29 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಸೆರೆ

ಪಡುಬಿದ್ರಿ : ಮೂರು ದಶಕಗಳ ಹಿಂದಿನ ಪ್ರಕರಣವೊಂದರ ಆರೋಪಿ, ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಬಶೀರ್‌ ಅಹಮ್ಮದ್‌ ಎಂಬಾತನನ್ನು ಮಂಗಳೂರಿನ ವೆಲೆನ್ಶಿಯಾ ಬಳಿ ಪಡುಬಿದ್ರಿ ಪೊಲೀಸರು ಬಂಧಿಸಿ ಉಡುಪಿಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯವು ಆರೋಪಿಗೆ ಜುಲೈ 15ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ.

1995ರ ಪ್ರಕರಣಕ್ಕೆ ಸಂಬಂಧಿಸಿ ಎರ್ಮಾಳು ನಿವಾಸಿ ಸುಲೈಮಾನ್‌ ಅವರಿಂದ ಬರಬೇಕಾಗಿದ್ದ ಹಣವನ್ನು ವಾಪಸ್‌ ಕೇಳಲು ಪಡುಬಿದ್ರಿ ಪೇಟೆಯಲ್ಲಿ ಸುಲೈಮಾನ್‌ ಗೆಳೆಯ ಮಂಗಳೂರಿನ ಕುದ್ರೋಳಿ ವಾಸಿ ಉಮ್ಮರ್‌ ಫಾರೂಕ್‌ ಹಾಗೂ ಆತನ ಸ್ನೇಹಿತರಾದ ಮಂಗಳೂರು ಕುದ್ರೋಳಿ ವಾಸಿಗಳಾದ ಬಶೀರ್‌ ಅಹಮ್ಮದ್‌, ಆರೀಫ್‌, ಮುಸ್ತಫಾ ಅವರೊಂದಿಗೆ ಬಂದು ಜೀವ ಬೆದರಿಕೆ ಹಾಕಿದ್ದರು ಎಂದು ಪ್ರಕರಣ ದಾಖಲಾಗಿತ್ತು. ಅಂದು ಅವರನ್ನು ಠಾಣೆಯ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು.

ಈ ಪೈಕಿ ಆರೀಫ್‌ ಮತ್ತು ಮುಸ್ತಫಾ ನ್ಯಾಯಾಲಯದಿಂದ ಖುಲಾಸೆಯಾಗಿರುತ್ತಾರೆ. ಉಮ್ಮರ್‌ ಫಾರೂಕ್‌ ಮತ್ತು ಬಶೀರ್‌ ಅಹಮ್ಮದ್‌ ತಲೆಮರೆಸಿಕೊಂಡಿದ್ದರು.

Related posts

ಅಲೈನ್ಸ್ ಕ್ಲಬ್ ಉಡುಪಿಯಿಂದ ವೈದ್ಯರ ದಿನಾಚರಣೆ : ಪ್ರಸಿದ್ಧ ವೈದ್ಯ ಡಾ.ಆರ್.ಎನ್.ಭಟ್ ಅವರಿಗೆ ಸನ್ಮಾನ

ಶತಾವಧಾನಿ ಡಾ. ಆರ್. ಗಣೇಶ್ ಅವರಿಗೆ ತಲ್ಲೂರು ಕನಕ ಅಣ್ಣಯ್ಯ ಶೆಟ್ಟಿ ಪ್ರಶಸ್ತಿ ಪ್ರದಾನ

ರಂಗೋಲಿ ಕಲಾ ಸಾಧಕಿ, ಭಾರತಿ ಮರವಂತೆಗೆ ‘ಮಧುರಚೆನ್ನ ರಾಜ್ಯ ಪ್ರಶಸ್ತಿ’ ಪ್ರದಾನ