ನ್ಯಾಯಾಲಯಕ್ಕೆ ಹಾಜರಾಗದೆ 34 ವರ್ಷ ತಲೆಮರೆಸಿಕೊಂಡಿದ್ದ ಆರೋಪಿ ಸೆರೆ

ಕಾರ್ಕಳ : ಕಾರ್ಕಳ ನಗರ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ವಿಚಾರಣೆ ಸಂದರ್ಭದಲ್ಲಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯೊಬ್ಬನನ್ನು 34 ವರ್ಷ ಬಳಿಕ ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.

ಬಂಧಿತ ಆರೋಪಿಯನ್ನು ತೆಂಕ ಎಡಪದವಿನ ಲಿಯೋ ರೋಚ್ (64) ಎಂದು ಗುರುತಿಸಲಾಗಿದೆ.

ಈತನ ವಿರುದ್ಧ 2004ರಲ್ಲಿ ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. 34 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದು ಈತನ ಮೇಲೆ ನ್ಯಾಯಾಲಯವು LPC ವಾರೆಂಟ್ ಹೊರಡಿಸಿತ್ತು.

ಎ.ಎಸ್.ಪಿ ಕಾರ್ಕಳ ಹರ್ಷ ಪ್ರಿಯವಂದಾ‌ರವರ ಮಾರ್ಗದರ್ಶನದಲ್ಲಿ, ವೃತ್ತ ನಿರೀಕ್ಷಕ ಮಂಜಪ್ಪ ಡಿ ಹಾಗೂ ಕಾರ್ಕಳ ನಗರ ಠಾಣಾ ಪಿಎಸ್ಐಗಳಾದ ಸಂದೀಪ್ ಕುಮಾರ್ ಶೆಟ್ಟಿ ಹಾಗು ಶಿವಕುಮಾರ್ ಎಸ್.ಆರ್ ರವರ ಸೂಚನೆಯಂತೆ ಕಾರ್ಕಳ ನಗರ ಠಾಣೆಯ ಹೆಚ್.ಸಿ ರಮೇಶ್ ಹೆಚ್. ಹಾಗೂ ಪಿಸಿ ದರ್ಶನ್ ಅವರು ವಾರೆಂಟ್ ಅಸಾಮಿ ತೆಂಕ ಎಡಪದವಿನ ಲಿಯೋ ರೋಚ್‌ನನ್ನು ಮಾರ್ಚ್ 19ರಂದು ಮಂಗಳೂರಿನ ಪಜೀರ್‌‌ನಲ್ಲಿ ಬಂಧಿಸಿದ್ದಾರೆ. ಆರೋಪಿಗೆ ಕಾರ್ಕಳ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.

Related posts

ಅಲೈನ್ಸ್ ಕ್ಲಬ್ ಉಡುಪಿಯಿಂದ ವೈದ್ಯರ ದಿನಾಚರಣೆ : ಪ್ರಸಿದ್ಧ ವೈದ್ಯ ಡಾ.ಆರ್.ಎನ್.ಭಟ್ ಅವರಿಗೆ ಸನ್ಮಾನ

ಶತಾವಧಾನಿ ಡಾ. ಆರ್. ಗಣೇಶ್ ಅವರಿಗೆ ತಲ್ಲೂರು ಕನಕ ಅಣ್ಣಯ್ಯ ಶೆಟ್ಟಿ ಪ್ರಶಸ್ತಿ ಪ್ರದಾನ

ರಂಗೋಲಿ ಕಲಾ ಸಾಧಕಿ, ಭಾರತಿ ಮರವಂತೆಗೆ ‘ಮಧುರಚೆನ್ನ ರಾಜ್ಯ ಪ್ರಶಸ್ತಿ’ ಪ್ರದಾನ