ಆಕಸ್ಮಿಕವಾಗಿ ಬೆಂಕಿ – ಗೋಣಿ ಚೀಲ ಗೋದಾಮು ಸುಟ್ಟು ಭಸ್ಮ…!

ಬಂಟ್ವಾಳ : ಗೋಣಿ ಚೀಲ ಗೋದಾಮಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ ಘಟನೆ ಸೋಮವಾರ ಮಧ್ಯರಾತ್ರಿ ಬಂಟ್ವಾಳ ತಾಲೂಕಿನ ಬಡಕಬೈಲ್ ಎಂಬಲ್ಲಿ ಸಂಭವಿಸಿದೆ.

ಘಟನೆಯಿಂದಾಗಿ ಇಲ್ಲಿನ ನಿವಾಸಿ ಮುಹಮ್ಮದ್ ಯಾನೆ ಮೋನಾಕ ಎಂಬವರ ಗೋಣಿ ಚೀಲ ದಾಸ್ತಾನು ಇರಿಸುವ ಗೋದಾಮು ಸಂಪೂರ್ಣ ಸುಟ್ಟು ಹೋಗಿದ್ದು, ಪಕ್ಕದ ಹಮೀದ್ ಹಾಗೂ ಸರ್ಪುದ್ದೀನ್ ಎಂಬವರ ಮನೆಗೂ ಬೆಂಕಿ ತಗುಲಿದೆ. ಯಾವುದೇ ಸಾವು-ನೋವು ಸಂಭವಿಸಿಲ್ಲ.

ತಡರಾತ್ರಿ ಘಟನೆ ಈ ಘಟನೆ ನಡೆದಿದ್ದು ಬೆಂಕಿ‌ ನಂದಿಸಲು ಅಗ್ನಿ ಶಾಮಕದಳ ಹಾಗೂ ಸಾರ್ವಜನಿಕರು ಹರಸಾಹಸ ಪಡಬೇಕಾಯಿತು. ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಘಟನೆ‌ಗೆ ಕಾರಣ ಎನ್ನಲಾಗುತ್ತಿದೆ. ಘಟನಾ ಸ್ಥಳಕ್ಕೆ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಭೇಟಿ ನೀಡಿದ್ದಾರೆ.

Related posts

ಮುಸುಕುಧಾರಿಗಳಿಂದ ಎಟಿಎಂ ದರೋಡೆಗೆ ವಿಫಲ ಯತ್ನ : ಆರೋಪಿಗಳ ಪತ್ತೆಗೆ 3 ವಿಶೇಷ ತಂಡ ರಚನೆ

ಕಾಪು ಅಮ್ಮನ ಬ್ರಹ್ಮಕಲಶೋತ್ಸವಕ್ಕೆ ಹರಿದ್ವಾರದಿಂದ ಬರಲಿದೆ ಗಂಗಾಜಲ

ಬಸ್ ಚಾಲಕನಿಗೆ ಹಠಾತ್ ಎದೆನೋವು; ಇಳಿಜಾರಿಗಿಳಿದ ಬಸ್….!