ನಂತೂರು ಸರ್ಕಲ್‌ನಲ್ಲಿ ಅಪಘಾತ; ಕಂಕನಾಡಿ ಆಸ್ಪತ್ರೆಯ ಉದ್ಯೋಗಿ ಕ್ರಿಸ್ಟಿ ಕ್ರಾಸ್ತಾ ಸ್ಥಳದಲ್ಲೇ ಮೃತ್ಯು

ದಕ್ಷಿಣ ಕನ್ನಡ : ಕಂಕನಾಡಿ ಆಸ್ಪತ್ರೆಯ ಉದ್ಯೋಗಿ ಕೋಡಿಕಲ್ ನಿವಾಸಿ ಕ್ರಿಸ್ಟಿ ಕ್ರಾಸ್ತಾ(27) ತನ್ನ ದ್ವಿಚಕ್ರ ವಾಹನದಲ್ಲಿ ಮನೆ ಕಡೆ ಹೋಗುತ್ತಿದ್ದ ಸಂದರ್ಭ ನಂತೂರು ಸರ್ಕಲಲ್ಲಿ ಸ್ಕಿಡ್ ಆಗಿ ರಸ್ತೆಗೆ ಬಿದ್ದಿದ್ದಾರೆ. ಅದೇ ಸಂದರ್ಭ ಕೇರಳ ಕಡೆಗೆ ತೆರಳುತ್ತಿದ್ದ ಮೀನು ತುಂಬಿದ ಲಾರಿ ರಸ್ತೆಗೆ ಬಿದ್ದ ಕ್ರಿಸ್ಟಿ ಕ್ರಾಸ್ತಾರ ತಲೆ ಮೇಲೆಯೇ ಹರಿದ ಪರಿಣಾಮ ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ್ದಾರೆ.

ಈವರೆಗೆ ಮೂವತ್ತಕ್ಕೂ ಹೆಚ್ಚು ವಾಹನ ಸವಾರರ ಬಲಿ ಪಡೆದು ಕುಖ್ಯಾತಿ ಪಡೆದ ಮಂಗಳೂರಿನ ನಂತೂರು ಸರ್ಕಲ್ ಮತ್ತೆ ಯುವತಿಯನ್ನು ಬಲಿ ಪಡೆದಿರುವುದು ಆಡಳಿತ ವ್ಯವಸ್ಥೆಯ ವಿರುದ್ಧ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಫ್ಲೈ ಓವರ್ ವ್ಯವಸ್ಥೆ ಇಲ್ಲದಿರುವುದೇ ನಂತೂರು ಸರ್ಕಲ್‌ನಲ್ಲಿ ಅಪಘಾತ ಮರುಕಳಿಸಲು ಕಾರಣವಾಗಿದೆ. ಮೃತ ಕ್ರಿಸ್ಟಿ ಕ್ರಾಸ್ತಾ ಅವರು ತಂದೆ, ತಾಯಿ ಮತ್ತು ಸಹೋದರನನ್ನು ಅಗಲಿದ್ದು ಈ ಕುರಿತು ಕಂಕನಾಡಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

ನೇಜಾರಿನ ತಾಯಿ ಮತ್ತು ಮೂವರು ಮಕ್ಕಳ ಕೊಲೆ ಪ್ರಕರಣ – ತಮ್ಮ ವಕಾಲತ್ತನ್ನು ವಾಪಾಸು ಪಡೆದ ಆರೋಪಿ ಪ್ರವೀಣ್ ಚೌಗುಲೆ ಪರ ವಕೀಲರು

ಪ್ರೊಡಕ್ಷನ್ ನಂಬರ್ 1 ತುಳು ಸಿನಿಮಾದ ಭಾಗ 1ರ ಮುಹೂರ್ತ ಸಮಾರಂಭ