ಬೈಕ್ ಕಾರು ನಡುವೆ ಅಪಘಾತ; ಬೈಕ್ ಸವಾರರಿಬ್ಬರು ಗಂಭಿರ

ಕಾರ್ಕಳ : ಕಾರ್ಕಳದ ಕುಕ್ಕುಂದೂರಿನ ಮುಖ್ಯ ರಸ್ತೆಯಲ್ಲಿ ಬೈಕ್ ಮತ್ತು ಕಾರು ನಡುವೆ ಅಪಘಾತವಾಗಿ ಬೈಕ್ ಸವಾರರಿಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಸಂಭವಿಸಿದೆ.

ಗಾಯಾಳುಗಳನ್ನು ಸ್ಥಳೀಯ ಪಂಚಾಯತ್ ಸದಸ್ಯ ಅನಿಲ್ ಹಾಗೂ ಕೆಲಸದ ನಿಮಿತ್ತ ಉಡುಪಿಗೆ ಬರುತ್ತಿದ್ದ ವಿಶುಶೆಟ್ಟಿಯವರು ತಮ್ಮ ವಾಹನದಲ್ಲಿ ಕಾರ್ಕಳದ ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಪಘಾತವಾದ ಕೂಡಲೇ ಗಾಯಾಳುಗಳನ್ನು ತುರ್ತು ಆಸ್ಪತ್ರೆಗೆ ದಾಖಲಿಸಲು ಆ ಸಮುದಲ್ಲಿ ಬಂದ ವಾಹನ ಸವಾರರು ನಿರಾಕರಿಸಿದ್ದರಿಂದ ಸ್ಥಳೀಯ ಯುವಕರು ಆಕ್ರೋಶಗೊಂಡಿದ್ದರು.

ಸಂಬಂಧಿಕರು ಕಾರ್ಕಳ ತಾಲೂಕು ಆಸ್ಪತ್ರೆಯನ್ನು ಸಂಪರ್ಕಿಸುವಂತೆ ವಿಶುಶೆಟ್ಟಿಯವರು ವಿನಂತಿಸಿದ್ದಾರೆ.

Related posts

ನೆಕ್ಲಾಜೆ ಶ್ರೀ ಕಾಳಿಕಾಂಬೆಗೆ ಸ್ವರ್ಣ ಪಾದುಕೆ ಸಮರ್ಪಣೆ

ಮೂಡುಬಿದಿರೆಯಲ್ಲಿ ಲ್ಯಾಪ್‌ ಟಾಪ್‌ ಕಳ್ಳತನ: ಅಂತರ್ ಜಿಲ್ಲಾ ಕಳ್ಳ ಅರೆಸ್ಟ್

ಶಾಸ್ತ್ರೀಪಾರ್ಕ್‌ ಫ್ಲೈಓವರ್‌ ತಳಭಾಗಕ್ಕೆ ಪೊಲೀಸ್‌ ನಿಯೋಜನೆ