆಧಿವಕ್ತಾ ಪರಿಷತ್ ಕರ್ನಾಟಕ ದಕ್ಷಿಣ ಪ್ರಾಂತ ಉಡುಪಿ ಜಿಲ್ಲೆ ಇದರ ಪ್ರಶಿಕ್ಷಣ ವರ್ಗವು ಉಡುಪಿಯ ಹಿರಿಯ ವಕೀಲರಾದ ಬಿ. ನಾಗರಾಜ್ ಅವರ ಮನೆಯಲ್ಲಿ ಉಡುಪಿ ಜಿಲ್ಲಾ ಅಧ್ಯಕ್ಷ ಸಂತೋಷ್ ಹೆಬ್ಬಾರ್ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು.

ಉಡುಪಿ ವಕೀಲರ ಸಂಘದ ಮಾಜಿ ಅಧ್ಯಕ್ಷ ಬಿ. ನಾಗರಾಜ್ ಅವರು ಉದ್ಘಾಟನೆ ಮಾಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ದಕ್ಷಿಣ ಪ್ರಾಂತ್ಯದ ಕಾರ್ಯಾಧ್ಯಕ್ಷ ನ್ಯಾಯವಾದಿ ಗುರುಪ್ರಸಾದ್ ಶೆಟ್ಟಿ, ಕುಂದಾಪುರ ವಕೀಲರ ಸಂಘದ ಅಧ್ಯಕ್ಷರಾದ ಪ್ರಮೋದ್ ಹಂದೆ, ನ್ಯಾಯವಾದಿ ಅಮೃತ ಕಲಾ ಉಪಸ್ಥಿತರಿದ್ದರು. ಅಭ್ಯಾಸ ವರ್ಗವು ಮೂರು ಅವಧಿಯಲ್ಲಿ ನಡೆಯಿತು.

ಅಭ್ಯಾಸವರ್ಗದ ವಿಷಯಗಳಾದ ಭಾರತೀಯ ನ್ಯಾಯ ಸಂಹಿತೆ ಮತ್ತು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಕುರಿತು ಉಚ್ಚ ನ್ಯಾಯಾಲಯದ ಖ್ಯಾತ ವಕೀಲರಾಗಿರುವ ಅಮರ್ ಕೊರೆಯ, ಕಮರ್ಷಿಯಲ್ ಕೋರ್ಟ್ ಆಕ್ಟ್ ಕುರಿತು ಉಚ್ಚ ನ್ಯಾಯಾಲಯದ ಹಿರಿಯ ವಕೀಲರಾದ ಎಂ ಎನ್ ಕುಮಾರ್ ಮತ್ತು ಸಂಘಟನಾತ್ಮಕ ವಿಷಯದ ಬಗ್ಗೆ ಮಂಗಳೂರು ವಕೀಲರಾದ ಜಗದೀಶ್ ಕೆಆರ್ ಇವರು ಮಾಹಿತಿಯನ್ನು ನೀಡಿದರು.

ಸಮಾರೋಪ ಸಮಾರಂಭದಲ್ಲಿ ಉಚ್ಚ ನ್ಯಾಯಾಲಯದ ನ್ಯಾಯವಾದಿ ಅಧಿವ್ಯಕ್ತ ಪರಿಷತ್ತಿನ ದಕ್ಷಿಣ ಪ್ರಾಂತದ ಉಪಾಧ್ಯಕ್ಷರಾದ ರೋಹಿತ್ ಗೌಡ ಮತ್ತು ಮಂಗಳೂರು ವಿಭಾಗದ ಸಂಚಾಲಕ ಚೇತನ್ ನಾಯಕ್ ಎಸ್ ಉಪಸ್ಥಿತರಿದ್ದರು. ಉಡುಪಿಯ ನ್ಯಾಯವಾದಿ ಸಂತೋಷ ಹೆಬ್ಬಾರ್ ಸ್ವಾಗತಿಸಿದರು. ಉಡುಪಿ ಜಿಲ್ಲಾ ಅಧಿವ್ಯಕ್ತ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಆರೂರು ಸುಖೇಶ್ ಶೆಟ್ಟಿ ಅವರು ಧನ್ಯವಾದವನ್ನು ಸಮರ್ಪಿಸಿದರು. ನ್ಯಾಯವಾದಿ ಸಂತೋಷ್ ಕುಮಾರ್ ಮೂಡುಬೆಳ್ಳೆರವರು ಕಾರ್ಯಕ್ರಮದ ನಿರ್ವಹಣೆ ಮಾಡಿದರು.

Related posts

ನೆಕ್ಲಾಜೆ ಶ್ರೀ ಕಾಳಿಕಾಂಬೆಗೆ ಸ್ವರ್ಣ ಪಾದುಕೆ ಸಮರ್ಪಣೆ

ಶಾಸ್ತ್ರೀಪಾರ್ಕ್‌ ಫ್ಲೈಓವರ್‌ ತಳಭಾಗಕ್ಕೆ ಪೊಲೀಸ್‌ ನಿಯೋಜನೆ

ಕಾರು ಕಳವು ಗೈದ ಆರೋಪಿ ಪೊಲೀಸ್ ವಶಕ್ಕೆ