ಇಂದ್ರಾಳಿ ಕೊಲೆ ಪ್ರಕರಣದ ಆರೋಪಿಗಳು ಖುಲಾಸೆ

ಉಡುಪಿ : ನಗರ ಪೋಲಿಸ್‌ ಠಾಣೆಯ ವ್ಯಾಪ್ತಿಯ ಇಂದ್ರಾಳಿ ರೈಲ್ವೆ ಸ್ಟೇಷನ್‌ ನಾಗಬನ ಬಳಿಯ ಸೇತುವೆ ಹತ್ತಿರ 2022ರ ಜುಲೈ 21ರಂದು ನಡೆದ ವ್ಯಕ್ತಿಯ ಕೊಲೆಗೆ ಸಂಬಂಧಿಸಿದಂತೆ ಆರೋಪಿಗಳ ವಿರುದ್ಧ ಪ್ರಕರಣ ಸಾಬೀತುಪಡಿಸಲು ಪ್ರಾಸಿಕ್ಯೂಷನ್‌ ವಿಫ‌ಲವಾದ ಹಿನ್ನೆಲೆಯಲ್ಲಿ ಉಡುಪಿಯ ಎರಡನೇ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯ ಆರೋಪಿಗಳನ್ನು ಖುಲಾಸೆಗೊಳಿಸಿದೆ.

ಕುಮಾರ್‌ ಎಂಬವರ ಮೇಲೆ ವಿಘ್ನೇಶ್‌ ಕುಟ್ಟಿ ಮತ್ತು ನವೀನ್‌ ಕುಮಾರ್‌ ಎನ್ನುವವರು ಆತ ತನ್ನ ತಾಯಿಯ ಬಗ್ಗೆ ಅವ್ಯಾಚ್ಯ ಶಬ್ದಗಳಿಂದ ಬೈದುದರಿಂದ ಕೋಪಗೊಂಡ ಆರೋಪಿಗಳು ದೊಣ್ಣೆಯಿಂದ ಕುಮಾರ್‌ನ ತಲೆಗೆ ಹೊಡೆದು ತೀವ್ರ ಗಾಯ ಉಂಟು ಮಾಡಿದ್ದರ ಪರಿಣಾಮ ಆತ ಸ್ಥಳದಲ್ಲಿ ಮೃತಪಟ್ಟಿದ್ದನು. ಪೊಲೀಸರು ಈ ಕೊಲೆ ಪ್ರಕರಣದ ಸಂಬಂಧ ಇಬ್ಬರು ಆರೋಪಿಗಳನ್ನು ದಸ್ತಗಿರಿ ಮಾಡಿ ಅಂತಿಮ ವರದಿಯನ್ನು ಉಡುಪಿಯ ಎರಡನೇ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಪೊಲೀಸರು ಅಂತಿಮ ವರದಿಯಲ್ಲಿ ನಮೂದಿಸಿದ ಎಲ್ಲ ಸಾಕ್ಷಿಗಳನ್ನು ವಿಚಾರಣೆ ಮಾಡಿ ಆರೋಪಿಗಳ ವಿರುದ್ಧ ಪ್ರಕರಣ ಸಾಬೀತುಪಡಿಸಲು ಪ್ರಾಸಿಕ್ಯೂಷನ್‌ ವಿಫ‌ಲವಾಗಿದೆ ಎಂದು ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ದಿನೇಶ್‌ ಹೆಗ್ಡೆ ಅವರು ಆರೋಪಿಗಳನ್ನು ಪ್ರಕರಣದಿಂದ ಖುಲಾಸೆಗೊಳಿಸಿರುತ್ತಾರೆ. ಈ ಪ್ರಕರಣದಲ್ಲಿ ಆರೋಪಿಗಳ ಪರವಾಗಿ ನ್ಯಾಯವಾದಿ ಚೇರ್ಕಾಡಿ ಅಖೀಲ್‌ ಬಿ.ಹೆಗ್ಡೆ ವಾದಿಸಿದ್ದಾರೆ.

Related posts

ಚಾಲಕನ ನಿಯಂತ್ರಣ ತಪ್ಪಿದ ಸಿಮೆಂಟ್ ರೆಡಿಮಿಕ್ಸ್ ಲಾರಿ ಪಲ್ಟಿ – ತಪ್ಪಿದ ಭಾರಿ ದುರಂತ

ಹಬ್ಬದ ಋತುವಿನ ಸ್ವಾಗತ: ವಾಗ್ಶದಲ್ಲಿ ಕ್ರಿಸ್ಮಸ್ ಕೇಕ್ ಗಾಗಿ ಹಣ್ಣಿನ ಮಿಶ್ರಣ ಸಮಾರಂಭ

ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ನವೀಕೃತ ವೈದ್ಯಕೀಯ ಆಂಕೊಲಾಜಿ ಹೊರರೋಗಿ ಮತ್ತು ಕಿಮೊಥೆರಪಿ ಡೇ ಕೇರ್ ಕೇಂದ್ರದ ಉದ್ಘಾಟನೆ