ಮಲ್ಪೆ ಮಹಿಳೆಯ ಬ್ಯಾಗ್‌ ಎಳೆದು ಪರಾರಿಯಾದ ಆರೋಪಿ ಪೊಲೀಸ್ ವಶಕ್ಕೆ

ಮಲ್ಪೆ : ಮಗುವನ್ನು ಎತ್ತಿಕೊಂಡು ವೈದ್ಯರ ಬಳಿ ಹೋಗುತ್ತಿದ್ದ ಮಹಿಳೆಯ ಕೈಯಲ್ಲಿದ್ದ ಬ್ಯಾಗ್‌ನ್ನು ಎಳೆದು ಆರೋಪಿ ಪರಾರಿಯಾದ ಆರೋಪಿಯನ್ನು ಬಂದಿಸುವಲ್ಲಿ ಮಲ್ಪೆ ಪೊಲೀಸರು ಯಶಸ್ವಿಯಾಗಿದ್ದಾರೆ. ಮಲ್ಪೆ ತೊಟ್ಟಂ ನಿವಾಸಿ ದರ್ಶನ್ ಕುಮಾರ್ ಬಂಧಿತ ಆರೋಪಿ.

ಬಾಗಲಕೋಟೆ ಜಿಲ್ಲೆಯ ನಿವಾಸಿ ಸರಸ್ವತಿ ಎಂಬವರು ಕೆಳಾರ್ಕಳ ಬೆಟ್ಟುವಿನಲ್ಲಿರುವ ತನ್ನ ತಾಯಿ ಮನೆಯಿಂದ ಹೊರಟು ಸಂತೆಕಟ್ಟೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಬೈಕ್‌ನಲ್ಲಿ ಬಂದಿದ್ದ ಆರೋಪಿ ಸರಸ್ವತಿ ಅವರ ಕೈಯಲ್ಲಿದ್ದ ಬ್ಯಾಗ್‌ನ್ನು ಎಳೆದುಕೊಂಡು ಕೆಮ್ಮಣ್ಣು ಕಡೆಗೆ ಪರಾರಿಯಾಗಿದ್ದಾನೆ.

ಬ್ಯಾಗ್‌ನಲ್ಲಿ ಮೊಬೈಲ್ ಹಾಗೂ 2500 ರೂ. ನಗದು ಇತ್ತು. ಈ ಕುರಿತು ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಕರಣದ ಆರೋಪಿಯಾದ ದರ್ಶನ್ ಕುಮಾರ್, ತೊಟ್ಟಂ, ಮಲ್ಪೆ ಇತನನ್ನು ಮಲ್ಪೆ ಪೊಲೀಸ್ ಠಾಣಾ ಉಪನಿರೀಕ್ಷಕರಾದ ರವಿ ಹಾಗೂ ಸಿಬ್ಬಂದಿಗಳು ಬಂಧಿಸಿದ್ದು, ಬಂಧಿತನಿಂದ ಸುಮಾರು 13,000 ಬೆಲೆಯ ರೆಡ್ಮಿ ಮೊಬೈಲ್, ರೂಪಾಯಿ 2,500/- ಹಾಗೂ ಲೇಡೀಸ್ ಪರ್ಸನ್ನು ವಶಪಡಿಸಿಕೊಳ್ಳಲಾಗಿದೆ.

Related posts

ಮೀನುಗಾರರ ಪ್ರತಿಭಟನೆಯಲ್ಲಿ ಪ್ರಚೋದನಕಾರಿ ಭಾಷಣ-ಹಿಂದೂ ಯುವಸೇನೆ ಮುಖಂಡನ ವಿರುದ್ಧ ಸುಮೊಟೋ ಕೇಸ್

ಕಡಿದು ಬಿಸಾಡಿದ ಬಾಳೆ ದಿಂಡಿನಲ್ಲಿ ಚಿಗುರುಡೆದ ಬಾಳೆಗೊನೆ

ಕಚೇರಿಯ ಎದುರು ನಿಲ್ಲಿಸಿದ್ದ ಬೈಕ್‌ ಕಳವು