ನಿರ್ಮಾಣ ಹಂತದ ಮನೆಯ ಸ್ಲಾಬ್ನಿಂದ ಆಯತಪ್ಪಿ ಬಿದ್ದು ಮನೆ ಯಜಮಾನ ಮೃತ್ಯು…!

ಕೋಟ : ಬೇಳೂರು ಎಂಬಲ್ಲಿ ನಿರ್ಮಾಣ ಹಂತದ ಮನೆಯ ಸ್ಲಾಬ್ನಿಂದ ಆಯತಪ್ಪಿ ಕೆಳಗೆ ಬಿದ್ದು ಮನೆ ಯಜಮಾನ ಮೃತಪಟ್ಟ ಘಟನೆ ನಡೆದಿದೆ.

ಮೃತ ದುರ್ದೈವಿಯನ್ನು ಸ್ಥಳೀಯ ನಿವಾಸಿ ಗೋಪಾಲ(62) ಎಂದು ಗುರುತಿಸಲಾಗಿದೆ. ಗೋಪಾಲ ಇವರು ಫೆ.10ರಂದು ರಾತ್ರಿ 9.15ರ ಸುಮಾರಿಗೆ ಹೊಸ ಮನೆಯ ಕಾಮಗಾರಿ ನೋಡಲು ಮಕ್ಕಳ ಜೊತೆ ಹೋಗಿದ್ದು, ಅಲ್ಲಿ ಮೊದಲನೇ ಅಂತಸ್ತಿಗೆ ಹೋದಾಗ ಆಯತಪ್ಪಿ ಸ್ಲಾಬ್ನಿಂದ ಕೆಳಗೆ ನೆಲಕ್ಕೆ ಬಿದ್ದರು.

ಇದರಿಂದ ಗಂಭೀರವಾಗಿ ಗಾಯಗೊಂಡ ಅವರು, ಕೋಟೇಶ್ವರ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗುವ ದಾರಿ ಮಧ್ಯೆ ಮೃತಪಟ್ಟರು ಎಂದು ತಿಳಿದುಬಂದಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

ಆಕಸ್ಮಿಕವಾಗಿ ಬೆಂಕಿ – ಗೋಣಿ ಚೀಲ ಗೋದಾಮು ಸುಟ್ಟು ಭಸ್ಮ…!

ಉಡುಪಿಯಿಂದ ಮಹಾಕುಂಭ ಮೇಳಕ್ಕೆ ರೈಲು – ಸಂಸದ ಕೋಟ ಮನವಿ

ಶಿಕ್ಷಣತಜ್ಞ ಸೀತಾರಾಮ ಶೆಟ್ಟಿ ನಿಧನ