ಮಂಗಳೂರಿನಲ್ಲಿ ಹಿಂದೂ ಯುವತಿಗೆ ಮುಸ್ಲಿಂ ಯುವಕನಿಂದ ಬೆದರಿಕೆ, ಕಿರುಕುಳ: ಆರೋಪಿ ಪೊಲೀಸ್ ವಶಕ್ಕೆ

ಮಂಗಳೂರು : ನನ್ನ ಪ್ರೀತಿಸುವಂತೆ ನಿನ್ನ ಸಹೋದರಿಗೆ ಹೇಳು, ಇಲ್ಲ ನಿನ್ನನ್ನು 24 ತುಂಡು ಮಾಡುವೆ ಎಂದು ಯುವಕನಿಗೆ ಬೆದರಿಕೆ ಸಂದೇಶ ಬಂದ ಘಟನೆ ಮಂಗಳೂರು ಹೊರವಲಯದ ಸುರತ್ಕಲ್ನಲ್ಲಿ ನಡೆದಿತ್ತು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿಯ ದೂರಿನ ಹಿನ್ನೆಲೆ ಇಡ್ಯಾ ಗ್ರಾಮದ ಶಾರೀಕ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಆನ್‌ಲೈನ್‌ನಲ್ಲಿ ಬೆದರಿಕೆ ಮತ್ತು ಕಿರುಕುಳದ ಆರೋಪದ ಹಿನ್ನೆಲೆಯಲ್ಲಿ ಯುವತಿಯ ಆತ್ಮಹತ್ಯೆಗೆ ಯತ್ನಿಸಿರುವ ಸೈಬರ್ ಕಿರುಕುಳ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡಿದ್ದು ತಮ್ಮ ಫೇಸ್‌ಬುಕ್ ಖಾತೆ ಹ್ಯಾಕ್ ಆಗಿರುವ ಬಗ್ಗೆ ಅಕ್ಟೋಬರ್ 22 ರಂದು ಸುರತ್ಕಲ್ ಪೊಲೀಸರಿಗೆ ದೂರು ನೀಡಿದ್ದರು.

ಆಕೆಯ ಖಾತೆಯಿಂದ ತನ್ನ ಸಹೋದರ ಕಿಶನ್ ಮತ್ತು ಆತನ ಸ್ನೇಹಿತ ಹರ್ಷಿತ್‌ಗೆ ಅಶ್ಲೀಲ ಮತ್ತು ಬೆದರಿಕೆ ಸಂದೇಶಗಳನ್ನು ಕಳುಹಿಸಲಾಗಿದೆ ಎಂದು ಅವರು ದೂರಿನಲ್ಲಿ ಉಲ್ಲೇಖಿಸಿದ್ದು ಇಡ್ಯಾ ಗ್ರಾಮದ ನಿವಾಸಿ ಶಾರಿಕ್ ಎಂಬಾತನನ್ನು ಕಳುಹಿಸಿರುವ ಬೆದರಿಕೆಯ ಸಂದೇಶವನ್ನು ಪೊಲೀಸರು ಸರಿಯಾಗಿ ಪರಿಶೀಲಿಸದೆ ಆರೋಪಿಯನ್ನು ಮನೆಗೆ ಕಳುಹಿಸಿರುವುದು ಕೇದಕರ.

ಸಾಮಾಜಿಕ ಮಾದ್ಯಮದಲ್ಲಿ ವರದಿ ಬಿತ್ತರಿಸಿದ ಹಿನ್ನೆಲೆ ಹಿಂದೂ ಸಂಘಟನೆ ಹೆಚ್ಚೆತ್ತು ಹೋರಾಟ ನಡೆಸುವ ಸೂಚನೆ ನೀಡುವ ಮುನ್ನಲೆ ಸುರತ್ಕಲ್ ಪೊಲೀಸ್ ಠಾಣೆಯ ಸಿಬ್ಬಂದಿಗಳು ಈ ಗಂಭೀರ ಪ್ರಕರಣವನ್ನು ಭಾರತೀಯ ದಂಡ ಸಂಹಿತೆಯ 78, 352, 351 ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ 66C, 66D ಮತ್ತು 67A & B ಸೆಕ್ಷನ್ ಅಡಿ ದಾಖಲಿಸಿದೆ.

ಪೋಲೀಸರ ಬೇಜಾಬ್ದಾರಿಯ ತನಿಖೆಯಿಂದಾಗಿ ಆರೋಪಿ ಮನೆಗೆ ಹೊರಡಿದ್ದು ಬಳಿಕ ಶಾರೀಕನನ್ನು ವಿಚಾರಣೆಗಾಗಿ ಠಾಣೆಗೆ ಕರೆಯಲಾಗಿದ್ದು, ಅವರ ಮೊಬೈಲ್ ಮತ್ತು ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್‌ಗಳನ್ನು ಪರಿಶೀಲಿಸಿ ಆತನ ಮೊಬೈಲ್ ನಿಂದ ಹಲವು ಮಾಹಿತಿಗಳನ್ನು ಸಂಗ್ರಹಿಸಿದ್ದಾರೆ.

Related posts

ಉಡುಪಿ ಜಿಲ್ಲೆಯಲ್ಲಿ ಮಂಗನಕಾಯಿಲೆ ಪ್ರಕರಣ ಬಾರದಂತೆ ಮುನ್ನೆಚ್ಚರಿಕೆ ವಹಿಸಿ : ಆರೋಗ್ಯ ಇಲಾಖೆಗೆ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಸೂಚನೆ

ನಿಷೇಧಾಜ್ಞೆ, ಸಂತೆ, ಜಾತ್ರೆ ನಿಷೇಧ ಆದೇಶ ಹಿಂದೆಗೆತ : ಉಡುಪಿ ಜಿಲ್ಲಾಧಿಕಾರಿ

ಶಾಲಾ ವಾಹನಕ್ಕೆ ಬೈಕ್ ಢಿಕ್ಕಿಯಾಗಿ ಸವಾರ ಮೃತ್ಯು