ರಿಕ್ಷಾ ಹಾಗೂ ಕಾರು ನಡುವೆ ಅಪಘಾತ; ರಿಕ್ಷಾ ಚಾಲಕ ಗಂಭೀರ

ವಿಟ್ಲ : ಕಾರೊಂದು ಆಟೋ ರಿಕ್ಷಾದ ಹಿಂಭಾಗಕ್ಕೆ ಡಿಕ್ಕಿ ಹೊಡೆದ ಪರಿಣಾಮ ಆಟೋ ಚಾಲಕ ಗಂಭೀರ ಗಾಯಗೊಂಡ ಘಟನೆ ಮಾಣಿ ಬಳಿಯ ಸೂರಿಕುಮೇರು ಎಂಬಲ್ಲಿ ಮಾ.14ರ ಶುಕ್ರವಾರ ನಡೆದಿದೆ.

ಕಲ್ಲಡ್ಕ ಬಳಿಯ ಆಟೋ ರಿಕ್ಷಾ ಸೂರಿಕುಮೇರು ಜಂಕ್ಷನ್ ಬಳಿ ತೆರಳುತ್ತಿದ್ದ ವೇಳೆ ಹಿಂಭಾಗದಿಂದ ಬಂದ ಕಾರು ಡಿಕ್ಕಿಯಾಗಿದೆ. ಘಟನೆಯಿಂದಾಗಿ ಆಟೋರಿಕ್ಷಾ ಚಾಲಕ ಗಂಭೀರ ಗಾಯಗೊಂಡಿದ್ದು, ಕೂಡಲೇ ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತ ಪರಿಣಾಮ ಆಟೋ ರಿಕ್ಷಾ ಸಂಪೂರ್ಣ ನಜ್ಜುಗುಜ್ಜಾಗಿದೆ.

ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದಾರೆ.

Related posts

ಸಿಪಿಎಂ ಕಾರ್ಯದರ್ಶಿ ಮೇಲೆ ದುರುದ್ದೇಶಪೂರಿತ ಎಫ್ಐಆರ್ – ಖಂಡನೆ

ಪೊಲೀಸ್ ವೃತ್ತ ನಿರೀಕ್ಷಕ ನಂಜಪ್ಪ ಎನ್ ನಿಧನ; ಸರಕಾರಿ ಗೌರವಗಳೊಂದಿಗೆ ಅಂತಿಮ ನಮನ

ಚೂರಿಯಿಂದ ಇರಿದು ವ್ಯಕ್ತಿಯ ಕೊಲೆ, ಇಬ್ಬರು ಪುತ್ರರಿಗೆ ಗಾಯ; ಆರೋಪಿ ಅರೆಸ್ಟ್